ಅಟ್ರಾಂಗಿ ರೇ ಸಿನಿಮಾದ ಚಕಾ ಚಕ್(Chaka chak) ಸಾಂಗ್ ಸಖತ್ ಹಿಟ್ ಆಗಿದೆ. ಹಾಡು ವೈರಲ್ ಆಗ್ತಿದ್ದಂತೆ ನಟಿಯನ್ನು ಫ್ಯಾನ್ಸ್ ಚಕಾ ಚಕ್ ಆಂಟಿ ಎನ್ನುತ್ತಿದ್ದಾರೆ.

ಸಾರಾ ಅಲಿ ಖನ್‌ನನ್ನು ಅಭಿಮಾನಿಗಳು ಚಕಾ ಚಕ್ ಆಂಟಿ ಅಂತ ಕರೀತಿದ್ದಾರೆ. ಹೌದು. ಸೌತ್ ಇಂಡಿಯನ್ ಸ್ಟೈಲ್ ಸಾಂಗ್‌ನಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್ ಹಾಗೂ ಧನುಷ್ ಸಾಂಗ್ ನಿಜಕ್ಕೂ ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿದೆ. ಚಕಾ ಚಕ್ ಸಾಂಗ್‌ಗೆ ಸೀರೆಯುಟ್ಟು ಡ್ಯಾನ್ಸ್ ಮಾಡಿರೋ ಸಾರಾ ಡ್ಯಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಾಲಿವುಡ್ ಬಹುನಿರೀಕ್ಷಿತ ಸಿನಿಮಾ ಅಟ್ರಾಂಗಿ ರೇ ಸಖತ್ ಸದ್ದು ಮಾಡುತ್ತಿದೆ. ಸಾರಾ ಅಲಿ ಖಾನ್, ಅಕ್ಷಯ್ ಕುಮಾರ್, ಧನುಷ್ ಮುಖ್ಯ ಪಾತ್ರಗಳಲ್ಲಿ ನಟಿಸಿರೋ ಸಿನಿಮಾದ ಹಾಡು ರಿಲೀಸ್ ಆಗಿದೆ. ಚಕಾ ಚಕ್ ಸಾಂತ್ ಸೌತ್‌ನಲ್ಲೂ ಈಗ ಟ್ರೆಂಡ್ ಆಗಿದ್ದು ಸಾರಾ ಸ್ಟೆಪ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

"

ಸಾರಾ ಅಲಿ ಖಾನ್ ಅವರು ನೇರವಾಗಿ ಮಾತನಾಡುತ್ತಾರೆ. ನಮಸ್ತೆ ಎನ್ನುವ ಮೂಲಕ ಪಪ್ಪಾರಾಜಿಗಳ ಜೊತೆ ಕೂಲ್ ಕಾಮ್ ಆಗಿರುವ ನಟಿ ಸದ್ಯ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಧನುಷ್ ಮತ್ತು ಅಕ್ಷಯ್ ಕುಮಾರ್ ಸಹ-ನಟರಾದ ಆನಂದ್ ಎಲ್ ರೈ ಅವರ ಅಟ್ರಾಂಗಿ ರೇ ಅವರ ಮುಂದಿನ ಬಿಡುಗಡೆಗೆ ಸಜ್ಜಾಗುತ್ತಿರುವಂತೆ, ಅವರು ಅದರ ಪ್ರಚಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Atrangi Re song out: ಸಖತ್‌ ಆಗಿ ಸ್ಟೆಪ್ಸ್ ಹಾಕಿದ್ದಾರೆ ಸಾರಾ!

ಅಭಿಮಾನಿಗಳು ಸಾಂಗ್ ನೋಡಿ ಚಕಾ ಚಕ್ ಆಂಟಿ ಎಂದು ಸಾರಾ ಅವರನ್ನು ಕರೆಯುತ್ತಿದ್ದಾರೆ. ಹೌದು. ಇನ್ನೂ ಯಂಗ್ ನಟಿಯನ್ನು ಆಂಟಿ ಎಂದು ಕರೆಯುತ್ತಿರುವುದು ನಟಿಗೆ ಬೇಸರವಾಗಿಲ್ಲವೇ ? ಇದರ ಬಗ್ಗೆ ಸಾರಾ ಸ್ವತಃ ಪ್ರತಿಕ್ರಿಯಿಸಿದ್ದಾರೆ. ನಟಿ ಇದರ ಬಗ್ಗೆ ಏನು ಹೇಳಿದ್ದಾರೆ ? ಆಂಟಿ ಎಂದು ಕರೆಸಿಕೊಳ್ಳುತ್ತಿರುವ ಬಗ್ಗೆ ಬಾಲಿವುಡ್ ಸ್ಟಾರ್ ನಟಿ ರಿಯಾಕ್ಷನ್ ಏನು ? ಇದನ್ನು ಹೇಗೆ ತೆಗೆದುಕೊಳ್ಳುತ್ತಾರೆ ? ಅವರ ಮಾತುಗಳಿಲ್ಲಿವೆ.

View post on Instagram

ಅಟ್ರಾಂಗಿ ರೇ ಅವರ ಚಕಾ ಚಕ್‌ನಲ್ಲಿ ನಟಿಯ ಸಿಂಗಲ್ ಡ್ಯಾನ್ಸ್‌ ಬಗ್ಗೆ ಪ್ರತಿಕ್ರಿಯಿಸಿ ನಟಿ, ನನಗೆ ಆನಂದ್ ಜೀ ಅವರ ಸಿನಿಮಾದಲ್ಲಿ ನಟಿಸಿದರೆ ಅದೇ ಸಾಕಿತ್ತು. ಅವರು ನನಗೆ ಒಂದು ಸೋಲೋ ಸಾಂಗ್ ಕೊಟ್ಟಿದ್ದಾರೆ. ಸಿನಿಮಾಗಾಗಿ ನಾನು ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ.

View post on Instagram
View post on Instagram