ವಿಚಿತ್ರ ಬೇಡಿಕೆಯಿಟ್ಟ ಅಭಿಮಾನಿಯ ಆಸೆಯನ್ನು ರಶ್ಮಿಕಾ ಈಡೇರಿಸಿದ್ರಾ?

ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‍ನಲ್ಲಿ ತುಂಬಾ ಬ್ಯುಸಿಯಾಗಿದ್ದು, ತಮ್ಮ ನಟನೆಯ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಈ ಚಮಕ್ ಹುಡುಗಿಗೆ ಅದೆಷ್ಟೋ ಅಭಿಮಾನಿಗಳ ಬಳಗವೇ ಇದೆ. ರಶ್ಮಿಕಾ ಮಂದಣ್ಣ ಅಂದ್ರೆ ಕ್ರೇಜ್, ಹೋದ ಕಡೆಯೆಲ್ಲಾ ಅಭಿಮಾನಿಗಳು ರಶ್ಮಿಕಾ ನೋಡಿ ಖಷಿಯಾಗ್ತಿದ್ದಾರೆ. 

Share this Video
  • FB
  • Linkdin
  • Whatsapp

ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‍ನಲ್ಲಿ ತುಂಬಾ ಬ್ಯುಸಿಯಾಗಿದ್ದು, ತಮ್ಮ ನಟನೆಯ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಈ ಚಮಕ್ ಹುಡುಗಿಗೆ ಅದೆಷ್ಟೋ ಅಭಿಮಾನಿಗಳ ಬಳಗವೇ ಇದೆ. ರಶ್ಮಿಕಾ ಮಂದಣ್ಣ ಅಂದ್ರೆ ಕ್ರೇಜ್, ಹೋದ ಕಡೆಯೆಲ್ಲಾ ಅಭಿಮಾನಿಗಳು ರಶ್ಮಿಕಾ ನೋಡಿ ಖಷಿಯಾಗ್ತಿದ್ದಾರೆ. ಕನ್ನಡ ಚಿತ್ರರಂಗದ ಮೂಲಕ ತಮ್ಮ ವೃತ್ತಿ ಜೀವನ ಶುರು ಮಾಡಿದಾಕೆ, ಬಾಲಿವುಡ್, ಟಾಲಿವುಡ್‍ನಲ್ಲಿ ಬಹುಬೇಡಿಯ ನಟಿ ಆಗಿದ್ದಾರೆ. ಸದಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವುದರಿಂದ, ಬೇರೆ ಬೇರೆ ಕಡೆ ಶೂಟಿಂಗ್‌ಗಾಗಿ ತೆರಳುತ್ತಾರೆ. ಹೀಗೆ ಹೋಗುವಾಗ ಹುಚ್ಚು ಅಭಿಮಾನಿ ಒಬ್ಬ ತನ್ನ ಎದೆ ಮೇಲೆ ಆಟೋಗ್ರಾಫ್ ಹಾಕಿ ಎಂದು ಹಠ ಹಿಡಿದು ಹಾಕಿಸಿಕೊಂಡು ಹೋಗಿದ್ದಾನೆ. ಹೌದು! ಗುಡ್ ಬೈ ಚಿತ್ರದ ಪ್ರಮೋಶನ್‍ಗೆ ಹೋಗಿದ್ದ ರಶ್ಮಿಕಾ ಅವರಿಗೆ ಅಭಿಮಾನಿಯೊಬ್ಬ ಗೋಗರೆದು ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ನೀವು ಅಂದ್ರೆ ತುಂಬಾ ಇಷ್ಟ ನಾನು ನಿಮ್ಮ ದೊಡ್ಡ ಅಭಿಮಾನಿ ಎಂದಿದ್ದಾನೆ. ರಶ್ಮಿಕಾಗೂ ಅದನ್ನು ಕಂಡು ಖುಷಿಯಾಗಿದೆ. ಮೇಡಂ ನಿಮ್ಮ ಆಟೋಗ್ರಾಫ್ ಬೇಕು ಎನ್ನುತ್ತಾನೆ. ಹಾಕಲು ಹೋದ್ರೆ, ಎದೆ ಮೇಲೆ ಆಟೋಗ್ರಾಫ್ ಬೇಕೇ ಬೇಕು ಎನ್ನುತ್ತಾನೆ. ಕೊನೆಗೆ ರಶ್ಮಿಕಾ ಅಭಿಮಾನಿ ಎದೆ ಮೇಲೆ ಆಟೋಗ್ರಾಫ್ ಹಾಕಿ ಹೋಗ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Related Video