ಕೋರ್ಟ್ ಮೆಟ್ಟಿಲೇರಿದ ಅಭಿಷೇಕ್ -ಐಶ್ವರ್ಯ ರೈ: ತಾರಾಜೋಡಿಯ ಫೇಕ್ ವಿಡಿಯೋ ವೈರಲ್!

ಐಶ್ವರ್ಯ ಅಂಡ್ ಅಭಿಷೇಕ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಜೋಡಿ ಕೋರ್ಟ್ ಮೆಟ್ಟಿಲೇರಿತು ಅಂದುಕೂಡಲೇ ಡಿವೋರ್ಸಾ ಅಂತ ಪ್ರಶ್ನೆ ಮಾಡೋರೂ ಇದ್ದಾರೆ. ಅಸಲಿಗೆ ಐಶ್-ಅಭಿಷೇಕ್ ಮದುವೆ ಆದ ದಿನದಿಂದಲೂ ಇವರ ಡಿವೋರ್ಸ್ ಬಗ್ಗೆ ವದಂತಿ ಹರಿದಾಡ್ತಾನೇ ಬಂದಿವೆ.

Share this Video
  • FB
  • Linkdin
  • Whatsapp

ಬಾಲಿವುಡ್​ನ ತಾರಾ ಜೋಡಿ ಐಶ್ವರ್ಯ ಅಂಡ್ ಅಭಿಷೇಕ್ ಬಚ್ಚನ್ ಕೋರ್ಟ್ ಮೆಟ್ಟೆಲೇರಿದ್ದಾರೆ. ಅರೇ ಅಭಿ-ಐಶ್ ನಡುವೆ ಏನಾಯ್ತು ಅಂತ ಗಾಬರಿ ಆಗಬೇಡಿ. ಐಶ್ವರ್ಯ-ಅಭಿಷೇಕ್ ನಡುವೆ ಏನೂ ಆಗಿಲ್ಲ. ಬದಲಾಗಿ ಈ ಜೋಡಿ ಗೂಗಲ್ ಮತ್ತು ಯುಟ್ಯೂಬ್ ಮೇಲೆ ದೂರು ದಾಖಲಿಸಿದ್ದು ಬರೊಬ್ಬರಿ 4 ಕೋಟಿ ಪರಿಹಾರ ಕೇಳಿದ್ದಾರೆ. ಯೆಸ್ ಬಾಲಿವುಡ್‌ನ ತಾರಾಜೋಡಿ ಐಶ್ವರ್ಯ ಅಂಡ್ ಅಭಿಷೇಕ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಜೋಡಿ ಕೋರ್ಟ್ ಮೆಟ್ಟಿಲೇರಿತು ಅಂದುಕೂಡಲೇ ಡಿವೋರ್ಸಾ ಅಂತ ಪ್ರಶ್ನೆ ಮಾಡೋರೂ ಇದ್ದಾರೆ. ಅಸಲಿಗೆ ಐಶ್-ಅಭಿಷೇಕ್ ಮದುವೆ ಆದ ದಿನದಿಂದಲೂ ಇವರ ಡಿವೋರ್ಸ್ ಬಗ್ಗೆ ವದಂತಿ ಹರಿದಾಡ್ತಾನೇ ಬಂದಿವೆ. ಆದ್ರೆ 18 ವರ್ಷದಿಂದಾನೂ ಅಭಿ-ಐಶೂ ದಾಂಪತ್ಯ ರಾಯಲ್ ಆಗೇ ಸಾಗ್ತಾ ಇದೆ.

ಸೋ ಈ ಸ್ಟಾರ್ ಜೋಡಿ ಈಗ ಕೋರ್ಟ್ ಮೆಟ್ಟಿಲೇರಿರೋದ್ರ ಬೇರೆ ಕಾರಣ ಇದೆ. ಈ ಹಿಂದೆನೇ ತಮ್ಮ ಕುರಿತ ಫೇಕ್ ಎಐ ವಿಡಿಯೋಗಳ ವಿರುದ್ದ ದೆಹಲಿ ಹೈಕೋರ್ಟ್​​ನಲ್ಲಿ ದಾವೆ ದಾಖಲಿಸಿದ್ದ ಈ ಜೋಡಿ ಈಗ ಗೂಗಲ್, ಯುಟ್ಯೂಬ್ ತಮಗೆ 4 ಕೋಟಿ ಪರಿಹಾರ ಕೊಡಬೇಕು ಅಂತ ಡಿಮ್ಯಾಂಡ್ ಇಟ್ಟಿದ್ದಾರೆ. ತಮ್ಮ ಚಿತ್ರ, ಧ್ವನಿ, ಹೆಸರು, ವ್ಯಕ್ತಿತ್ವ, ಹಾವಭಾವದ ನಕಲುಗಳನ್ನು ಅವರ ಅನುಮತಿ ಇಲ್ಲದೆ ಎಲ್ಲಿಯೂ ಬಳಸುವಂತಿಲ್ಲ. ಅದರ ಬೆನ್ನಲ್ಲೆ ತಮ್ಮ ಅನುಮತಿ ಇಲ್ಲದೆ ಅಪ್​ಲೋಡ್ ಆಗಿರುವ ವಿಡಿಯೋಗಳನ್ನು ತೆಗೆಯುವಂತೆ ಯೂಟ್ಯೂಬ್​​ಗೆ ಮನವಿ ಸಹ ಮಾಡಿದ್ದರು. ಆದರೆ ಇತ್ತೀಚೆಗೆ ಅಭಿಷೇಕ್ ಮತ್ತು ಐಶ್ವರ್ಯಾ ರೈ ಅವರುಗಳ ಎಐ ವಿಡಿಯೋಗಳು ಒಂದರ ಹಿಂದೊಂದು ಬಿಡುಗಡೆ ಆದ ಬೆನ್ನಲ್ಲೆ ಇದೀಗ ದೆಹಲಿ ಹೈಕೋರ್ಟ್​​ನಲ್ಲಿ ಗೂಗಲ್ ಹಾಗೂ ಯೂಟ್ಯೂಬ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಅಭಿಷೇಕ್ ಮತ್ತು ಐಶ್ವರ್ಯಾ ಬಗ್ಗೆ ಯೂಟ್ಯೂಬ್​​​ನಲ್ಲಿ ಅಪ್​ಲೋಡ್ ಆಗಿರುವ ವಿಡಿಯೋಗಳಲ್ಲಿ ಲೈಂಗಿಕತೆಯ ಅಂಶಗಳು ಇವೆ ಅಂತ ದಂಪತಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನಲ್ಲಿ ‘ಎಐ ಬಾಲಿವುಡ್ ಇಷ್ಕ್​’ ಹೆಸರಿನ ಯೂಟ್ಯೂಬ್ ಚಾನೆಲ್​​ನ ಹೆಸರನ್ನ ಉಲ್ಲೇಖಿಸಲಾಗಿದೆ. ಈ ಯೂಟ್ಯೂಬ್ ಚಾನೆಲ್​​ನಲ್ಲಿ 259 ಎಐ ಜನರೇಟೆಡ್ ವಿಡಿಯೋಗಳಿದ್ದು ಬಹುತೇಕ ವಿಡಿಯೋಗಳು ಬಾಲಿವುಡ್ ನಟ-ನಟಿಯರ ಬಗೆಗೆ ಆಗಿದೆ. ವಿಡಿಯೋಗಳಲ್ಲಿ ಅಶ್ಲೀಲ ಭಾಷೆ, ಚಿತ್ರಗಳನ್ನ ಸಹ ಬಳಸಲಾಗಿದೆ. ಒಟ್ನಲ್ಲಿ ಇದು ಎಐ ಫೇಕ್ ವಿಡಿಯೋಗಳ ಕಾಲ. ಯಾವುದು ನಿಜ ಯಾವುದು ಫೇಕ್ ಅಂತಾನೇ ಗೊತ್ತಾಗದ ಕಾಲ ಇದು. ಸೋ ಇಂಥಾ ಫೇಕ್ ವಿಡಿಯೋ ಮಾಡುವವರಿಗೆ ಪಾಠ ಕಲಿಸ್ತಿನಿ ಅಂತ ಅಭಿಷೇಕ್ - ಐಶ್ವರ್ಯ ಗಟ್ಟಿಯಾಗಿ ನಿಂತುಕೊಂಡಿದ್ದಾರೆ.

Related Video