Rashmika Mandanna: ನ್ಯಾಷ್‌ನಲ್ ಕ್ರಶ್ ರಶ್ಮಿಕಾ ಬಟ್ಟೆ ಡಿಸೈನರ್ ಯಾರು ಗೊತ್ತಾ?

ಇತ್ತೀಚೆಗಷ್ಟೇ ಯೂಟ್ಯೂಬ್​ ಚಾನೆಲ್ ಶುರು ಮಾಡಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ನಿಮಗೆ ಬಟ್ಟೆ ಡಿಸೈನ್ ಮಾಡುವವರು ಯಾರು ಅಂತಾ ಪ್ರಶ್ನೆಯನ್ನು ಕೇಳಿದ್ದಾರೆ.

Share this Video
  • FB
  • Linkdin
  • Whatsapp

ಇತ್ತೀಚೆಗಷ್ಟೇ ಯೂಟ್ಯೂಬ್​ ಚಾನೆಲ್ (Youtube Channel) ಶುರು ಮಾಡಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ (Rashmika Mandanna) ಅವರ ಅಭಿಮಾನಿಗಳು (Fans) ಸೋಷಿಯಲ್ ಮೀಡಿಯಾದಲ್ಲಿ (Social Media) ನಿಮಗೆ ಬಟ್ಟೆ ಡಿಸೈನ್ ಮಾಡುವವರು ಯಾರು ಅಂತಾ ಪ್ರಶ್ನೆಯನ್ನು ಕೇಳಿದ್ದಾರೆ. ಅಂದಹಾಗೆ ರಶ್ಮಿಕಾಗೆ ಯಾವುದೇ ಪರ್ಸನಲ್ ಡಿಸೈನರ್ (Personal Designer) ಇಲ್ಲವಂತೆ. ಮಾತ್ರವಲ್ಲದೇ ಯಾವುದಾದರೂ ಇವೆಂಟ್, ಶೋಗಳಿಗೆ ಹೋದಾಗ ಮಾತ್ರ ಡಿಸೈನರ್‌ಗಳ ಬಳಿ ಬಟ್ಟೆ ತೆಗೆದುಕೊಳ್ಳುತ್ತಾರಂತೆ. ಜೊತೆಗೆ ಅವರೇ ಸ್ಪಾನ್ಸರ್ ಮಾಡುತ್ತಾರಂತೆ. 

Rashmika Mandanna: ಯೂಟ್ಯೂಬ್​ ಚಾನೆಲ್ ಶುರು ಮಾಡಿದ ನ್ಯಾಷನಲ್ ಕ್ರಶ್ ರಶ್ಮಿಕಾ

ಇನ್ನು ರಶ್ಮಿಕಾ ರಿಯಲ್ ಲೈಫ್‌ನಲ್ಲಿ ತುಂಬಾನೇ ಸಿಂಪಲ್. ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವೊಂದು ಪರ್ಸನಲ್ ಫೋಟೋ ಹಂಚಿಕೊಂಡಿರುವ ರಶ್ಮಿಕಾ ಪಕ್ಕಾ ಮನೆ ಹುಡುಗಿ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಬಹುತೇಕ ಕಲೆಕ್ಷನ್‌ಗಳು ಟೀ-ಶರ್ಟ್‌. ಸಾಮಾನ್ಯ ಹುಡುಗಿ ರೀತಿಯಲ್ಲಿ ಮೇಕಪ್ ಇಲ್ಲದೆ ಕೂದಲು ಕಟ್ಟಿಕೊಂಡು ನಾಯಿ ಮರಿಗಳನ್ನು ಮುದ್ದು ಮಾಡುತ್ತಿರುವ ಫೋಟೋಗಳು ಸಖತ್ ವೈರಲ್ (Viral) ಆಗಿತ್ತು. ಇನ್ನು ರಶ್ಮಿಕಾ, ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಜೊತೆಗೆ 'ಮಿಷನ್ ಮಜ್ನು' (Mission Majnu) ಚಿತ್ರದ ಮೂಲಕ ಮೊದಲ ಬಾರಿಗೆ ಬಾಲಿವುಡ್‌ಗೆ (Bollywood) ಎಂಟ್ರಿ ನೀಡುತ್ತಿದ್ದಾರೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video