ರಣ್ವೀರ್ ಅನಿಮಲ್ ಅವತಾರ ಹೇಗಿದೆ ನೋಡಿ..? ತಂದೆ ಮಗನ ಸೆಂಟಿಮೆಂಟ್ ಕ್ರೈಂ ಕಥೆ ಈ ಸಿನಿಮಾ..!

ಬಾಲಿವುಡ್‌ನಲ್ಲಿ ಈಗ ಅನಿಮಲ್ ಯಾರು ಅಂತ ಕೇಳಿದ್ರೆ ಅದು ರಣ್ವೀರ್ ಕಪೂರ್ ಅಂತ ಹೇಳ್ತಾರೆ. ಅರೆ ಅಷ್ಟ್ ಹ್ಯಾಂಡ್ಸಮ್ ಆಗಿರೋ ಮೃದೂ ಸ್ವಭಾವದ ಹುಡುಗನಿಗೆ ಅನಿಮಲ್ ಅಂತೀರಲ್ಲ ಅಂತ ನೀವ್ ಕೇಳ್ಬಹುದು. ಅದಕ್ಕೆ ಕಾರಣ ರಣ್ವೀರ್ ಅನಿಮಲ್ ರೀತಿ ವರ್ತಿಸಿರೋ ಈ ವಿಡಿಯೋ. ರಣ್ವೀರ್ ಅಂತಿಂತ ಅನಿಮಲ್ ಅಲ್ಲ. ರಕ್ತ ಹೀರೋ ಅನಿಮಲ್.

First Published Nov 25, 2023, 11:58 AM IST | Last Updated Nov 25, 2023, 11:58 AM IST

ರಣ್ವೀರ್ ಕಪೂರ್.. ಬಾಲಿವುಡ್ನ(Bollywood) ಹ್ಯಾಂಡ್ಸಮ್ ಹಂಕ್. ಆದ್ರೆ ಈಗ ಉದ್ದ ಗಟ್ಟ ಬಿಟ್ಟು ರಕ್ತ ಸಿಕ್ತ ದೇಹ ಮಾಡ್ಕೊಂಡು ಸಿಕ್ಕ ಸಿಕ್ಕವರ ಜೊತೆ ಗುದ್ದಾಡಿ ಲಾಂಗ್ ಗನ್ ಹಿಡಿದು ರಕ್ತ ಹೀರೋ ಅನಿಮಲ್ ರೀತಿ ವರ್ತಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ರಣ್ವೀರ್ ನಟಿಸಿರೋ ಅನಿಮಲ್ ಸಿನಿಮಾ(Animal movie). ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ರಣ್ವೀರ್ (Ranbir Kapoor)ಹಾಗೂ ರಶ್ಮಿಕಾ ಮಂದಣ್ಣ(Rashmika Mandanna) ನಟನೆಯ ನಿರೀಕ್ಷಿತ 'ಅನಿಮಲ್' ಸಿನಿಮಾದ ಅಫೀಷಿಯಲ್ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಸಿದೆ. ರಣ್‌ಬೀರ್ ಕಪೂರ್ ಆರ್ಭಟಕ್ಕೆ ಸಿನಿರಸಿಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ತಂದೆ- ಮಗನ ಬಾಂಧವ್ಯದ ಕಥೆಯನ್ನು ಬಹಳ ಹಿಂಸಾತ್ಮಕವಾಗಿ ಕಟ್ಟಿಕೊಟ್ಟಿರೋದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾ ಮಾಸ್ ಆಡಿಯೆನ್ಸ್ನ ತಟ್ ಅಂತ ಸೆಳೆಯುವಂತಿದೆ ಈ ಟ್ರೈಲರ್. ರಣ್‌ಬೀರ್‌ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಅನಿಮಲ್' ಸಿನಿಮಾ ಟಾಕ್‌ ಆಫ್‌ ದ ಟೌನ್ ಆಗಿದೆ. ಹೆಚ್ಚು ರೊಮ್ಯಾಂಟಿಕ್ ಹೀರೋ ಆಗಿ ಬಾಲಿವುಡ್‌ನಲ್ಲಿ ಕಮಾಲ್ ಮಾಡಿದ್ದ ರಣ್‌ಬೀರ್ ಈ ಬಾರಿ ಸಿಕ್ಕಾಪಟ್ಟೆ ರಗಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಣ್‌ಬೀರ್ ತಂದೆ ಪಾತ್ರದಲ್ಲಿ ಅನಿಲ್ ಕಪೂರ್ ನಟಿಸಿದ್ದಾರೆ. ತಂದೆ ಮಗನ ಸೆಂಟಿಮೆಂಟ್‌ನ ಅಂಡರ್‌ವರ್ಲ್ಡ್ ಕ್ರೈಂ ಕಥೆ ಅನಿಮಲ್. ಬಾಬಿ ಡಿಯೋಲ್ ಇಲ್ಲಿ  ವಿಲನ್.. ಈ ಅನಿಮಲ್ ಟ್ರೈಲರ್ ಸಿನಿಮಾಗೆ ಕಾಯುವಂತೆ ಮಾಡೋದಂತು ಸುಳ್ಳಲ್ಲ. 

ಇದನ್ನೂ ವೀಕ್ಷಿಸಿ:  ಕನ್ನಡ ಟೀಚರ್ ಆದ ತೆಲುಗಿನ 'ಶ್ರೀವಲ್ಲಿ': ಬಿಟೌನ್ ಸ್ಟಾರ್‌ಗೆ ರಶ್ಮಿಕಾ ಕನ್ನಡ ಪಾಠ..!