KGF 2 ರಿಲೀಸ್ ಬಳಿಕ ಮಾಯವಾದ ಯಶ್; ಎಲ್ಲಿದ್ದಾರೆ ರಾಕಿಂಗ್ ದಂಪತಿ?

KGF 2 ಬಿಡುಗಡೆ ಬಳಿಕ ರಾಕಿಂಗ್ ಸ್ಟಾರ್ ಯಶ್ ಮಾಯವಾಗಿದ್ದಾರೆ. ಕೆಜಿಎಫ್-2 ಸೂಪರ್ ಸಕ್ಸಸ್ ನ ಖುಷಿಯಲ್ಲಿರುವ ಯಶ್ ಪತ್ನಿ ರಾಧಿಕಾ ಮತ್ತು ಮಕ್ಕಳ ಜೊತೆ ಮಾಲ್ಡೀವ್ಸ್ ಗೆ ಹಾರಿದ್ದಾರೆ. ಕೆಜಿಎಫ್-2 ಯಶಸ್ಸನ್ನು ರಾಕಿಂಗ್ ದಂಪತಿ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ವಿಶ್ವದಾದ್ಯಂತ ಇದೀಗ ಕೆಜಿಎಫ್-2 ಸಿನಿಮಾದೆ ಹವಾ. ಬಾಕ್ಸ್ ಆಫೀಸ್ ನಲ್ಲಿ ದೂಳ್ ಎಬ್ಬಿಸುತ್ತಿರುವ ಕೆಜಿಎಫ್-2 ಸಿನಿಮಾ ದಾಖಲೆ ಕಲೆಕ್ಷನ್ ಮಾಡಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಸಿನಿಮಾ ಬಿಡುಗಡೆಯಾಗಿ 2ದಿನಕ್ಕೆ ಕೆಜಿಎಫ್-2 240 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಎಲ್ಲಿ ನೋಡಿದ್ರು ರಾಕಿ ಭಾಯ್ ಸಿನಿಮಾದ್ದೆ ಮಾತು. ಆದರೆ ರಾಕಿಂಗ್ ಸ್ಟಾರ್ ಯಶ್ ಮಾತ್ರ ಎಲ್ಲಿಯೂ ಕಾಣಿಸುತ್ತಿಲ್ಲ. ಸಿನಿಮಾ ಬಿಡುಗಡೆ ಬಳಿಕ ಯಶ್ ಸಾಮಾಜಿಕ ಜಾಲತಾಣದಲ್ಲಿ ಅಥವಾ ಕ್ಯಾಮರಾ ಮುಂದೆಯೂ ಬಂದಿಲ್ಲ. ಭರ್ಜರಿ ಸಕ್ಸಸ್ ನ ಖುಷಿಯಲ್ಲಿರುವ ಯಶ್ ದಂಪತಿ ಮಾಲ್ಡೀವ್ಸ್ ಪಯಣ ಬೆಳೆಸಿದ್ದಾರೆ. ಮಾಲ್ಡೀವ್ಸ್ ಸಮುದ್ರ ತೀರದಲ್ಲಿ ಕುಳಿತು ರಾಕಿಂಗ್ ದಂಪತಿ ವಿಡಿಯೋ ಶೇರ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video