ಈ ಬಾರಿ ದೀಪಿಕಾ ಪಡುಕೋಣೆ ಬೇಬಿ ಬಂಪಲ್ಲ, ಕೇರ್ ಟೇಕರ್ ಹುಡುಗಿ ಕಡೆ ಎಲ್ಲರ ಕಣ್ಣು!

ಈಗೀಗ ದೀಪಿಕಾ ಪಡುಕೋಣೆ ಎಲ್ಲೇ ಹೋದರೂ ಅವರ ಬೇಬಿ ಬಂಪ್ ಕಡೆ ಎಲ್ಲರ ಗಮನ ಹರಿಯುತ್ತದೆ. ಆದರೆ, ಈ ಬಾರಿ ಅವರ ಗಮನ ಸೆಳೆಯುತ್ತಿರುವುದು ಆಕೆಯ ಕೇರ್ ಟೇಕರ್.

Share this Video
  • FB
  • Linkdin
  • Whatsapp

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಫೆಬ್ರವರಿ 2024ರಲ್ಲಿ, ದೀಪಿಕಾ ಪಡುಕೋಣೆ ಮತ್ತು ಅವರ ಪತಿ ನಟ ರಣವೀರ್ ಸಿಂಗ್ ಅವರು ಪೋಷಕರಾಗಲಿರುವುದಾಗಿ ಸಾಮಾಜಿಕ ಮಾಧ್ಯಮದ ಮೂಲಕ ಜನರಿಗೆ ತಿಳಿಸಿದ್ದರು. 

ಆ ಬಳಿಕ ದೀಪಿಕಾ ಪಡುಕೋಣೆ ಎಲ್ಲೇ ಹೋದರೂ ಅವರ ಬೇಬಿ ಬಂಪ್ ಫೋಟೋ, ವಿಡಿಯೋಗಳು ಸುದ್ದಿಯಾಗುತ್ತಿವೆ. ಮಗು ಗಂಡೋ ಹೆಣ್ಣೋ, ಬೇಬಿ ಬಂಪ್ ನಿಜವೋ ಸುಳ್ಳೋ ಎಂಬೆಲ್ಲ ಚರ್ಚೆಗಳು ಜೋರಾಗಿವೆ. 

ಈ 7 ಚಿತ್ರಗಳಲ್ಲಿ ಅಭಿನಯಿಸೋಕೆ ಶಾರೂಖ್ ಖಾನ್ 1 ರೂ.ವನ್ನೂ ತೆಗೆದುಕೊಂಡಿಲ್ಲ!

ಈ ನಡುವೆ ಈ ಬಾರಿ ರೆಸ್ಟೋರೆಂಟ್‌ನಿಂದ ಹೊರ ಬರುತ್ತಿದ್ದ ದೀಪಿಕಾ ವಿಡಿಯೋದಲ್ಲಿ ಜನ ನೋಡಿದ್ದು ಬೇಬಿ ಬಂಪ್ ಅಲ್ಲ, ಬದಲಿಗೆ ಆಕೆಯ ಕೇರ್ ಟೇಕರ್. ಹೌದು, ಹದಿಹರೆಯದ ಹುಡುಗಿಯೊಬ್ಬಳು ದೀಪಿಕಾಳ ಬ್ಯಾಗ್ ಹಿಡಿದು ಜೊತೆಯಲ್ಲಿ ನಡೆದು ಬರುತ್ತಾಳೆ ಮತ್ತು ನಂತರ ದೀಪಿಕಾ ಜೊತೆ ಕಾರ್‌ನಲ್ಲಿ ಪ್ರಯಾಣಿಸುತ್ತಾಳೆ. ದೀಪಿಕಾ ಪಡುಕೋಣೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋಗೆ ಜನರು ಭಾರೀ ಕಾಮೆಂಟ್ ಮಾಡುತ್ತಿದ್ದಾರೆ.

ಈ ಹುಡುಗಿಯ ಬಗ್ಗೆ ಕೆಲವರು ಅಪ್ರಾಪ್ತ ಹುಡುಗಿಯನ್ನು ಕೆಲಸಕ್ಕಿಟ್ಟುಕೊಂಡಿದ್ದಾಳೆ ಎಂದು ಖ್ಯಾತೆ ತೆಗೆದಿದ್ದರೆ, ಹಲವರು, ಬಡ ಕುಟುಂಬದ ಹುಡುಗಿಗೆ ಕೆಲಸ ನೀಡಿ ಅವರ ಕುಟುಂಬದ ಜೀವನಕ್ಕೆ ಆಧಾರವಾಗಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

Related Video