ಕಿರುತೆರೆಯಲ್ಲಿ ಹೊಸ ದಾಖಲೆ: ಕಾಂತಾರ ಸಿನಿಮಾಗೆ 15.8 ಟಿವಿಆರ್ ರೇಟಿಂಗ್
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾಗೆ ಕಿರುತೆರೆ ಮನೆ ಮಂದಿ ಮನ ಸೋತಿದ್ದು, ಟಿವಿಯಲ್ಲೂ ಕಾಂತಾರ ಸೂಪರ್ ಹಿಟ್ ಆಗಿದೆ.
ಭಾರತೀಯ ಸಿನಿ ಜಗತ್ತಲ್ಲಿ ಹಲವು ಇತಿಹಾಸ ಸೃಷ್ಟಿಸಿದ ಕಾಂತಾರ, ಇದೀಗ ಕಿರುತೆಯಲ್ಲಿ ದಾಖಲೆ ಬರೆದಿದೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ 'ಕಾಂತಾರ' ಅತೀ ಹೆಚ್ಚು ರೇಟಿಂಗ್ ಗಳಿಸುವ ಮೂಲಕ ತನ್ನ ಹೆಸರಲ್ಲಿ ಕೊನೆಯದಾಗಿ ಉಳಿದಿದ್ದ ಒಂದೇ ಒಂದು ರೆಕಾರ್ಡ್'ನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅಭಿನಯದ ಕಾಂತಾರ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಕಿರುತೆರೆಯಲ್ಲಿ ಬಿಡುಗಡೆ ಆಗಿತ್ತು. ಕಿರುತೆರೆಯಲ್ಲಿ ಬರೋಬ್ಬರಿ 15.8 TVR ರೇಟಿಂಗ್ ಪಡೆದಿರೋ ಕಾಂತಾರ ಇದುವರೆಗೂ ಯಾವ ಸಿನಿಮಾವೂ ಮಾಡದ ದಾಖಲೆಯನ್ನ ಸ್ಮಾಲ್ ಸ್ಕ್ರೀನ್'ನಲ್ಲಿ ಗೀಚಿದೆ. ಈ ಮೂಲಕ ಶೆಟ್ರು ಖದರ್ ಕಿರುತೆರೆಯಲ್ಲೂ ಹೆಚ್ಚಾಗಿದೆ.