Katrina Kaif: ಕಾಸ್ಟ್ಲಿ ಕ್ವೀನ್ ಕತ್ರಿನಾ ಆಸ್ತಿ ಮೌಲ್ಯ ತಿಳಿದರೆ ನೀವು ದಿಗ್ಭ್ರಮೆಗೊಳ್ಳುತ್ತೀರಾ!

ಬಾಲಿವುಡ್ ಸಿನಿರಂಗದಲ್ಲಿ ಸಖತ್ ಸುದ್ದಿಯಾಗಿರುವುದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅದ್ಧೂರಿ ಮದುವೆ. ಈ ಸಂದರ್ಭದಲ್ಲಿ  ಹೊಸ ಸುದ್ದಿಯೊಂದು ವೈರಲ್ ಆಗಿದೆ.  ಬಾಲಿವುಡ್‌ನಲ್ಲಿ ನಟಿಯರು ತನಗಿಂತ ವಯಸ್ಸಿನಲ್ಲಿ ಕಿರಿಯರಾಗಿರುವ ಹುಡುಗರನ್ನು ಮದುವೆ ಆಗುತ್ತಿರುವುದು ಇದೀಗ ಟ್ರೆಂಡ್ ಆಗಿದೆ.
 

Share this Video
  • FB
  • Linkdin
  • Whatsapp

ಬಾಲಿವುಡ್ (Bollywood) ಸಿನಿರಂಗದಲ್ಲಿ ಸಖತ್ ಸುದ್ದಿಯಾಗಿರುವುದು ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಅದ್ಧೂರಿ ಮದುವೆ. ಈ ಸಂದರ್ಭದಲ್ಲಿ ಹೊಸ ಸುದ್ದಿಯೊಂದು ವೈರಲ್ (Viral) ಆಗಿದೆ. ಬಾಲಿವುಡ್‌ನಲ್ಲಿ ನಟಿಯರು ತನಗಿಂತ ವಯಸ್ಸಿನಲ್ಲಿ ಕಿರಿಯರಾಗಿರುವ ಹುಡುಗರನ್ನು ಮದುವೆ ಆಗುತ್ತಿರುವುದು ಇದೀಗ ಟ್ರೆಂಡ್ ಆಗಿದ್ದು, ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ನಡುವೆ ವಯಸ್ಸಿನ ಅಂತರವಿದೆ. ವಿಶೇಷವಾಗಿ ಸಾವಿರಾರು ಕೋಟಿ ಆಸ್ತಿ ಕತ್ರಿನಾ ಬಳಿ ಇದೆ ಹಾಗಾಗಿ ವಿಕ್ಕಿ ಅವರ ಹಿಂದೆ ಬಿದ್ದಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Vicky-Katrina Wedding: ಯಾವಾಗ ಹಸೆಮಣೆ ಏರುತ್ತೇ ಈ ಜೋಡಿ?

ಇನ್ನು ದೀಪಾವಳಿ (Diwali) ದಿನದಂದು ಕತ್ರಿನಾ ಮತ್ತು ವಿಕ್ಕಿ ಪ್ರೈವೇಟ್ ಆಗಿ ಎಂಗೇಜ್ ಆಗಿದ್ದರು ಎನ್ನಲಾಗಿದೆ. ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯದಂತೆ ಮದುವೆ ನಡೆಯಲಿದೆ ಎನ್ನಲಾಗಿದೆ. ಕತ್ರಿನಾ ಮತ್ತು ವಿಕ್ಕಿ ಮದುವೆ ಬಗ್ಗೆ ದಿನಕ್ಕೊಂದು ಹೊಸ ಸುದ್ದಿಗಳು ಹೊರ ಬರುತ್ತಿದೆ. ಇಂದು ರಿವೀಲ್ ಆಗಿರುವ ಮಾಹಿತಿ ಪ್ರಕಾರ ಕತ್ರಿನಾ ಮದುವೆ ಆದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆ ಎನ್ನಲಾಗಿದೆ. ಆದರೆ ಮದುವೆ ದಿನಾಂಕ ಬಗ್ಗೆ, ಜನರ ಬಗ್ಗೆ ಯಾವ ಮಾಹಿತಿಯೂ ರಿವೀಲ್ ಮಾಡಿಲ್ಲ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video