Pushpa Item Song: ಊ ಅಂಟಾವಾ ಹಾಡಿಗಾಗಿ 15 ದಿನ ಬೆವರಿಳಿಸಿದ್ದಾರಂತೆ ಸಮಂತಾ!
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ 'ಪುಷ್ಪ' ಚಿತ್ರದಲ್ಲಿ ಸಮಂತಾ ಹಾಕಿದ ಸ್ಟೆಪ್‌ಗೆ ವಿಶ್ವವೇ ಫಿದಾ ಆಗಿದೆ. ಈ ಹಾಡಿಗೆ ಡ್ಯಾನ್ಸ್ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ. 'ಪುಷ್ಪ' ಸಿನಿಮಾ ರಿಲೀಸ್ಗೆ ತಿಂಗಳು ಇರುವ ಸಂದರ್ಭದಲ್ಲಿ ಈ ಹಾಡಿನಲ್ಲಿ ನಟಿಸೋಕೆ ಸಮಂತಾ ಒಪ್ಪಿಕೊಂಡಿದ್ದರು.
ಸುಕುಮಾರ್ (Sukumar) ನಿರ್ದೇಶನದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ 'ಪುಷ್ಪ' (Pushpa) ಚಿತ್ರದಲ್ಲಿ ಸಮಂತಾ (Samantha) ಹಾಕಿದ 'ಊ ಅಂಟಾವಾ' ಸ್ಟೆಪ್‌ಗೆ ವಿಶ್ವವೇ ಫಿದಾ ಆಗಿದೆ. ಈ ಹಾಡಿಗೆ ಡ್ಯಾನ್ಸ್ (Dance) ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ. 'ಪುಷ್ಪ' ಸಿನಿಮಾ ರಿಲೀಸ್ಗೆ ಒಂದು ತಿಂಗಳು ಇರುವ ಸಂದರ್ಭದಲ್ಲಿ ಈ ಹಾಡಿನಲ್ಲಿ ನಟಿಸೋಕೆ ಸಮಂತಾ ಒಪ್ಪಿಕೊಂಡಿದ್ದರು. ಅದರಂತೆ 15 ದಿನದಲ್ಲಿ ಸಮಂತಾ ಡ್ಯಾನ್ಸ್ ಮಾಡುವುದನ್ನು ಕಲಿತಿದ್ದರು. ಈ ಐಟಂ ಸಾಂಗ್‌ಗೆ (Item Song) ಸೊಂಟ ಬಳುಕಿಸೋ ಮುನ್ನ ಸಮಂತಾ ಸಾಕಷ್ಟು ರಿಹರ್ಸಲ್ ಮಾಡಿದ್ದರು. ಇದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ.
Goa Vacation: ಗರ್ಲ್ಸ್ ಗ್ಯಾಂಗ್ ಜೊತೆ ಎಂಜಾಯ್ ಮೂಡ್‍ನಲ್ಲಿ ಸಮಂತಾ
ಯೂಟ್ಯೂಬ್ (Youtube) ಚಾನೆಲ್ನಲ್ಲಿ ಸಮಂತಾ ಪ್ರ್ಯಾಕ್ಟಿಸ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಡ್ಯಾನ್ಸ್ ಹೇಳಿಕೊಡುತ್ತಿರುವ ಯಾರೂ ಕೂಡ ಬೆವರುತ್ತಿರಲಿಲ್ಲ. ಆದರೆ, ಸಮಂತಾ ಮುಖದಲ್ಲಿ ಬೆವರು ನೀರು ಹರಿದಂತೆ ಹರಿದು ಬರುತ್ತಿತ್ತು. ಅಲ್ಲದೆ, ತಾವು ತುಂಬಾನೇ ಸುಸ್ತಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾಕಷ್ಟು ವೈರಲ್ (Viral) ಆಗುತ್ತಿದೆ. ಹತ್ತು ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋದಿಂದ ಸಮಂತಾ ಒಂದು ಹಾಡಿಗೆ ಎಷ್ಟು ಹಾರ್ಡ್ ವರ್ಕ್ ಮಾಡುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment