Dhanush Divorced: 18 ವರ್ಷದ ದಾಂಪತ್ಯ, ಈಗ ತೊಂದರೆಯಾಗಿದ್ದೇನು ?

ಭಾರತೀಯ ಸಿನಿ ಜಗತ್ತು ಈಗ ವಿಚ್ಛೇದನದ ಪರ್ವದಲ್ಲಿದೆ. ತುಂಬು ಸಂಸಾರ ನಡೆಸಿ ಮಾಧರಿಯಂತಿದ್ದ ದಂಪತಿಗಳು ಕಾರಣವನ್ನ ಬಹಿರಂಗ ಪಡಿಸದೇ ತಮ್ಮ ಸಂಸಾರಕ್ಕೆ ಡಿವೋರ್ಸ್ ಸ್ಟ್ಯಾಂಪ್ ಅಂಟಿಸುತ್ತಿದ್ದಾರೆ. ಸಮಂತಾ ನಾಗಚೈತನ್ಯ, ಅಮೀರ್ ಖಾನ್ -ಕಿರಣ್ ರಾವ್ ಲೀಸ್ಟ್ಗೆ ಈಗ ಕಾಲಿವುಡ್(Kollywood) ಸೂಪರ್ ಸ್ಟಾರ್ ರಜನಿಕಾಂತ್ ಅಳಿಯನಾಗಿದ್ಧ ಧನುಷ್ ಕೂಡ ಸೇರಿಕೊಂಡಿದ್ದಾರೆ. ರಜನಿಕಾಂತ್ರ ಹಿರಿಯ ಪುತ್ರಿ ಐಶ್ವರ್ಯರನ್ನ ಮದುವೆ ಆಗಿದ್ಗ ಧನುಷ್ ಈಗ ಆ ಸಂಸಾರಕ್ಕೆ ವಿಚ್ಛೇದನ ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಭಾರತೀಯ ಸಿನಿ ಜಗತ್ತು ಈಗ ವಿಚ್ಛೇದನದ ಪರ್ವದಲ್ಲಿದೆ. ತುಂಬು ಸಂಸಾರ ನಡೆಸಿ ಮಾಧರಿಯಂತಿದ್ದ ದಂಪತಿಗಳು ಕಾರಣವನ್ನ ಬಹಿರಂಗ ಪಡಿಸದೇ ತಮ್ಮ ಸಂಸಾರಕ್ಕೆ ಡಿವೋರ್ಸ್ ಸ್ಟ್ಯಾಂಪ್ ಅಂಟಿಸುತ್ತಿದ್ದಾರೆ. ಸಮಂತಾ ನಾಗಚೈತನ್ಯ, ಅಮೀರ್ ಖಾನ್ -ಕಿರಣ್ ರಾವ್ ಲೀಸ್ಟ್ಗೆ ಈಗ ಕಾಲಿವುಡ್(Kollywood) ಸೂಪರ್ ಸ್ಟಾರ್ ರಜನಿಕಾಂತ್ ಅಳಿಯನಾಗಿದ್ಧ ಧನುಷ್ ಕೂಡ ಸೇರಿಕೊಂಡಿದ್ದಾರೆ. ರಜನಿಕಾಂತ್ರ ಹಿರಿಯ ಪುತ್ರಿ ಐಶ್ವರ್ಯರನ್ನ ಮದುವೆ ಆಗಿದ್ಗ ಧನುಷ್ ಈಗ ಆ ಸಂಸಾರಕ್ಕೆ ವಿಚ್ಛೇದನ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಚ್ಚೇದನೆಯಾದ್ರೂ ದ್ವೇಷ, ಕಿತ್ತಾಟವಿಲ್ಲ. ಇದು ನಿಜಕ್ಕೂ ಸಾಧ್ಯವಾ?

ಧನುಷ್ ಹಾಗು ರಜನಿಕಾಂತ್ ಪುತ್ರಿ ಐಶ್ವರ್ಯದ್ದು ಸುದೀರ್ಘ 18 ವರ್ಷಗಳ ಸಂಸಾರ.. ಈ ಸತಿ ಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಕ್ಕಳ ಭವಿಷ್ಯ ರೂಪಿಸೋ ಸಮಯದಲ್ಲಿ ಐಶ್ವರ್ಯಗೆ ಧನುಷ್ ಡಿವೋರ್ಸ್ಕೊಟ್ಟಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಐಶ್ವರ್ಯ ಹಾಗು ಧನುಷ್ ಬರೆದುಕೊಂಡಿದ್ದು, ಇಬ್ಬರ ಹಾದಿಗಳೂ ಪರಸ್ಪರ ಬೇರೆಯಾಗಿವೆ. ಆದ್ದರಿಂದ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ. 18 ವರ್ಷಗಳಿಂದ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಪರಸ್ಪರ ಜತೆಗಿದ್ದೆವು. ಈ ಹಾದಿಯಲ್ಲಿ ಇಬ್ಬರು ಬೆಳೆದವು, ಅರ್ಥ ಮಾಡಿಕೊಂಡೆವು ಹಾಗೂ ಹೊಂದಿಕೆಯನ್ನು ಕಲಿತೆವು. ಈಗ ಇಬ್ಬರು ಭಿನ್ನ ದಾರಿಗಳಲ್ಲಿ ನಿಂತಿದ್ದೇವೆ. ಆದ್ದರಿಂದ ನಾನು ಮತ್ತು ಐಶ್ವರ್ಯಾ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆ. ವೈಯಕ್ತಿಕವಾಗಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳು ಸಮಯ ತೆಗೆದುಕೊಳ್ಳುವೆವು’ ಎಂದು ಬರೆದಿದ್ದಾರೆ. ಅಲ್ಲದೇ ಇಬ್ಬರ ಖಾಸಗಿತನವನ್ನು ಗೌರವಿಸುವಂತೆ ಧನುಷ್ ಮನವಿ ಮಾಡಿದ್ದಾರೆ. ಆದ್ರೆ ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿ ದೂರಾಗಲು ಕಾರಣ ಏನು ಅನ್ನೋ ಸತ್ಯ ಮಾತ್ರ ಇನ್ನೂ ಬಹಿರಂಗ ಪಡಿಸಿಲ್ಲ.

Related Video