ಜ್ಯೂ.ಎನ್‌ಟಿಆರ್ ಕಟೌಟ್‌ಗೆ ಮೇಕೆ ರಕ್ತದಿಂದ ಅಭಿಷೇಕ: 9 ಜನ ಅಭಿಮಾನಿಗಳು ಅಂದರ್!

ಸಿನಿಮಾ ನಟರ ಮೇಲೆ ಅಭಿಮಾನ ಇರಬೇಕು. ಆದ್ರೆ ಆ ಅಭಿಮಾನ ಅತಿರೇಕಕ್ಕೆ ಹೋಗಬಾರದು. ಅತಿರೇಕ್ಕೆ ಹೋದ್ರೆ ಏನಾಗುತ್ತೆ ಟಾಲಿವುಡ್ ನಟ ಜ್ಯೂನಿಯರ್ ಎನ್‌ಟಿಆರ್ ಅಭಿಮಾನಿಗಳು ಸಾಕ್ಷಿಯಾಗಿ ಸಿಕ್ಕಿದ್ದಾರೆ.

First Published May 26, 2023, 11:33 AM IST | Last Updated May 26, 2023, 11:33 AM IST

ಸಿನಿಮಾ ನಟರ ಮೇಲೆ ಅಭಿಮಾನ ಇರಬೇಕು. ಆದ್ರೆ ಆ ಅಭಿಮಾನ ಅತಿರೇಕಕ್ಕೆ ಹೋಗಬಾರದು. ಅತಿರೇಕ್ಕೆ ಹೋದ್ರೆ ಏನಾಗುತ್ತೆ ಟಾಲಿವುಡ್ ನಟ ಜ್ಯೂನಿಯರ್ ಎನ್‌ಟಿಆರ್ ಅಭಿಮಾನಿಗಳು ಸಾಕ್ಷಿಯಾಗಿ ಸಿಕ್ಕಿದ್ದಾರೆ. ಯಾರೇ ಸ್ಟಾರ್ಸ್ ಆಗಿರಲಿ ಅವರ ಹುಟ್ಟುಹಬ್ಬ ಬಂದ್ರೆ ಹೂವಿನ ಹಾರ, ಹಾಲಿನ ಅಭಿಷೇಕ ಕೇಕ್ ಕಟ್ ಮಾಡೋದನ್ನ ನೋಡಿದ್ದೇವೆ. ಆದ್ರೆ ಜ್ಯೂ,ಎನ್ಟಿಆರ್ ಫ್ಯಾನ್ಸ್ ಹಾಗಲ್ಲ. ಇವರದ್ದು ಒಂದ್ ತರಾ ಅತಿರೇಕದ ಅಭಿಮಾನ. ಅದ್ ಹೇಗೆ ಗೊತ್ತಾ.? ಜ್ಯೂನಿಯರ್ ಎನ್.ಟಿ. ಆರ್ ಮೊನ್ನೆಯಷ್ಟೇ ತಮ್ಮ 40ನೇ ಹುಟ್ಟುಹಬ್ಬ ಆಚರಿಸಿದ್ದಾರೆ. ನೆಚ್ಚಿನ ನಟನ ಜನ್ಮದಿನವನ್ನ ಫ್ಯಾನ್ಸ್ ಕೂಡ ನಾನಾ ರೀತಿ ಸೆಲೆಬ್ರೇಟ್ ಮಾಡಿದ್ದಾರೆ. ಆದ್ರೆ ಕರ್ನಾಟಕದ ಕೆಜಿಎಫ್ ಸಮೀಪದ ರಾಬರ್ಟ್ ಸನ್ ಪೇಟ್ ನ ಥಿಯೇಟರ್ನಲ್ಲಿ ಜ್ಯೂ,ಎನ್ಟಿಆರ್ ಕಟೌಟ್‌ಗೆ ಎರಡು ಕುರಿಗಳನ್ನ ಕಡಿದು ರಕ್ತಾಭಿಷೇಕ ಮಾಡಿದ್ದಾರೆ. ಈ ವೀಡಿಯೋಗಳು ಹೊರ ಬರುತ್ತಿದ್ದಂತೆ. ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿ ಬಲಿ ಕೊಟ್ಟಿದ್ದಕ್ಕೆ ಜ್ಯೂಎನ್ಟಿಆರ್ ಒಂಭತ್ತು ಜನ ಅಭಿಮಾನಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಅದಕ್ಕೆ ಹೇಳಿದ್ದು, ಅಭಿಮಾನ ಅತಿರೇಕಕ್ಕೆ ಹೋಗ್ಬಾರ್ದು ಅಂತ.