ಟಾಲಿವುಡ್‌ನ ಕ್ರೇಜಿ ಕ್ವೀನ್ ಬಿರುದು ಪಡೆದ ಕಿಸ್ ಚೆಲುವೆ ಶ್ರೀಲೀಲಾ ಲೀಲಾವಳಿ!

ಶ್ರೀಲೀಲಾ, ಕೇವಲ ಎರಡು ವರ್ಷಗಳಲ್ಲಿ ಟಾಲಿವುಡ್‌ನಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಆಂಧ್ರದಲ್ಲಿ ನಡೆದ ಒಂದು ಸೀರೆ ಅಂಗಡಿ ಉದ್ಘಾಟನಾ ಸಮಾರಂಭದಲ್ಲಿ ಸಾವಿರಾರು ಜನರು ಅವರನ್ನು ನೋಡಲು ಸೇರಿದ್ದರು.

First Published Dec 24, 2024, 2:29 PM IST | Last Updated Dec 24, 2024, 2:29 PM IST

ಎಲ್ಲೆಲ್ಲೂ ಇವಳದ್ದೇ ಜಪ ತಪ. ಟ್ರೆಂಡು ಬ್ಯಾಂಡು.  ಇವಳು ಕಾಲು ಇಟ್ಟಲ್ಲೆಲ್ಲಾ ಫೋಟೋ ಬೇಕು ಅಂತ ಫಾಲೋವರ್ಸ್​ದು ಒಂದೇ ಡಿಮ್ಯಾಂಡು. ಬೆಳ್ಳಿತೆರೆ ಮೇಲೆ ಕಿಸ್​ ಕಿಸ್​ ಕಿಸಕ್ಕ ಎನ್ನುತ್ತಿರೋ ಶ್ರೀಲೀಲಾ ಆಂಧ್ರ, ತೆಲಂಗಾಣದಲ್ಲಿ ಓಡಾಡಿದ್ರೆ ಸಾಕು ಸಾವಿರಾರು ಜನ ಸೇರಿ ಬಿಡ್ತಾರೆ. ಟಾಪ್​ ಹೀರೋಗಳನ್ನ ನೋಡೋಕೆ ಮುಗಿ ಬೀಳೋ ಹಾಗೆ ಶ್ರೀಲೀಲಾಗಾಗಿ ಹಪಹಪಿಸುತ್ತಾರೆ. ನಿನ್ನೆಯಷ್ಟೆ ಸೀರೆ ಅಂಗಡಿಯೊಂದರ ಉದ್ಘಾಟನೆಗೆ ಹೋಗಿದ್ಧ ಶ್ರೀಲೀಲಾಗೆ ಅಲ್ಲಿ ಸೇರಿದ್ದ ಜನರನ್ನ ನೋಡಿ ಶಾಕ್​ ಆಗಿದೆ.

ಶ್ರೀಲೀಲಾ. ಸೌತ್ ಸಿನಿ ಜಗತ್ತನ್ನ ಆವರಿಸಿಕೊಂಡಿರೋ ಒಂದೇ ಒಂದು ಹೆಸ್ರು. ಡಿಯರ್ ರಶ್ಮಿಕಾ ಎಷ್ಟೇ ಮಿಂಚಿ ಮೆರೆದಾಡಿದ್ರು, ಆಂಧ್ರ ತೆಲಂಗಾಣದಲ್ಲಿ ಒಂದ್ ಹೆಜ್ಜೆ ಮುಂದೆ ಇರೋದು ಶ್ರೀಲೀಲಾನೇ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​ ಪುಷ್ಪ2 ಸಿನಿಮಾದಲ್ಲಿ ರಶ್ಮಿಕಾ ಏನೇ ದಬ್ಬಾಕಿದ್ರೂ, ಶ್ರೀಲೀಲಾ ಮಾಡಿದ ಕಿಸ್ ಕಿಸ್​ ಕಿಸಕ್ಕ ಡಾನ್ಸ್​​ ಈ ಹಾಟಿಯನ್ನ ಟಾಪ್​​ಗೆ ತಂದು ನಿಲ್ಲಿಸಿದೆ. 

ಕಿಸ್​ ಬ್ಯೂಟಿ ಕಾಲಿಟ್ಟಲ್ಲೆಲ್ಲಾ ಸಾವಿರಾರು ಜನ ಸೇರುತ್ತಿದ್ದಾರೆ. ಆಂಧ್ರದಲ್ಲಿ ಸೀರೆ ಅಂಗಡಿಯೊಂದರ ಉದ್ಘಾಟನೆಗೆ ಹೋಗಿದ್ದ ಶ್ರೀಲೀಲಾಗೆ ಅಂಗಡಿಯಿಂದ ಹೊರ ಬರುವಷ್ಟರಲ್ಲಿ ಶಾಕ್ ಆಗಿದೆ. ಯಾಕಂದ್ರೆ ರಸ್ತೆಯುದ್ದಕ್ಕು ಸಾವಿರಾರು ಜನ ಶ್ರೀಲೀಲಾಗಾಗಿ ಕಾಯುತ್ತಾ ನಿಂತಿದ್ದಾರೆ.

ಹೀರೋಯಿನ್ಸ್​ಗೆ ಕ್ರೇಜ್ ಕ್ರಿಯೆಟ್ ಆಗೋದು ತುಂಬಾ ಕಡಿಮೆ. ದೀಪಿಕಾ ಪಡುಕೋಣೆ, ಪೂಜಾ ಹೆಗ್ಡೆ, ರಶ್ಮಿಕಾ, ಸನ್ನಿ ಲಿಯೋನ್​​ಗೆ ಇಂತಹದ್ದೊಂದು ಕ್ರೇಜ್​ ಇರೋದನ್ನ ನೋಡಿದ್ದೇವೆ. ಆದ್ರೆ ಇವರದ್ದೆಲ್ಲಾ ಐದಾರು ವರ್ಷದ ಶ್ರಮದ ಫಲ. ಬಟ್ ಶ್ರೀಲೀಲಾಳದ್ದು ಹಾಗಲ್ಲ. ಜೆಸ್ಟ್ ಎರಡೇ ವರ್ಷಕ್ಕೆ ಕನ್ನಡದ ಹುಡುಗಿ ಶ್ರೀಲೀಲಾಳ ಲೀಲಾವಳಿ ಟಾಲಿವುಡ್​ತುಂಬೆಲ್ಲಾ ಹಬ್ಬಿದೆ. ಶ್ರೀಲೀಲಾ ತೆಲುಗಿನ ಕ್ರೇಜಿ ಕ್ವೀನ್ ಪಟ್ಟಕ್ಕೇರಿದ್ದಾರೆ.