ಮದುವೆಗೂ ಮೊದಲು ಡಾಲಿಯ ಜನ ಮೆಚ್ಚುವ ಕೆಲಸ..!

ಮದುವೆ ಸಂಭ್ರಮದ ನಡುವೆಯೇ ನಟ ಧನಂಜಯ್‌ ಸಾಮಾಜಿಕ ಕೆಲಸಗಳನ್ನು ಕೂಡ ಮಾಡ್ತಿದ್ದಾರೆ. ಅದೇನು ಅಂತ ಇಲ್ಲಿದೆ ನೋಡಿ

First Published Jan 6, 2025, 11:56 AM IST | Last Updated Jan 6, 2025, 11:56 AM IST

ಮದುವೆ ಸಂಭ್ರಮದ ನಡುವೆಯೇ ನಟ ಧನಂಜಯ್‌ ಸಾಮಾಜಿಕ ಕೆಲಸಗಳನ್ನು ಕೂಡ ಮಾಡ್ತಿದ್ದಾರೆ. ಹುಟ್ಟೂರ ಸರ್ಕಾರಿ ಶಾಲೆ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಅಗತ್ಯವಾಗಿರುವ ಮೂಲಭೂತ ಸೌಕರ್ಯ ಹಾಗೂ ಶಾಲೆಗೆ ಸುಣ್ಣ ಬಣ್ಣ ಮಾಡಿಸಿದ್ದಾರೆ. ಧನಂಜಯ್​​ರ ಈ ಸಾಮಾಜಿಕ ಕೆಲಸಕ್ಕೆ ಜನ ಮೆಚ್ಚುಗೆ ಸಿಗುತ್ತಿದೆ. ಫೆಬ್ರವರಿ 16 ರಂದು ನಟ ಧನಂಜಯ್ ಧನ್ಯತಾ ಜತೆ ಹಸೆಮಣೆ ಏರುತ್ತಿದ್ದಾರೆ.

ಕಿಯಾರಾ ಅಡ್ವಾಣಿ ಆಸ್ಪತ್ರೆಗೆ ದಾಖಲು..!
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮತ್ತು ಮಾಸ್ಟರ್ ಮೂವಿ ಮೇಕರ್ ಶಂಕರ್ ಕಾಂಬಿನೇಷನ್ ನಲ್ಲಿ ಬಿಗ್ ಬಜೆಟ್ ಸಿನಿಮಾ ‘ಗೇಮ್ ಚೇಂಜರ್’  ರಿಲೀಸ್ ಆಗಲಿದೆ. ಚಿತ್ರದ ಟ್ರೈಲರ್​ ರಿಲೀಸ್ ಆಗಿ ಸೌಂಡ್ ಮಾಡುತ್ತಿದೆ. ಇದೀಗ ಈ ಸಿನಿಮಾದ ನಟಿ ಕಿಯಾರ ಅಡ್ವಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿಯಾರಾ ಬಿಡುವಿಲ್ಲದ ಶೂಟಿಂಗ್​ನಿಂದ ಆಯಾಸಗೊಂಡಿದ್ದು ಅಸ್ವಸ್ತರಾಗಿದ್ರು. ತಕ್ಷಣ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 

ಹೊಸ ವರ್ಷದಲ್ಲಿ ಹೊಸ ಸುದ್ದಿ ಹಂಚಿಕೊಂಡ ನೀನಾಸಂ ಸತೀಶ್..!
ಅಭಿನಯ ಚತುರ ನಟ ನೀನಾಸಂ ಸತೀಶ್​​ ಹೆಬ್ಬುಲಿ ಕಟ್ ಅನ್ನೋ ಸಿನಿಮಾವನ್ನ ಮೆಚ್ಚಿ ಬೆಂಬಲಕ್ಕೆ ನಿಂತಿದ್ದಾರೆ. ಈ ಸಿನಿಮಾವನ್ನ ಸತೀಶ್​ ರವರೇ ಅರ್ಪಿಸುತ್ತಿದ್ದು, ಹೊಸ ವರ್ಷಕ್ಕೆ ಸಿನಿಮಾದ ಫಸ್ಟ್ ಲುಕ್ ರಿವಿಲ್ ಮಾಡಿದ್ದಾರೆ. ಭೀಮರಾವ್ ನಿರ್ದೇಶನ ಹೆಬ್ಬುಲಿ ಕಟ್ ಚಿತ್ರಕ್ಕಿದ್ದು, ಮೌನೇಶ್ ನಟರಂಗ ನಾಯಕನಾಗಿ ಅನನ್ಯ ನಿಹಾರಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಮೈಮೇಲೆ ಓತಿಕ್ಯಾತ ಬಿಟ್ಕೊಂಡು ನಿವೇದಿತಾ ಗೌಡ..!
ಱಪರ್ ಚಂದನ್​ ಶೆಟ್ಟಿ, ಮಾಜಿ ಪತ್ನಿ ನಿವೇದಿತಾ ಗೌಡ ಈಗ ಸಿಂಗಲ್ ಆಗಿದ್ದಾರೆ. ಹೀಗಾಗೆ ಈ ವರ್ಷ ಹೊಸ ವರ್ಷಾಚರಣೆಗೆ ನಿವೇದಿತಾ ವಿದೇಶಕ್ಕೆ ಹಾರಿದ್ದು, ವಿದೇಶದಲ್ಲಿ ಓತಿಕ್ಯಾತ ಪ್ರಭೇದಕ್ಕೆ ಸೇರಿದ ಪ್ರಾಣಿಗಳನ್ನು ಮೈಮೇಲೆ ಬಿಟ್ಟುಕೊಂಡು ಇದೇ ಲೇಸು ಎಂದು ಬರೆದುಕೊಂಡಿದ್ದಾರೆ. ನಿವೇದಿಯಾ ವೀಡಿಯೋ ಎಲ್ಲೆಲ್ಲೂ ವೈರಲ್ ಆಗುತ್ತಿದೆ.