Asianet Suvarna News Asianet Suvarna News

Lovers Gossip: ಮತ್ತೊಬ್ಬ ಸ್ಟಾರ್ ನಟಿಯ ಮದುವೆ ಮಾಡಿದ್ರು ಗಾಸಿಪ್ ಹೀರೋಸ್!

ಸೌತ್ ಬ್ಯೂಟಿ ಸಾಯಿ ಪಲ್ಲವಿ, ಬಹುಬೇಡಿಕೆಯ ನಟಿಯರಲ್ಲಿ ಇವರು ಒಬ್ಬರು. ಹಲವಾರು ದಿನಗಳಿಂದ ಸಾಯಿ ಪಲ್ಲವಿಗೆ  ಮದುವೆಯಾಗಿದೆ ಎಂದು ಫೋಟೋ ಸಮೇತ ವೈರಲ್ ಆಗಿತ್ತು.. ಈ ಕುರಿತು ನಟಿ ಈಗ ಪ್ರತಿಕ್ರಿಯೆ ನೀಡಿದ್ದಾರೆ.

First Published Sep 25, 2023, 12:25 PM IST | Last Updated Sep 25, 2023, 12:25 PM IST

ಸೌತ್ ಬ್ಯೂಟಿ ಸಾಯಿ ಪಲ್ಲವಿ, ಬಹುಬೇಡಿಕೆಯ ನಟಿಯರಲ್ಲಿ ಇವರು ಒಬ್ಬರು. ಹಲವಾರು ದಿನಗಳಿಂದ ಸಾಯಿ ಪಲ್ಲವಿಗೆ  ಮದುವೆಯಾಗಿದೆ ಎಂದು ಫೋಟೋ ಸಮೇತ ವೈರಲ್ ಆಗಿತ್ತು. ಈ ಕುರಿತು ನಟಿ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಾಮಾನ್ಯವಾಗಿ, ನಾನು ವದಂತಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆ ಬಗ್ಗೆ ನನಗೆ ಭಯವೂ ಇಲ್ಲ. ಆದರೆ ಆ ಸುದ್ದಿಗಳು ನನ್ನ ಕುಟುಂಬವೇ ಆಗಿರುವ ಸ್ನೇಹಿತರನ್ನು ಒಳಗೊಂಡು ಅವರ ಮೇಲೆ ಪರಿಣಾಮ ಬೀರುತ್ತಿದೆ ಎಂದಾಗ ನಾನು ಮಾತನಾಡಲೇ ಬೇಕಾಗಿದೆ. ನನ್ನ ಸಿನಿಮಾದ ಪೂಜಾ ಸಮಾರಂಭದ ಫೋಟೋವನ್ನು ಉದ್ದೇಶಪೂರ್ವಕವಾಗಿ ಕ್ರಾಪ್ ಮಾಡಿ ವೈರಲ್ ಮಾಡಲಾಗುತ್ತಿದೆ. ಹಣ ಬಲದ ಮೂಲಕ ಅನಾಮಿಕ ಖಾತೆಗಳನ್ನು ಬಳಸಿ ಕೆಟ್ಟ ಉದ್ದೇಶದಿಂದ ಆ ಫೋಟೋವನ್ನು ವೈರಲ್ ಮಾಡಲಾಗಿದೆ. ನನ್ನ ಕೆಲಸದ ಬಗ್ಗೆ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳಬೇಕಾದ ಸಮಯದಲ್ಲಿ, ಈ ರೀತಿಯ ಅನವಶ್ಯಕ ವಿಷಯಗಳ ಬಗ್ಗೆ ವಿವರಿಸುವ ಸನ್ನಿವೇಶ ಸೃಷ್ಟಿಯಾಗಿರುವ ಬಗ್ಗೆ ಬೇಸರವಿದೆ. ಈ ರೀತಿಯ ಅಸ್ವಸ್ಥತೆಯನ್ನು ಉಂಟುಮಾಡುವುದು ಬಹಳ ಹೀನಾಯ ಎಂದು ಸಾಯಿ ಪಲ್ಲವಿ ಬೇಸರ ಹೊರಹಾಕಿದ್ದಾರೆ.

Video Top Stories