ಸಿಂಗಲ್ ಆಗಿರೋದೇ ಬೆಸ್ಟ್ ಗುರುವೇ: ಮದುವೆ ಯಾವಾಗ ಎಂದ ಕಿಚ್ಚನಿಗೆ ಡಾಲಿ ಹೇಳಿದ್ದೇನು?
ಡಾಲಿ ಧನಂಜಯ್ ಸಿನಿಮಾ ರಂಗದಲ್ಲಿ ಯಶಸ್ಸು ಕಾಣುತ್ತಿದ್ದು, ತುಂಬಾ ಬ್ಯುಸಿ ಆಗಿದ್ದಾರೆ. ಅವರ ಮದುವೆ ವಿಚಾರವಾಗಿ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದು, ಅದಕ್ಕೆ ಡಾಲಿ ಉತ್ತರಿಸಿದ್ದಾರೆ.
ಬಿಗ್ ಬಾಸ್ ಶೋಗೆ ಹೋದಾಗ ಕಿಚ್ಚ ಸುದೀಪ್, ಡಾಲಿ ಧನಂಜಯ್ ಅವರಿಗೆ ಮದುವೆ ಬಗ್ಗೆ ಕೇಳಿದ್ದಾರೆ. ಇನ್ನು ಎಷ್ಟು ವರ್ಷ? ಯಾವಾಗ ಮದುವೆ ಆಗುತ್ತೀಯಾ ಎಂದು ಕಿಚ್ಚ ಸುದೀಪ್ ಡಾಲಿಗೆ ಕೇಳಿದ್ದು, ಅದಕ್ಕೆ ಡಾಲಿ ಧನಂಜಯ್ ಸಿಂಗಲ್ ಆಗಿ ಸಂತೋಷವಾಗಿದ್ದೇನೆ ಬಿಡಿ ಗುರುವೇ ಎಂದು ಹೇಳಿದ್ದಾರೆ. ಸಿನಿಮಾ ಮಾಡಿಕೊಂಡು ಖುಷಿಯಾಗಿ ಇದ್ದೇನೆ. ಒಂಟಿ ಜೀವನವೇ ಚೆನ್ನಾಗಿದೆ ಎಂದು ಹೇಳಿದ್ದಾರೆ. ಈ ಮಾತಿಗೆ ಕಿಚ್ಚ ಸುದೀಪ್ ಒಳ್ಳೆ ಮಾತು ಹೇಳಿದ್ರಿ ಬಿಡಿ ಎಂದು ನಕ್ಕಿದ್ದಾರೆ.
BBK9 ನಾಯಿ ಪ್ರೀತಿ ಮುಂದೆ ಯಾವ ಹುಡ್ಗ-ಹುಡ್ಗಿ ಪ್ರೀತಿನೂ ನಿಲ್ಲಲ್ಲ: ಅನುಪಮಾ ಗೌಡ