ವರ್ಲ್ಡ್ ಕಪ್‌ನಲ್ಲೂ ಕಾಂತಾರ ಪಂಜುರ್ಲಿ ಮಹಿಮೆ: ಮ್ಯಾಕ್ಸ್‌ವೆಲ್‌ಗೆ ಶಕ್ತಿ ತುಂಬಿದ್ದು ಪಂಜುರ್ಲಿಯಂತೆ!

ಕ್ರಿಕೆಟ್ ಜಗತ್ತಿನಲ್ಲಿ ಈಗ ಕಾಂತಾರದ ಪಂಜುರ್ಲಿ ಮಹಿಮೆಯದ್ದೇ ಚರ್ಚೆ. ಯಾಕಂದ್ರೆ ಮೊನ್ನೆ ಅಫಘಾನಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ತಂಡದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿಡಿಲಬ್ಬರದ ದ್ವಿಶತಕ ಬಾರಿಸಿ, ತಮ್ಮ ತಂಡವನ್ನ ವಿಶ್ವಕಪ್‌ ಸೆಮಿಫೈನಲ್‌ ತಲುಪಿಸಿದ್ರು. 

Share this Video
  • FB
  • Linkdin
  • Whatsapp

ಕ್ರಿಕೆಟ್ ಜಗತ್ತಿನಲ್ಲಿ ಈಗ ಕಾಂತಾರದ ಪಂಜುರ್ಲಿ ಮಹಿಮೆಯದ್ದೇ ಚರ್ಚೆ. ಯಾಕಂದ್ರೆ ಮೊನ್ನೆ ಅಫಘಾನಿಸ್ತಾನದ ವಿರುದ್ಧ ಆಸ್ಟ್ರೇಲಿಯಾ ತಂಡದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿಡಿಲಬ್ಬರದ ದ್ವಿಶತಕ ಬಾರಿಸಿ, ತಮ್ಮ ತಂಡವನ್ನ ವಿಶ್ವಕಪ್‌ ಸೆಮಿಫೈನಲ್‌ ತಲುಪಿಸಿದ್ರು. ಆಟದ ಮಧ್ಯೆ ಮ್ಯಾಕ್ಸ್ವೆಲ್ ಕ್ರ್ಯಾಂಪ್ನಿಂದ ಬಳಲಿ ಮೈದಾನದಲ್ಲೇ ಮಲಗಿದ್ರು. ಮತ್ತೆ ಮೇಲೆದ್ದು ಆಟ ಆಡಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಇದಕ್ಕೆ ಹಲವರು ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ಗೆ ಮ್ಯಾಕ್ಸ್ವೆಲ್ ಆಟವನ್ನ ಹೋಲಿಸ್ತಿದ್ದಾರೆ. ಪಂದ್ಯಕ್ಕೂ ಮುನ್ನ ಮ್ಯಾಕ್ಸ್ವೆಲ್ ಕಾಂತಾರಾ ಫಿಲ್ಮ್ ನೋಡಿರಬೇಕು. ಅಲ್ಲಿ ರಿಷಬ್ ಶೆಟ್ಟಿಗೆ ಮೈಮೇಲೆ ದೈವ ಬಂದಂತೆ, ಮ್ಯಾಕ್ಸ್ವೆಲ್ ಮೈಮೇಲೂ ದೇವರು ಬಂದಿರಬೇಕು. ಅದರ ಪರಿಣಾಮವೇ ಇದು ಅಂತ ಪೋಸ್ಟ್ ಮಾಡ್ತಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಕೂಡ ಮ್ಯಾಕ್ಸ್ವೆಲ್ಗೆ ಪಂಜುರ್ಲಿ ಆಶೀರ್ವಾದ ಮಾಡಿದ ವೀಡಿಯೋವನ್ನ ಶೇರ್ ಮಾಡಿ ಮ್ಯಾಕ್ಸ್ವೆಲ್ ಆಟಕ್ಕೆ ಕಾರಣ ಕಾಂತಾರದ ಪಂಜುರ್ಲಿ ಎಂದಿದ್ದಾರೆ. ಈ ವೀಡಿಯೋ ಈಗ ಎಲ್ಲಾ ಕಡೆ ವೈರಲ್ ಆಗ್ತಿದೆ. 

Related Video