Asianet Suvarna News Asianet Suvarna News
breaking news image

Devara movie: 'ದೇವರ'ದಲ್ಲಿ ಎನ್‌ಟಿಆರ್ ಮೆಗಾಫೈಟ್.. 10 ಸಾವಿರ ಮಂದಿ ಜೊತೆ ಹೊಡೆದಾಟ..!

ಟಾಲಿವುಡ್ ಈಗ ನೆಲ ಕಚ್ಚಿದೆ. ಥಿಯೇಟರ್‌ಗಳು ಬಂದ್ ಆಗುತ್ತಿವೆ. ಹೀಗಾಗಿ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಕರೆ ತರೋದು ಟಾಲಿವುಡ್‌ನ ಬಿಗ್ ಸ್ಟಾರ್ಗಳ ಜವಾಬ್ಧಾರಿ. ಅದಕ್ಕೆ ಹೊಸದನ್ನೇನೋ ಕೊಡಬೇಕು ಅಂತ ಟಾಲಿವುಡ್‌ನ ಸ್ಟಾರ್ ನಟರು ಸಜ್ಜಾದಂತೆ ಕಾಣುತ್ತಿದೆ. ಹೀಗಾಗಿ ನಟ ಜ್ಯೂನಿಯರ್ ಎನ್‌ಟಿಆರ್ ತನ್ನ ದೇವರ ಸಿನಿಮಾದಲ್ಲಿ ಮೆಗಾ ಫೈಟ್ ಒಂದಕ್ಕೆ ಸಜ್ಜಾಗಿದ್ದು, 10 ಸಾವಿರ ಮಂದಿ ಜೊತೆ ಹೊಡೆದಾಡುತ್ತಾರಂತೆ.

ಜೂನಿಯರ್ ಎನ್‌ಟಿಆರ್(Junior NTR) ನಟನೆಯ ‘ದೇವರ ಪಾರ್ಟ್ 1’(Devara movie) ಬಗ್ಗೆ ಭರ್ಜರಿ ನಿರೀಕ್ಷೆ ಇದೆ. ಈ ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗಲಿದೆ. ಕೊರಟಾಲ ಶಿವ ನಿರ್ದೇಶನದ ದೇವರದಲ್ಲಿ ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಹಾಗೂ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಬರೋ ನಿಧಿ ದೋಚುವ ದೃಶ್ಯದ ಚಿತ್ರೀಕರಣ ಆಗಬೇಕಿದೆ. ಈ ಸೀನ್ ನಲ್ಲಿ 10 ಸಾವಿರ ಜನ ವಿಲನ್ಗಳ ಜೊತೆ ಜೂನಿಯರ್ ಎನ್ಟಿಆರ್ ಫೈಟ್ ಮಾಡಲಿದ್ದಾರೆ. ಇಷ್ಟೊಂದು ಜನರನ್ನು ಒಟ್ಟಿಗೆ ಸೇರಿಸೋದು ಅಂದ್ರೆ ಅದು ಸಣ್ಣ ಮಾತಲ್ಲ. ಇದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದು ಕೂಡ ದೊಡ್ಡ ಚಾಲೆಂಜ್. ಇದನ್ನ ನಿರ್ದೇಶಕ ಕೊರಟಾಲ ಶಿವು ಹೇಗೆ ಚಿತ್ರೀಕರಿಸುತ್ತಾರೆ ಅನ್ನೋ ಕುತೂಹಲ ಇದೆ.ಟಾಲಿವುಡ್‌ನ ಮತ್ತೊಂದು ಇಂಟ್ರೆಸ್ಟಿಂಗ್ ಕಹಾನಿ ಈಗ ರೀವಿಲ್ ಆಗಿದೆ. ಅದು ಅಲ್ಲು ಅರ್ಜುನ್ ನಟನೆಯ ಪುಷ್ಪ2 ಸಿನಿಮಾದ ಕ್ಲೈಮ್ಯಾಕ್ಸ್ ಕಥೆ. ‘ಪುಷ್ಪ 2’(Pushpa 2 Movie) ಶೂಟಿಂಗ್ ಭರದಿಂದ ಸಾಗುತ್ತಿದೆ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ತಂಡ ಬ್ಯುಸಿ ಇದೆ. ಈ ಸಿನಿಮಾದ ನಿರ್ದೇಶಕ ಸುಕುಮಾರ್ ಹೊಸ ಐಡಿಯಾ ಮಾಡಿದ್ದು, ಎರಡೆರಡು ಕ್ಲೈಮ್ಯಾಕ್ಸ್(Two climaxes) ಶೂಟ್ ಮಾಡಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಗಳು ಫೋಟೋಗಳು ಲೀಕ್ ಆಗುತ್ತಿವೆ. 

ಇದನ್ನೂ ವೀಕ್ಷಿಸಿ:  ಚಾಮುಂಡೇಶ್ವರಿ ಆಶೀರ್ವಾದ ಪಡೆದ ಕಿಚ್ಚ? ತಾಯಿ ಸನ್ನಿಧಿಯಲ್ಲಿ ನಟನ ನೋಡಲು ಮುಗಿಬಿದ್ದ ಫ್ಯಾನ್ಸ್..!

Video Top Stories