Asianet Suvarna News Asianet Suvarna News

ನನಗೆ ಬೀಳುವ ಕಲ್ಲಿನಿಂದ ರಕ್ತ ಸುರಿಯುತ್ತದೆ, ಅದನ್ನು ಹೇಗೆ ಒಪ್ಪಲಿ?: ಸುದೀಪ್'ಗೆ 'ಕಿರಿಕ್' ಬೆಡಗಿ ಪ್ರಶ್ನೆ

ರಶ್ಮಿಕಾ ಮಂದಣ್ಣಗೆ ಬುದ್ಧಿಮಾತು ಹೇಳಿದ್ದ ನಟ ಕಿಚ್ಚ ಸುದೀಪ್‌ಗೆ, ಇದೀಗ ಕಿರಿಕ್ ಬೆಡಗಿ ಮರು ಪ್ರಶ್ನೆ ಮಾಡಿದ್ದಾರೆ. 

ಇತ್ತೀಚೆಗೆ ನನ್ನ ನೆಚ್ಚಿನ ನಟನ ಸಂದರ್ಶನ ನೋಡಿದೆ. ನಿಮಗೆ ಹಾರ ಬೀಳುತ್ತದೆ ಎಂದ್ಮೇಲೆ, ಮೊಟ್ಟೆ, ಟೊಮೆಟೋ, ಕಲ್ಲು ಕೂಡ ಬೀಳಬಹುದು. ನೀವು ಎಲ್ಲರಿಗೂ ಸಿದ್ಧರಿರಬೇಕು ಅಂದಿದ್ರು. ನಾನು ಆ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಯಾಕಂದ್ರೆ ನಾನು ಪಬ್ಲಿಕ್ ಫಿಗರ್ ಎಂದು ನಟಿ ರಶ್ಮಿಕಾ ಮಂದಣ್ಣ ಸುದೀಪ್ ಹೇಳಿಕೆಗೆ ಉತ್ತರ ನೀಡಿದ್ದಾರೆ. ಆದ್ರೆ ಆ ಕಲ್ಲು ನನಗೆ ಪೆಟ್ಟು ಮಾಡುತ್ತಿದೆ, ಅದರಿಂದ ನೋವಾಗಿ ರಕ್ತ ಸುರಿಯುತ್ತದೆ ಅಂದ್ರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಅಂತ ರಶ್ಮಿಕಾ ಹೇಳಿದ್ದಾರೆ.ರಶ್ಮಿಕಾ ಮಂದಣ್ಣ ಬರೀ ಕಿಚ್ಚನ ಮಾತಿಗೆ ಮಾತ್ರ ಉತ್ತರ ಕೊಟ್ಟಿಲ್ಲ. ವಿಜಯ್ ದೇವರಕೊಂಡ ಜೊತೆಗಿನ ಲವ್ ಗಾಸಿಪ್'ಗೂ ಆನ್ಸರ್ ಮಾಡಿದ್ದಾರೆ. ಇಬ್ಬರು ಹೊಸ ವರ್ಷವನ್ನು ಮಾಲ್ಡೀವ್ಸ್'ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ ಅನ್ನೋ ವಿಚಾರಕ್ಕೂ ಉತ್ತರ ಕೊಟ್ಟಿದ್ದಾರೆ.