ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿದ್ದೇ ತಪ್ಪಾಯ್ತು: ಶಾರುಕ್ ಖಾನ್ 'ಪಠಾಣ್'ಗೆ ಬಾಯ್ಕಾಟ್ ಬಿಸಿ!

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್‌ಗೂ ಟೈಂ ಕೆಟ್ಟಿದೆ. ಕಿಂಗ್ ಖಾನ್‌ರ ಪಠಾಣ್ ಸಿನಿಮಾಗೂ ಬಾಯ್ ಕಾಟ್ ಬಿಸಿ ತಟ್ಟೋಕೆ ಶುರುವಾಗಿದೆ. ಪಠಾಣ್ ಬಾಯ್ಕಾಟ್‌ಗೆ ಬರೀ ಶಾರುಖ್ ಖಾನ್ ಮಾತ್ರ ಕಾರಣ ಅಲ್ಲ ದೀಪಿಕಾ ಪಡುಕೋಣೆ ಪಾತ್ರವೂ ಇಲ್ಲಿದೆ. 

Share this Video
  • FB
  • Linkdin
  • Whatsapp

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್‌ಗೂ ಟೈಂ ಕೆಟ್ಟಿದೆ. ಕಿಂಗ್ ಖಾನ್‌ರ ಪಠಾಣ್ ಸಿನಿಮಾಗೂ ಬಾಯ್ ಕಾಟ್ ಬಿಸಿ ತಟ್ಟೋಕೆ ಶುರುವಾಗಿದೆ. ಪಠಾಣ್ ಬಾಯ್ಕಾಟ್‌ಗೆ ಬರೀ ಶಾರುಖ್ ಖಾನ್ ಮಾತ್ರ ಕಾರಣ ಅಲ್ಲ ದೀಪಿಕಾ ಪಡುಕೋಣೆ ಪಾತ್ರವೂ ಇಲ್ಲಿದೆ. ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ಶಾರುಖ್ ಹಾಗು ದೀಪಿಕಾ ರೊಮ್ಯಾಂಟಿಕ್ ಆಗಿ ನಟಿಸಿದ್ದೂ. ದೀಪಿಕಾ ತೊಟ್ಟಿರೋ ಬಿಕಿನಿ ಕೂಡ ಪಠಾಣ್ ಸಿನಿಮಾ ಬಾಯ್ಕಾಟ್ ಅಭಿಯಾನಕ್ಕೆ ತುಪ್ಪ ಸುರಿದಿದೆ. ಪಠಾಣ್ ಸಿನಿಮಾದ ‘ಬೇಷರಂ ರಂಗ್..’ ಹಾಡು ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಎರಡೇ ದಿನದಲ್ಲಿ 3 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಾಣುವ ಮೂಲಕ ಸೂಪರ್ ಹಿಟ್ ಆಗಿದೆ. ಆದ್ರೆ ಕೆಲವರು ‘ಬೇಷರಂ ರಂಗ್’ ಹಾಡಿನ ಬಗ್ಗೆ ತಕರಾರು ತೆಗೆದಿದ್ದಾರೆ. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಧರಿಸಿದ ಬಿಕಿನಿ ಕೇಸರಿ ಬಣ್ಣದ್ದು, ಪಠಾಣ್ ಸಿನಿಮಾ ಬಾಯ್ ಕಾಟ್ ಮಾಡಬೇಕು ಅಂತ ಅಭಿಯಾನ ಶುರುಮಾಡಿದ್ದಾರೆ. ಇದು ಹೀಗೆ ಮುಂದುವರೆದ್ರೆ ‘ಪಠಾಣ್’ ಬಾಕ್ಸ್ ಆಫೀಸ್ ಮುಗ್ಗರಿಸಿದ್ರು ಆಶ್ಚರ್ಯ ಇಲ್ಲ. 

Add Asianetnews Kannada as a Preferred SourcegooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Related Video