Pushpa Part 2: ಮತ್ತೊಮ್ಮೆ ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಲಿದ್ದಾರಾ ಸಮಂತಾ?
'ಪುಷ್ಪ' ಪಾರ್ಟ್ 2 ಗೆ ಸಮಂತಾ ಅವರಿಗೆ ಅವಕಾಶ ನೀಡೋದು ಅನುಮಾನ ಎನ್ನಲಾಗುತ್ತಿದ್ದು, ಎರಡನೇ ಪಾರ್ಟ್ನಲ್ಲೂ ಅವರು ಬಂದರೆ ಸಿನಿಮಂದಿ ಮೊದಲಿನಷ್ಟೇ ಕ್ರೇಜ್ ತೋರಿಸುತ್ತಾರೆ ಎಂಬುದು ಅನುಮಾನ. ಹೀಗಾಗಿ, ಹೊಸ ನಟಿಯರಿಗೆ ಚಾನ್ಸ್ ನೀಡೋಕೆ ನಿರ್ದೇಶಕ ಸುಕುಮಾರ್ ನಿರ್ಧರಿಸಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ದೊಡ್ಡ ದಾಖಲೆ ಮಾಡಿದ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' (Pushpa). ಟಾಲಿವುಡ್ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯಾಗಿ ನಟಿಸಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರದಲ್ಲಿ ಸಮಂತಾ (Samantha) ಹಾಕಿದ 'ಊ ಅಂಟಾವಾ' ಸ್ಟೆಪ್‌ಗೆ ವಿಶ್ವವೇ ಫಿದಾ ಆಗಿತ್ತು. ಈ ಸಿನಿಮಾ ಗೆಲುವಿನಿಂದ ನಿರ್ದೇಶಕ ಸುಕುಮಾರ್ಗೆ (Sukumar) ಹೊಸ ಹುರುಪು ಬಂದಿದೆ. ಅವರು ಪಾರ್ಟ್ 2 ಕೆಲಸದಲ್ಲಿ ಬ್ಯುಸಿಯಾಗಿದ್ದು, ಈ ಬಾರಿ ಅವರು ಐಟಂ ಸಾಂಗ್ ಬಗ್ಗೆ ವಿಶೇಷ ಆಸಕ್ತಿ ತೋರಿದ್ದಾರೆ.
Pushpa Item Song: ಊ ಅಂಟಾವಾ ಹಾಡಿಗಾಗಿ 15 ದಿನ ಬೆವರಿಳಿಸಿದ್ದಾರಂತೆ ಸಮಂತಾ!
ಹೌದು! ಸುಕುಮಾರ್ ತಮ್ಮ ಪ್ರತಿ ಸಿನಿಮಾದಲ್ಲಿ ಐಟಂ ಸಾಂಗ್ಗೆ ಆದ್ಯತೆ ನೀಡುತ್ತಾರೆ. ಸ್ಟಾರ್ ನಟಿಯರನ್ನು ಕರೆಸಿ ಡ್ಯಾನ್ಸ್ ಮಾಡಿಸುತ್ತಾರೆ. 'ಊ ಅಂಟಾವಾ' ಹಾಡಿನಲ್ಲಿ ಕುಣಿಯೋಕೆ ಆರಂಭದಲ್ಲಿ ಸನ್ನಿ ಲಿಯೋನ್, ನೋರಾ ಫತೇಹಿ ಮೊದಲಾದವರಿಗೆ ಆಫರ್ ನೀಡಲಾಗಿತ್ತು. ಆದರೆ, ಡೇಟ್ಸ್ ಹೊಂದಾಣಿಕೆಯಾಗದೇ ಸಮಂತಾ ಈ ಆಫರನ್ನು ಒಪ್ಪಿಕೊಂಡು ಹಾಡಿಗೆ ಸೊಂಟ ಬಳುಕಿಸಿದ್ದರು. ಇದೀಗ 'ಪುಷ್ಪ' ಪಾರ್ಟ್ 2 ಗೆ ಸಮಂತಾ ಅವರಿಗೆ ಅವಕಾಶ ನೀಡೋದು ಅನುಮಾನ ಎನ್ನಲಾಗುತ್ತಿದ್ದು, ಎರಡನೇ ಪಾರ್ಟ್ನಲ್ಲೂ ಅವರು ಬಂದರೆ ಸಿನಿಮಂದಿ ಮೊದಲಿನಷ್ಟೇ ಕ್ರೇಜ್ ತೋರಿಸುತ್ತಾರೆ ಎಂಬುದು ಅನುಮಾನ. ಹೀಗಾಗಿ, ಹೊಸ ನಟಿಯರಿಗೆ ಚಾನ್ಸ್ ನೀಡೋಕೆ ಸುಕುಮಾರ್ ನಿರ್ಧರಿಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment