Sara Ali Khan: ಮೊಬೈಲ್‌ಗಾಗಿ ಓಡಿದ ಬಾಲಿವುಡ್ ನಟಿ ವಿಡಿಯೋ ವೈರಲ್

ಬಾಲಿವುಡ್ ನಟಿ ಸಾರಾ ಅಲಿ ಖಾನ್‌ ಅವರು ತಮ್ಮ ಮೊಬೈಲ್ ಫೋನ್ ಕಳೆದುಕೊಂಡಿದ್ದಾರೆ ಎಂಬಂತಹ ವಿಡಿಯೋವೊಂದು ವೈರಲ್  ಆಗಿದ್ದು, ಸೋಷಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿದೆ. ಹೌದು! ಮುಂಬೈನ ರೆಕಾರ್ಡಿಂಗ್ ಸ್ಟುಡಿಯೊದಿಂದ ಹೊರಗೆ ಬರುವಾಗ ಸಾರಾ ಅಲಿ ಖಾನ್ ತನ್ನ ಫೋನ್ ಅನ್ನು ಎಲ್ಲೋ ಇಟ್ಟು ಮರೆತುಬಿಟ್ಟಿದ್ದಾರೆ.

First Published Dec 6, 2021, 4:22 PM IST | Last Updated Dec 6, 2021, 4:22 PM IST

ಬಾಲಿವುಡ್ (Bollywood) ನಟಿ ಸಾರಾ ಅಲಿ ಖಾನ್‌ (Sara Ali Khan) ಅವರು ತಮ್ಮ ಮೊಬೈಲ್ ಫೋನ್ ಕಳೆದುಕೊಂಡಿದ್ದಾರೆ ಎಂಬಂತಹ ವಿಡಿಯೋವೊಂದು ವೈರಲ್  ಆಗಿದ್ದು, ಸೋಷಿಯಲ್ ಮೀಡಿಯಾ (Social media) ತುಂಬಾ ಹರಿದಾಡುತ್ತಿದೆ. ಹೌದು! ಮುಂಬೈನ ರೆಕಾರ್ಡಿಂಗ್ ಸ್ಟುಡಿಯೊದಿಂದ ಹೊರಗೆ ಬರುವಾಗ ಸಾರಾ ಅಲಿ ಖಾನ್ ತನ್ನ ಫೋನ್ ಅನ್ನು ಎಲ್ಲೋ ಇಟ್ಟು ಮರೆತುಬಿಟ್ಟಿದ್ದಾರೆ. ಫೋನ್ ಕಾಣದಾದಾಗ ನಟಿ ತುಂಬಾ ಒತ್ತಡದಲ್ಲಿ ಕಾಣಿಸಿಕೊಂಡರು. ಸಾರಾ ಕೂಡಲೇ ತನ್ನ ಫೋನ್ ಅನ್ನು ಕಂಡುಕೊಂಡಿದ್ದಾರೆ. 

Chaka chak goes viral: ಸಾರಾಳನ್ನು ನೋಡಿ ಚಕಾ ಚಕ್ ಆಂಟಿ ಅಂತಿದ್ದಾರೆ ಫ್ಯಾನ್ಸ್

ಜೊತೆಗೆ ಸಾರಾ ಅಲಿ ಖಾನ್ ತನ್ನ ಕಾರಿನಿಂದ ಇಳಿದು ನಂತರ ಸ್ಟುಡಿಯೋ ಆವರಣದೊಳಗೆ ಓಡುತ್ತಿರುವುದನ್ನು ಕಾಣಬಹುದು. ಅರೆ ನಾನು ನನ್ನ ಫೋನ್ ಕಳೆದುಕೊಂಡೆ ಎಂದು ನಟಿ ಸಾರಾ ಹೇಳುವುದು ಕೇಳಿಬರುತ್ತದೆ. ಅವರು ಸ್ವಲ್ಪ ಸಮಯದ ನಂತರ ಹಿಂತಿರುಗುತ್ತಾರೆ. ನಟಿಗೆ ಕೊನೆಗೂ ತನ್ನ ಫೋನ್ ಸಿಗುತ್ತದೆ. ನಂತರ ನಟಿ ಫೋನ್‌ನೊಂದಿಗೆ ಮರಳುತ್ತಾರೆ. ಇನ್ನು ಸಾರಾ ಅಲಿ ಖಾನ್ ಶೀಘ್ರದಲ್ಲೇ ಆನಂದ್ ಎಲ್ ರೈ ಅವರ ಅಟ್ರಾಂಗಿ ರೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment