ಬಿಬಿ ಮನೆಯಲ್ಲಿ ಪ್ರೀತಿಯ ಶ್ವಾನವನ್ನು ಮಿಸ್ ಮಾಡಿಕೊಂಡ ಅನುಪಮಾ ಗೌಡ. ಯಾವ ಹುಡುಗ-ಹುಡುಗಿ ಪ್ರೀತಿನೂ ಬೇಡ ಎಂದ ನಟಿ....

ಕಿರುತೆರೆ ನಟಿ ಕಮ್ ನಿರೂಪಕಿ ಅನುಪಮಾ ಗೌಡ ಎರಡನೇ ಸಲ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಸೀಸನ್ 5ರಲ್ಲಿ ಇಮ್ ಮೆಚ್ಯೂರ್ ಆಗಿದ್ದೆ ಸೀಸನ್ 9ರಲ್ಲಿ ತುಂಬಾನೇ ಬದಲಾಗಿದ್ದೀನಿ ಎಂದು ಹೇಳುತ್ತಲೇ ಪ್ರತಿಯೊಂದು ಟಾಸ್ಕ್‌ ಗೆಲ್ಲುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಗಳಿಸಿರುವ ಅನುಪಮಾ ಒಮ್ಮೆ ಬಿಬಿ ಮನೆ ಕ್ಯಾಪ್ಟನ್ ಆಗಬೇಕು ಹಾಗೂ ಈ ಸೀಸನ್‌ ಫಿನಾಲೆ ವೀಕ್‌ ತಲುಪಬೇಕು ಅನ್ನೋದು ನೆಟ್ಟಿಗರ ಆಸೆ. 

ಸೀಸನ್ 5ರಲ್ಲಿ ಬ್ರೇಕಪ್, ಫ್ಯಾಮಿಲಿ ಮತ್ತು ಹಣಕಾಸು ಅಂತ ಅನುಪಮಾ ತುಂಬಾನೇ ಡಿಸ್ಟರ್ಬ್‌ ಆಗಿದ್ದರು. ಆದರೆ ಈ ಸೀಸನ್‌ನಲ್ಲಿ ತುಂಬಾನೇ ಕಾಮ್ ಆಂಡ್ ಕಂಪೋಸ್ ಆಗಿ ಗೇಮ್ ಆರಂಭಿಸಿದ್ದಾರೆ. ಅನುಪಮಾಳ ಗುಣದಲ್ಲಿ ಇಷ್ಟೊಂದು ಬದಲಾವಣೆ ಆಗಲು ಕಾರಣ ಅವರ ಲೈಫ್‌ನಲ್ಲಿರುವ ಪ್ರಮುಖ ವ್ಯಕ್ತಿಗಳು ಮತ್ತು ಅವರ ಪ್ರೀತಿಯ ಶ್ವಾನ ಶ್ಯಾಡೋ. ಅಡುಗೆ ಮನೆಯಲ್ಲಿ ನೇಹಾ ಗೌಡ ಮತ್ತು ರೂಪೇಶ್ ಶೆಟ್ಟಿ ಜೊತೆ ಶ್ವಾನಗಳು ಹಂಚಿಕೊಳ್ಳುವ ಪ್ರೀತಿ ಬಗ್ಗೆ ಹೇಳಿದ್ದಾರೆ. 

ಅನುಪಮಾ: ಪ್ರೀತಿ ಅನ್ನೋದು ಒಂದು ಗಂಡು ಹೆಣ್ಣಲ್ಲಿ ಅಷ್ಟೆ ಅಲ್ಲ ಆ ಮಕ್ಕಳು ಕೊಡುತ್ತಾರೆ ಪ್ರೀತಿ. ಈ ಪ್ರೀತಿ ಮುಂದೆ ಯಾವ ಹುಡ್ಗ- ಹುಡ್ಗಿ ಪ್ರೀತಿನೂ ನಿಲ್ಲುವುದಿಲ್ಲ 
ನೇಹಾ: ನನ್ನ ಅನುಪಮಾಳ ಸ್ನೇಹನ್ನು ಶ್ಯಾಡೋ ರೀ-ಪ್ಲೇಸ್ ಮಾಡಿದೆ.
ಅನುಪಮಾ: ನಂದು ನಿಂದು ಸ್ನೇಹ ಬೇರೆ ನೇಹಾ ಆದರೆ ಶ್ಯಾಡೋ ಕೊಡುವುದು ನನಗೆ ಮಗನ ಪ್ರೀತಿ. ಅದಿಕ್ಕೆ ಮಯೂರಿ ಮಗನನ್ನು ನೆನಪಿಸಿಕೊಂಡು ಅಳುವಾಗ ಒಂದು ಥರ ಹಿಂದೆ ಅಯ್ತು
ರೂಪೇಶ್: ಈ ಸೀಸನ್‌ನಲ್ಲಿ ನೇಹಾ ಬರದೆ ಇದ್ದರೆ ನೀವು ಯಾರನ್ನು ಹೆಚ್ಚಿಗೆ ಮಿಸ್ ಮಾಡಿಕೊಳ್ಳುತ್ತೀರಿ.
ನೇಹಾ: ಆಗಲೂ ಶ್ಯಾಡೋನೇ ಮಿಸ್ ಮಾಡಿಕೊಳ್ಳುತ್ತಿದ್ದಳು.
ಅನುಪಮಾ: ನಿಜ ಶ್ಯಾಡೋನ ಮಿಸ್ ಮಾಡಿಕೊಳ್ಳುತ್ತೀನಿ.

BBK9 ಅನುಪಮಾ ಗೌಡ ಸ್ವಿಮ್ ಸ್ಯೂಟ್‌ ಫೋಟೋ ವೈರಲ್; ಆಟ ಈಗ ಶುರು ಎಂದ ನೆಟ್ಟಿಗರು

ಅನುಪಮಾ ಗೌಡ ಶಿಹ್ ತ್ಸು ಜಾತಿಯ ನಾಯೊಂದನ್ನು ಸಾಕಿದ್ದಾರೆ ಅದಕ್ಕೆ ಶ್ಯಾಡೋ ಅಂತ ಹೆಸರು ಇಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅನುಪಮಾ ಶ್ಯಾಡೋ ಜೊತೆಗೆ ಹೆಚ್ಚಿನ ಫೋಟೋ ಹಂಚಿಕೊಳ್ಳುತ್ತಿದ್ದಾರೆ.

ಅನುಪಮಾ: ನನಗೆ ಒಂದು ಮೆಚ್ಯೂರಿಟಿ ಲೆವೆಲ್ ಬಂದಿದೆ. ಪಾಪ ನಾಯಿಗೆ ಮಾತು ಬರುವುದಿಲ್ಲ ನನ್ನ ಕಷ್ಟ ಸಮಯದಲ್ಲಿ ಅಪಾರ ಪ್ರೀತಿ ಕೊಟ್ಟಿದ್ದಾನೆ ತುಂಬಾ ಖುಷಿ ಕೊಟ್ಟಿದ್ದಾನೆ .
ರೂಪೇಶ್: ಅನುಪಮಾ ಹೇಳುತ್ತಿರುವು ನಾಯಿ ಬಗ್ಗೆನೇ ಅಲ್ವಾ?
ನೇಹಾ: ಹೌದು!
ಅನುಪಮಾ: ಶ್ಯಾಡೋ ನನ್ನನ್ನು ಖುಷಿಯಾಗಿಡುತ್ತಾನೆ ನನಗೆ ಏನೇ ಯೊಚನೆ ಇದ್ದರೂ ಅವನ ಮುಖ ನೋಡಿದ ತಕ್ಷಣ ಎಲ್ಲರ ಮರೆತು ಹೋಗುತ್ತದೆ.

BBK9 ಕಿಚ್ಚನ ಚಪ್ಪಾಳೆ ಪಡೆದ ಅನುಪಮಾ ಗೌಡ; ತಾಳ್ಮೆ ಹೆಚ್ಚಾಗಿದೆ ಅಂದಿದಕ್ಕೆ ಕಣ್ಣೀರಿಟ್ಟ ನಟಿ

ಬಿಗ್ ಬಾಸ್ ಅನುಪಮಾ ಪರ ಇದೆ?

ಈ 16 ಮಂದಿಯಲ್ಲಿ ಟಾಪ್ 2 ಯಾರು ಆಗ್ತಾರೆ ಎಂದು ಕೇಳಿದರು. ಸ್ಪರ್ಧಿಗಳು ಒಬ್ಬರ ಹೆಸರನ್ನು ಹೇಳುತ್ತಿದ್ದರು. ಆರ್ಯವರ್ಧನ್ ಗುರೂಜಿ, ಅನುಪಮಾ ಹೆಸರು ಹೇಳಿ ಬಿಗ್ ಬಾಸ್‌ಗೂ ಅನುಪಮಾ ಒಳಗಡೆ ಬರ್ಬೇಕು ಅಂತ ಆಸೆ ಇತ್ತು ಎಂದು ಹೇಳಿದರು. ಇದರಿಂದ ಕೆರಳಿದ ಸುದೀಪ್ ಹಾಗೆಲ್ಲ ಮಾತನಾಡಬೇಡಿ ಸರ್ ಎಂದು ಹೇಳಿದರು. 'ಬಂಗಾರದ ಟಾಸ್ಕ್ ನಲ್ಲಿ ಎಷ್ಟು ಬಂಗಾರ ಇದೆ ಅಂತ ಗೊತ್ತಿದ್ದರೂ ಅನುಪಮಾನ ಒಳಗಡೆ ಕರೆಸುತ್ತಾರೆ ಅಂದರೆ ಏನು ಅರ್ಥ. ಮ್ಯಾಚ್ ಫಿಕ್ಸಿಂಗ್ ಆಗಿದೆ ಇಲ್ಲಿ' ಎಂದು ಗಂಭೀರ ಅರೋಪ ಮಾಡಿದರು. ಸುದೀಪ್ ಸ್ಪರ್ಧಿಗಳಲ್ಲಿ ನಿಮಗೆ ಹಾಗೆ ಅನಿಸಿತಾ ಎಂದು ಕೇಳಿದರು. ಸ್ಪರ್ಧಿಗಳೆಲ್ಲಾ ಇಲ್ಲ ಎಂದರು. 

ಜನರಲ್ಲಾಗಿ ನಾನು ಹೇಳಿದ್ದು ಎಂದು ಆರ್ಯವರ್ದನ್ ಮತ್ತೆ ಮಧ್ಯೆ ಮಾತಾಡಿದರು. 'ನಿಮ್ಮ ವ್ಯಕ್ತಿತ್ವದ ಮೇಲೆ ಮಾತನಾಡಿದರೆ ಇಷ್ಟು ಉದ್ದ ಮಾತನಾಡುತ್ತೀರಾ. ಈ ವೇದಿಕೆ ಮರ್ಯಾದೆ ತೆಗೆದರೆ ಸತ್ಯವಾಗಿ ಹೇಳ್ತೀನಿ, ನನಗೆ ನಿಮಗೆ ಇಲ್ಲೆ ಕೊನೆಯಾಗುತ್ತೆ' ಎಂದು ಸುದೀಪ್ ಖಡಕ್ ವಾರ್ನಿಂಗ್ ನೀಡಿದರು. ಸದ್ಯ ಇವತ್ತಿನ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋ ಈಗ ವೈರಲ್ ಆಗಿದೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.