Asianet Suvarna News Asianet Suvarna News

34 ವರ್ಷಗಳ ಹಿಂದೆ ಐಶ್ವರ್ಯ ರೈ ಹೇಗಿದ್ರು ? ವಿಶ್ವ ಸುಂದರಿಯ ಹಳೇ ಫೋಟೋಗಳು ವೈರಲ್!

ಐಶ್ವರ್ಯ ರೈ (Aishwarya Rai) ಬಾಲಿವುಡ್‌ನ ಸೌಂದರ್ಯ ದೇವತೆ. ತನ್ನ ಬ್ಯೂಟಿಯಿಂದ ವಿಶ್ವದಾದ್ಯಂತ ಫೇಮಸ್ ಆದ ವಿಶ್ವ ಸುಂದರಿ. ಕಳೆದ 25 ವರ್ಷದಿಂದ ಬಾಲಿವುಡ್‌ನಲ್ಲಿ ಮಿಂಚುತ್ತಿರೋ ಐಶ್ವರ್ಯ ರೈ ಅಂದಿನಿಂದ ಇಂದಿನ ವರೆಗೂ ತನ್ನ ಬ್ಯೂಟಿಯನ್ನ ಹಾಗೇ ಕಾಪಾಡಿಕೊಂಡು ಬಂದಿದ್ದಾರೆ. 

ಐಶ್ವರ್ಯ ರೈ (Aishwarya Rai) ಬಾಲಿವುಡ್‌ನ ಸೌಂದರ್ಯ ದೇವತೆ. ತನ್ನ ಬ್ಯೂಟಿಯಿಂದ ವಿಶ್ವದಾದ್ಯಂತ ಫೇಮಸ್ ಆದ ವಿಶ್ವ ಸುಂದರಿ. ಕಳೆದ 25 ವರ್ಷದಿಂದ ಬಾಲಿವುಡ್‌ನಲ್ಲಿ ಮಿಂಚುತ್ತಿರೋ ಐಶ್ವರ್ಯ ರೈ ಅಂದಿನಿಂದ ಇಂದಿನ ವರೆಗೂ ತನ್ನ ಬ್ಯೂಟಿಯನ್ನ ಹಾಗೇ ಕಾಪಾಡಿಕೊಂಡು ಬಂದಿದ್ದಾರೆ.ಈಗ ಈ ಬಾಲಿವುಡ್ ದೀವಾ ಹಳೆ ಫೋಟೋಗಳು ರಿವೀಲ್ ಆಗಿವೆ. ಅದು ಕೂಡ ಐಶ್ವರ್ಯರ 34 ವರ್ಷಗಳ ಹಿಂದಿನ ಫೋಟೋಗಳು.

ಐಶ್ವರ್ಯಾ ರೈ ಮೊಟ್ಟ ಮೊದಲು ಕ್ಯಾಮೆರಾಗೆ ಪೋಸ್ ನೀಡಿದ ಫೋಟೋ ವೈರಲ್, ಮೊದಲ ಸಂಭಾವನೆ ಎಷ್ಟು ಗೊತ್ತಾ?

ಕೆಲ ದಿನಗಳ ಹಿಂದಷ್ಟೆ ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ  (Fil Festival) ಐಶ್ವರ್ಯಾ ರೈ ಅದ್ಭುತವಾಗಿ ಕಾಣಿಸಿಕೊಂಡಿದ್ರು. ತನ್ನ ಉಡುಗೆ, ಸ್ಟೈಲ್ ನಿಂದ ಕಂಗೊಳಿಸಿದ್ದ ಐಶು ಲುಕ್ ವಾವ್ಹ್ ಅನ್ನುವ ಹಾಕಿತ್ತು. ಈಗ ಈ ಚೆಲುವೆ ಮಾಡೆಲಿಂಗ್ ದಿನಗಳಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದ ಫೋಟೋಗಳು ಹೊರ ಬಂದಿದ್ದು, ಸಾಮಾಜಿಕ ಜಾಲತಾಣದ (Social Media) ಹಾಟ್ ಟಾಪಿಕ್ ಆಗಿವೆ. 

ಅಂದಹಾಗೆ ಈ ಎಲ್ಲಾ ಫೋಟೋಗಳು 1992ರ ಮೊದಲು ಕ್ಲಿಕ್ಕಿಸಿದ ಫೋಟೋ ಆಲ್ಬಂ. 1994ರಲ್ಲಿ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಳ್ಳುವ ಮೊದಲು ಮಾಡೆಲಿಂಗ್ ನಲ್ಲಿ ಐಶ್ ಮಿಂಚಿದ್ರು. ಐಶುಗೆ 18 ವರ್ಷ ವಯಸ್ಸಾಗಿದ್ದಾಗ ಈ ರೀತಿ ಕ್ಯಾಮರಾ ಮುಂದೆ ಪೋಸ್ ನೀಡಿದ್ರು. ಅದು ಕೃಪಾ ಕ್ರಿಯೇಷನ್ಸ್‌ನ ಕ್ಯಾಟ್ಲಾಗ್ ಶೂಟ್ ಆಗಿದ್ದು, ಐಶ್ವರ್ಯಾ ತನ್ನ ವೃತ್ತಿ ಜೀವನದ ಮೊದಲ ಶೂಟ್ ಈ ಫೋಟೋಗಳು ಅಂತ ಹೇಳಲಾಗ್ತಿದೆ.