- Home
- Entertainment
- Cine World
- ಐಶ್ವರ್ಯಾ ರೈ ಮೊಟ್ಟ ಮೊದಲು ಕ್ಯಾಮರಾಗೆ ಪೋಸ್ ನೀಡಿದ ಫೋಟೋಗಳು ವೈರಲ್; ಮೊದಲ ಸಂಭಾವನೆ ಎಷ್ಟು ಗೊತ್ತಾ?
ಐಶ್ವರ್ಯಾ ರೈ ಮೊಟ್ಟ ಮೊದಲು ಕ್ಯಾಮರಾಗೆ ಪೋಸ್ ನೀಡಿದ ಫೋಟೋಗಳು ವೈರಲ್; ಮೊದಲ ಸಂಭಾವನೆ ಎಷ್ಟು ಗೊತ್ತಾ?
ಈ ಬಾರಿ ಕಾನ್ಸ್ ನಲ್ಲಿ ಐಶ್ವರ್ಯಾ ರೈ ಅದ್ಭುತವಾಗಿ ಕಾಣಿಸಿಕೊಳ್ಳುವ ಜೊತೆಗೆ ಕೆಲವು ಉಡುಗೆ, ಸ್ಟೈಲ್ ನಿಂದ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದರು. ಈ ನಡುವೆ ಐಶ್ವರ್ಯಾ ಅವರ ಹಳೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಾಡಲಿಂಗ್ ದಿನಗಳಲ್ಲಿ ಕ್ಯಾಮರಾಗೆ ಪೋಸ್ ನೀಡಿದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಬಾಲಿವುಡ್ ಸ್ಟಾರ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಸದ್ಯ ಕಾನ್ಸ್ ಫಿಲ್ಮ್ ಫೆಸ್ಟಿವಲ್ ಮುಗಿಸಿ ಭಾರತಕ್ಕೆ ವಾಪಾಸ್ ಆಗಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ವಿಶ್ವದ ಗಮನ ಸೆಳೆದಿದ್ದ ಐಶ್ವರ್ಯಾ ಭಾರತಕ್ಕೆ ವಾಪಾಸ್ ಆಗಿರುವ ಫೋಟೋಗಳು ವೈರಲ್ ಆಗಿವೆ. ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಜೊತೆ ಐಶ್ವರ್ಯಾ ಕಾನ್ಸ್ ನಿಂದ ಭಾರತಕ್ಕೆ ಮರಳಿದ್ದಾರೆ.
ಈ ಬಾರಿ ಕಾನ್ಸ್ ನಲ್ಲಿ ಐಶ್ವರ್ಯಾ ರೈ ಅದ್ಭುತವಾಗಿ ಕಾಣಿಸಿಕೊಳ್ಳುವ ಜೊತೆಗೆ ಕೆಲವು ಉಡುಗೆ, ಸ್ಟೈಲ್ ನಿಂದ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದರು. ಈ ನಡುವೆ ಐಶ್ವರ್ಯಾ ಅವರ ಹಳೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಾಡಲಿಂಗ್ ದಿನಗಳಲ್ಲಿ ಕ್ಯಾಮರಾಗೆ ಪೋಸ್ ನೀಡಿದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಅಂದಹಾಗೆ ಈ ಎಲ್ಲಾ ಫೋಟೋಗಳು 1992ರ ಮೊದಲು ಕ್ಲಿಕ್ಕಿಸಿದ ಫೋಟೋಗಳು. 1994ರಲ್ಲಿ ವಿಶ್ವಸುಂದರಿ ಪಟ್ಟ ಮುಡಿಗೇರಿಸಿಕೊಳ್ಳುವ ಮೊದಲು ಮಾಡಲಿಂಗ್ ನಲ್ಲಿ ಮಿಂಚಿದ ಫೋಟೋಗಳಾಗಿವೆ. ಅಂದಹಾಗೆ ಐಶ್ವರ್ಯಾ ಮಾಡೆಲಿಂಗ್ ಮಾಡಲು 1992ರಲ್ಲಿ 1500 ರೂಪಾಯಿ ಪಡೆದಿದ್ದರು.
ಐಶ್ವರ್ಯಾ ಮೊದಲು 18 ವರ್ಷದವರಾಗಿದ್ದಾಗ ಕ್ಯಾಮರಾ ಮುಂದೆ ಪೋಸ್ ನೀಡಿದ್ದರು. ಅದು ಕೃಪಾ ಕ್ರಿಯೇಷನ್ಸ್‌ನ ಕ್ಯಾಟಲಾಗ್ ಶೂಟ್ ಆಗಿತ್ತು. ಐಶ್ವರ್ಯಾ ತನ್ನ ವೃತ್ತಿ ಜೀವನದ ಮೊದಲ ಶೂಟ್ ಆಗಿದೆ.
ಅಂದಹಾಗೆ ಐಶ್ವರ್ಯಾ ರೈ ಅವರ ಮೊದಲ ಮಾಡೆಲಿಂಗ್ ಫೋಟೋಗಳನ್ನು ವಿಮಲ್ ಉಪಾಧ್ಯಾಯ ಎಂಬ ಟ್ವಿಟ್ಟರ್ ಬಳಕೆದಾರರು ಶೇರ್ ಮಾಡಿದ್ದಾರೆ. ಐಶ್ವರ್ಯಾ ರೈ ಮೊದಲ ಸಂಬಳ ಮತ್ತು ಫೋಟೋಗಳು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿವೆ.
ಅಂದಹಾಗೆ ಅಂದು ಐಶ್ವರ್ಯಾ ರೈ ಪೋಸ್ ನೀಡಿದ್ದ ಫ್ಯಾಷನ್ ಕ್ಯಾಟಲಾಗ್‌ನ 30ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ಐಶ್ವರ್ಯಾ ರೈ ಅವರ ಫೋಟೋಗಳನ್ನು ಶೇರ್ ಮಾಡಿ ನೆನಪು ಮಾಡಿಕೊಂಡಿದ್ದಾರೆ.
ಐಶ್ವರ್ಯಾ ರೈ ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುತ್ತಿರುವ ಐಶ್ವರ್ಯಾ ತನ್ನನ್ನು ಮೊದಲ ಸಿನಿಮಾರಂಗಕ್ಕೆ ಪರಿಚಯಿಸಿದ ಮಣಿರತ್ನಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಬಿಡುಗಡೆಗೆ ಕಾಯುತ್ತಿದ್ದಾರೆ.