'ಪುಷ್ಪ' ದ ಶ್ರೀವಲ್ಲಿ ಐಕಾನಿಕ್ ಸ್ಟೆಪ್ ಸೃಷ್ಟಿ ಆಗಿದ್ದು ಹೇಗೆ, ಹೇಳ್ತಾರೆ ಅಲ್ಲು ಅರ್ಜುನ್!

ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡಿನಲ್ಲಿ ಅಲ್ಲು ಅರ್ಜುನ್ ಮಾಡಿದ್ದ ಐಕಾನಿಕ್ ವಾಕಿಂಗ್ ಸ್ಟೈಲ್ ಸಿಕ್ಕಾಪಟ್ಟೆ ಹಲ್ಚೆಲ್ ಎಬ್ಬಿಸಿತ್ತು. 

Share this Video
  • FB
  • Linkdin
  • Whatsapp


 ಸೌತ್ ಸಿನಿ ರಂಗದ ಶಕ್ತಿಯನ್ನ ರಾಷ್ಟ್ರ ಮಟ್ಟಕ್ಕೆ ತೋರಿಸಿದ ಸಿನಿಮಾಗಳಾದ ಕೆಜಿಎಫ್ ಹಾಗು ಆರ್ಆರ್ಆರ್ ಸಿನಿಮಾಗಳ ಜೊತೆ ಪುಷ್ಪ ಕೂಡ ಒಂದು. ಪುಷ್ಪ ಸಿನಿಮಾ ಹಲವು ಪ್ರಥಮಗಳಿಗೂ ಸಾಕ್ಷಿಯಾಗಿದೆ. 170 ಕೋಟಿಯಲ್ಲಿ ಸಿದ್ಧವಾದ ಪುಷ್ಪ 365 ಕೋಟಿ ಗಳಿಕೆ ಕಂಡಿದೆ. ಹಿಂದಿಯಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಸೃಷ್ಟಿಸಿದೆ. ಇದೆಲ್ಲಾ ಒಂದ್ ಕಡೆ ಆದ್ರೆ ಸೋಷಿಯಲ್ ಸಮುದ್ರದ ಟ್ರೆಂಡಿಂಗ್ನಲ್ಲು ಪುಷ್ಪ ಅರಳಿತ್ತು.

Add Asianetnews Kannada as a Preferred SourcegooglePreferred

ರಜನಿಕಾಂತ್‌ಗೆ ಅಂದು ಹೇಗೆಲ್ಲಾ ಅವಮಾನ ಆಗಿತ್ತು ಗೊತ್ತಾ> ಅವರೇ ಹೇಳ್ತಾರೆ

ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡಿನಲ್ಲಿ ಅಲ್ಲು ಅರ್ಜುನ್ ಮಾಡಿದ್ದ ಐಕಾನಿಕ್ ವಾಕಿಂಗ್ ಸ್ಟೈಲ್ ಸಿಕ್ಕಾಪಟ್ಟೆ ಹಲ್ಚೆಲ್ ಎಬ್ಬಿಸಿತ್ತು. ಅಲ್ಲು ಅರ್ಜುನ್ ಒಂದು ಭುಜ ಮೇಲೆತ್ತಿ. ಇನ್ನೊಂದು ಭುಜವನ್ನ ಕೆಳಗಿಳಿಸಿ ಕಾಲುಗಳನ್ನು ಎಳೆಯುತ್ತಾ ಡಾನ್ಸ್ ಮಾಡಿದ್ರು. ಇದೀಗ ಈ ಸ್ಟೆಪ್ಸ್ ಯೋಚನೆ ಹೇಗೆ ಬಂತು ಅನ್ನೋ ಸಿಕ್ರೇಟ್‌ನ ಅಲ್ಲು ಅರ್ಜುನ್ ರಿವಿಲ್ ಮಾಡಿದ್ದಾರೆ. 

ಸಂದರ್ಶನ ಒಂದರಲ್ಲಿ ತಮ್ಮ ಐಕಾನಿಕ್ ವಾಕಿಂಗ್ ಶೈಲಿಯ ಹಿಂದಿನ ರಹಸ್ಯವನ್ನು ಅಲ್ಲು ಬಿಚ್ಚಿಟ್ಟಿದ್ದಾರೆ. ಶ್ರೀವಲ್ಲಿ ಹಾಡಿನಲ್ಲಿ ನಾನು ಹಾಗೆ ನಡೆಯಲು ನಿರ್ದೇಶಕ ಸುಕುಮಾರ್ ಕಾರಣ. ನೀವು ಏನು ಮಾಡುತ್ತೀರೋ ಗೊತ್ತಿಲ್ಲ ಆದರೆ ಎಲ್ಲರೂ ನಿಮ್ಮಂತೆ ನಡೆಯಬೇಕು ಅಂತ ನಿರ್ದೇಶಕ ಸುಕುಮಾರ್ ಹೇಳಿದ್ರಂತೆ. ಕೊನೆಗೆ ಪುಷ್ಪನ ಈ ವಾಕಿಂಗ್ ಸ್ಟೈಲ್ಅನ್ನ ಅಲ್ಲು ಅರ್ಜುನ್ ಅವರೇ ಕಂಡು ಹಿಡಿದು ಕ್ಯಾಮೆರಾ ಮುಂದೆ ಮಾಡಿದ್ರಂತೆ. ಒಂದೇ ಶಾಟ್ನಲ್ಲಿ ಈ ಸ್ಟೈಲ್ನ ಡಾನ್ಸ್ ಒಕೆ ಆಯ್ತಂತೆ..!

Related Video