Nayanthara Marriage: ಬಾಯ್‍ಫ್ರೆಂಡ್ ವಿಘ್ನೇಶ್ ಜೊತೆ ಗುಟ್ಟಾಗಿ ಮದುವೆಯಾದ್ರಾ ನಯನತಾರಾ?
ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ನಯನತಾರ ಕೊನೆಗೂ ಮದುವೆಯ ಸುದ್ದಿ ಕೊಟ್ಟಿದ್ದಾರೆ. ಬಾಯ್‍ಫ್ರೆಂಡ್ ವಿಘ್ನೇಶ್ ಶಿವನ್ ಜತೆ ಕಾಣಿಸಿಕೊಳ್ಳುತ್ತಿದ್ದ ನಯನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಾಲಿವುಡ್‌ನ (Kollywood) ಲೇಡಿ ಸೂಪರ್ ಸ್ಟಾರ್ ನಯನತಾರ (Nayanthara) ಕೊನೆಗೂ ಮದುವೆಯ ಸುದ್ದಿ ಕೊಟ್ಟಿದ್ದಾರೆ. ಬಾಯ್‍ಫ್ರೆಂಡ್ ವಿಘ್ನೇಶ್ ಶಿವನ್ (Vignesh Shivan) ಜತೆ ಕಾಣಿಸಿಕೊಳ್ಳುತ್ತಿದ್ದ ನಯನಾ ವೈವಾಹಿಕ (Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರು ರಹಸ್ಯವಾಗಿ ಮದುವೆಯಾಗಿದ್ದಾರೆ (Social Media) ಎನ್ನುವುದು ಹಾಟ್ ಟಾಪಿಕ್. ನಯನತಾರಾ ಮತ್ತು ವಿಘ್ನೇಶ್ ಚೆನ್ನೈನ ದೇವಾಲಯವೊಂದಜ್ಜೆ ಜತೆಯಾಗಿ ಭೇಟಿ ನೀಡಿರುವ ಪೋಟೋಗಳು ಮದುವೆ ಕತೆ ಹೇಳುತ್ತಿವೆ. ಕಾಳಿಗಂಬಾಳ್ ದೇವಸ್ಥಾನಕ್ಕೆ ಜೋಡಿ ಭೇಟಿ ನೀಡಿರುವ ಚಿತ್ರಗಳು ವೈರಲ್ ಆಗುತ್ತವೆ.
Rashmika Mandanna: ನ್ಯಾಷ್‌ನಲ್ ಕ್ರಶ್ ರಶ್ಮಿಕಾ ಬಟ್ಟೆ ಡಿಸೈನರ್ ಯಾರು ಗೊತ್ತಾ?
ಅಭಿಮಾನಿಗಳು ಈ ಚಿತ್ರವನ್ನು ಬಹಳ ಗಂಭೀರವಾಗಿ ಗಮನಿಸಿದ್ದಾರೆ. ನಯನತಾರಾ ಸಿಂಧೂರ ಧರಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಅಭಿಮಾನಿಗಳು ನಯನತಾರಾ ಮತ್ತು ವಿಘ್ನೇಶ್ ದಾಂಪತ್ಯ ಜೀವನದ ಶುಭ ಕೋರಿದ್ದಾರೆ. ಜೋಡಿ ಭೇಟಿ ನೀಡಿದ ಸಂದರ್ಭ ಅಭಿಮಾನಿಗಳು ಮುತ್ತಿಗೆ ಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ನಟಿ ಹಣೆಯ ಮೇಲೆ ಸಿಂಧೂರ ಗಮನಿಸಿ 'ಹ್ಯಾಪಿ ಮ್ಯಾರಿಡ್ ಲೈಫ್ ಟು ಯು ಡಿಯರ್'. 'ಸುಂದರ ಜೋಡಿ ದೇವರು ಆಶೀರ್ವದಿಸಲಿ', ಮದುವೆಯಾದ್ರಾ, ಹೀಗೆ ಹಾರೈಕೆಯೊಂದಿಗೆ ತರೇವಾರಿ ಕಮೆಂಟ್ ಗಳು ಹರಿದು ಬಂದಿವೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ರಿಲೇಶನ್ ಶಿಪ್‌ನಲ್ಲಿ ಇದ್ದು ಸರಿ ಸುಮಾರು ಏಳು ವರ್ಷಗಳೇ ಸಂದಿವೆ.
ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies