Asianet Suvarna News Asianet Suvarna News

Vijay- Vishal: ಕಾಲಿವುಡ್‌ನಲ್ಲಿ ಸ್ಟಾರ್‌ಗಳ ರಾಜಕೀಯ ದಂಗಲ್..! ವಿಜಯ್ ರಾಜಕೀಯ ಎಂಟ್ರಿ, ವಿಶಾಲ್‌ಗೆ ಉರಿ ಉರಿ..!

ಲೋಕಸಭೆ ಎಲೆಕ್ಷನ್ ಹತ್ತಿರದಲ್ಲೇ ಇದೆ. ತಮಿಳು ನಾಡಿನಲ್ಲಿ ಈ ಭಾರಿ ಚುನಾವಣೆ ಬಿಸಿ ಹೆಚ್ಚಾಗಿದೆ. ತಮಿಳ್ ಮಕ್ಕಳ ಬಳಿ ಓಟ್ ಕೊಡಿ ಅಂತ ಸ್ಟಾರ್‌ಗಳು ಕಣಕ್ಕಿಳಿಯೋ ಎಲ್ಲಾ ಸಾಧ್ಯತೆ ಇದೆ.

First Published Feb 10, 2024, 11:32 AM IST | Last Updated Feb 10, 2024, 11:33 AM IST

ಕಾಲಿವುಡ್‌ನ ನಂಬರ್ ಒನ್ ನಟ ದಳಪತಿ ವಿಜಯ್ ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಿದ್ದಾರೆ. ಇದೀಗ ಕಾಲಿವುಡ್‌ನಲ್ಲಿ(Kollywood) ಸ್ಟಾರ್‌ಗಳ ರಾಜಕೀಯ ದಂಗಲ್ ಶುರುವಾಗಿದೆ. ವಿಜಯ್ ರಾಜಕೀಯ ಎಂಟ್ರಿಯಿಂದ ನಟ ವಿಶಾಲ್ ಗೆ(Vishal) ಯಾಕೋ ಉರಿ ಉರಿ ಶುರುವಾಗಿದೆ. ದಳಪತಿ ವಿಜಯ್(Dalpati Vijay) ಬಳಿಕ ತಮಿಳು ನಾಡಿನ ರಾಜಕೀಯಕ್ಕೆ(Politics) ಎಂಟ್ರಿ ಕೊಡಲು ಮತ್ತೊಬ್ಬ ಸ್ಟಾರ್ ನಟ ವಿಶಾಲ್ ಕೂಡ ಎಂಟ್ರಿ ಕೊಡೋ ಸೂಚನೆ ಕೊಟ್ಟಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಬಹಿರಂಗ ಪತ್ರ ಬರೆದಿರೋ ವಿಶಾಲ್, ‘ನಾನು ಎಂದೂ ಸಹ ರಾಜಕೀಯವನ್ನು ಲಾಭ ಮಾಡುವ ಉದ್ಯಮವಾಗಿ ನೋಡಿಲ್ಲ. ನಾನು ಪ್ರಸ್ತುತ ರಾಜಕೀಯ ಪ್ರವೇಶ ಮಾಡುತ್ತಿಲ್ಲ. ಆದರೆ ಪ್ರಕೃತಿ ಬಯಸಿದರೆ ಭವಿಷ್ಯದಲ್ಲಿ ಜನರ ಸೇವೆ ಮಾಡಲು ರಾಜಕೀಯಕ್ಕೆ ಬರಬಹುದು’ ಎಂದಿದ್ದಾರೆ. ಜೊತೆಗೆ ವಿಜಯ್ ವೈಯಕ್ತಿಕ ಲಾಭಕ್ಕಾಗಿ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆಂದು ಹೇಳಿದ್ದಾರೆ. ನಟ ವಿಶಾಲ್ ರಾಜಕೀಯದಲ್ಲಿ ಸಕ್ರೀಯವಾಗಿಲ್ಲ ಆಂದ್ರು ಪೊಲಿಟಿಕ್ಸ್ ಪಾಠ ಕಲಿತಿದ್ದಾರೆ. ತಮಿಳುನಾಡು ಫಿಲ್ಮ್ ಚೇಂಬರ್ನ ಅಧ್ಯಕ್ಷ ಆಗಿದ್ದ ವಿಶಾಲ್, ಈ ಹಿಂದೆ 2017ರಲ್ಲಿ ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್ಕೆ ನಗರ ವಿಧಾನಸಭೆ ಉಪಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ರು. ಆದ್ರೆ ವಿಶಾಲ್ನಾಮಪತ್ರ ತಿರಸ್ಕಾರವಾಗಿತ್ತು. ಈಗ ವಿಶಾಲ್ ಪೊಲಿಟಿಕ್ಸ್ ಎಂಟ್ರಿ ಬಗ್ಗೆ ಸುಳಿವು ಕೊಟ್ಟಂತೆ ಮಾತನಾಡಿದ್ದು, ದಳಪತಿ ವಿಜಯ್‌ಗೆ ಕೌಂಟರ್ ಕೊಡೋ ಕೆಲಸ ಶುರು ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  Darshan: ಬಿಟೌನ್ ಬಿಗ್ ಮ್ಯಾನ್ ಜೊತೆ ದರ್ಶನ್ ಶೋ ಆಫ್..! ಅಧಿರ ಸಂಜಯ್ ದತ್, ದರ್ಶನ್‌ ಫೋಟೋ ವೈರಲ್..!

Video Top Stories