
Dalpati Vijay: ನಟ ದಳಪತಿ ವಿಜಯ್ ದುಬಾರಿ ಕಾರು ಹೇಗಿದೆ ? ಇದರ ಬೆಲೆ ಎಷ್ಟು ಗೊತ್ತಾ ?
ನಟ ದಳಪತಿ ವಿಜಯ್ ಹೊಸ ಎಲೆಕ್ಟ್ರಿಕ್ ಕಾರು ಖರೀದಿಸಿದ್ದು, BMW ಐ7 ಎಕ್ಸ್ ಡ್ರೈವ್ 60 ಐಷಾರಾಮಿ ಕಾರು ಅವರ ಮನೆಯ ಗ್ಯಾರೇಜ್ ಸೇರಿದೆ.
ದಳಪತಿ ವಿಜಯ್ ಇತ್ತೀಚೆಗಷ್ಟೇ ಕಾರೊಂದನ್ನು ಖರೀದಿಸಿದ್ದಾರಂತೆ. ಎರಡೂವರೆ ಕೋಟಿ ರೂಪಾಯಿ ಕೊಟ್ಟು ಹೊಸ BMW ಐ7 ಕಾರು(BMW i7 X ಖರೀದಿಸಿದ್ದಾರೆ ಎನ್ನುವ ಸುದ್ದಿ ಕಾಲಿವುಡ್(Kollywood) ಅಂಗಳದಲ್ಲಿ ಹರಿದಾಡ್ತಿದೆ. ಇದು ಚಾರ್ಜ್ ಆಗಲು ಐದು ಗಂಟೆ ಬೇಕಾಗುತ್ತಂತೆ. ಸದ್ಯ ಇವರ ಕಾರಿನ ಫೋಟೋ ಈಗ ವೈರಲ್ ಆಗುತ್ತಿದೆ. ನಟ ವಿಜಯ್ ( Dalpati Vijay) ಈಗಾಗಲೇ ಕಪ್ಪು ಬಣ್ಣದ ರೋಲ್ಸ್ ರಾಯ್ಸ್ ಕಾರನ್ನು ಹೊಂದಿದ್ದಾರೆ. ವರದಿಗಳ ಪ್ರಕಾರ ಇದರ ಬೆಲೆ 5.25 ಕೋಟಿ ರೂ. ಇದೆ. ಈ ವೇಳೆ ವಿಜಯ್ ಹೊಸ ಎಲೆಕ್ಟ್ರಿಕ್ ಕಾರು ಖರೀದಿಸಿದ್ದಾರೆ. BMW ಐ7 ಎಕ್ಸ್ ಡ್ರೈವ್ 60 ಐಷಾರಾಮಿ ಕಾರು ವಿಜಯ್ ಮನೆಯ ಗ್ಯಾರೇಜ್ ಸೇರಿದೆ. ಈ ಕಾರಿನ ಬೆಲೆ 2.50 ಕೋಟಿ ರೂ. ಇದೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: Anusha ranganath: ಹಸೆಮಣೆ ಏರಿದ ಆಶಿಕಾ ರಂಗನಾಥ್ ಅಕ್ಕ ಅನುಷಾ ರಂಗನಾಥ್ !