ರಣಬೀರ್-ಆಲಿಯಾ ಮದುವೆಗೆ ನಿಗದಿ ಆಯ್ತು ಮುಹೂರ್ತ..!

ಇಷ್ಟು ದಿನ ಗೌಪ್ಯವಾಗಿದ್ದ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ (Alia Bhatt) ಮದುವೆಗೆ ಈಗ ಮಹೂರ್ತ ಫಿಕ್ಸ್ ಆಗಿದೆ. ಸರಳ ಸಮಾರಂಭದ ಮೂಲಕ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ರಣಬೀರ್ ಆಲಿಯಾ ಭಟ್ ಮದುವೆ ಏಪ್ರಿಲ್‌ನಲ್ಲಿ ನಡೆಯಲಿದೆ ಅಂತ ಬಿಟೌನ್ ತುಂಬಾ ಗುಲ್ಲೆದ್ದಿದೆ. 

Share this Video
  • FB
  • Linkdin
  • Whatsapp

ಇಷ್ಟು ದಿನ ಗೌಪ್ಯವಾಗಿದ್ದ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ (Alia Bhatt) ಮದುವೆಗೆ ಈಗ ಮಹೂರ್ತ ಫಿಕ್ಸ್ ಆಗಿದೆ. ಸರಳ ಸಮಾರಂಭದ ಮೂಲಕ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ರಣಬೀರ್ ಆಲಿಯಾ ಭಟ್ ಮದುವೆ ಏಪ್ರಿಲ್‌ನಲ್ಲಿ ನಡೆಯಲಿದೆ ಅಂತ ಬಿಟೌನ್ ತುಂಬಾ ಗುಲ್ಲೆದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೆಳೆಯನ ಬ್ಲಾಕ್ ಬಸ್ಟರ್ ಮೂವಿ ಬರ್ತಿದೆ ಸಿದ್ಧರಾಗಿ ಎಂದ ಸಿಡಿಲ ಮರಿ ಸೆಹ್ವಾಗ್..!

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಸೆಟ್ಟೇರಿ ಹಲವು ವರ್ಷಗಳೇ ಕಳೆದಿವೆ. ಈ ಸಿನಿಮಾದ ಸೆಟ್‌ನಲ್ಲಿ ಇಬ್ಬರ ಮಧ್ಯೆ ಪ್ರೀತಿ ಅರಳಿದ್ದು ಅಂತ ಹೇಳಲಾಗುತ್ತಿದೆ. ಅಷ್ಟೆ ಅಲ್ಲ ಆಲಿಯಾಗೆ ಚಿಕ್ಕ ವಯಸ್ಸಿನಲ್ಲೇ ರಣಬೀರ್ ಮೇಲೆ ಕ್ರಶ್ ಆಗಿತ್ತಂತೆ. ಈಗ ಪ್ರೇಮದಲ್ಲಿ ಬಿದ್ದಿರೋ ಈ ಜೋಡಿ ಮದುವೆ ಆಗಲು ಡಿಸೈಡ್ ಮಾಡಿದೆ. ಆದ್ರೆ ಈ ಜೋಡಿ ವಿವಾಹಕ್ಕೆ ಐಶಾ ಐಷಾರಾಮಿ ಹೋಟೆಲ್ ಅಥವಾ ವಿಲ್ಲಾವನ್ನ ಹುಡುಕಿಲ್ಲ. ಅವರ ಪೂರ್ವಜರ ಮನೆಯಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ. ವಿಶೇಷ ಎಂದರೆ, ಇದೇ ಮನೆಯಲ್ಲಿ ರಣಬೀರ್ ಕಪೂರ್ ತಂದೆ-ತಾಯಿ, ರಿಷಿ ಕಪೂರ್ ಹಾಗೂ ನೀತು ಕಪೂರ್ 1980ರ ಜನವರಿ 20ರಂದು ಮದುವೆ ಆಗಿದ್ರು. ಅದೇ ಮನೆಯಲ್ಲಿ ರಣಬೀರ್-ಆಲಿಯಾ ಹಸೆಮಣೆ ಏರುತ್ತಿದ್ದಾರೆ. 450 ಅತಿಥಿಗಳಿಗೆ ಮಾತ್ರ ತಮ್ಮ ಮದುವೆಗೆ ಆಹ್ವಾನಿಸಲಿದೆಯಂತೆ ಈ ಜೋಡಿ. ಏಪ್ರಿಲ್‌ನಲ್ಲಿ ಮದುವೆ ಅಂತ ಹೇಳಲಾಗ್ತಿದೆಯೇ ಹೊರತು ಮದುವೆ ದಿನಾಂಕವನ್ನ ಈ ಜೋಡಿ ರಿವೀಲ್ ಮಾಡಿಲ್ಲ.

Related Video