6 ಸರ್ಜರಿ , 190 ಹೊಲಿಗೆ ಆದ್ರೂ ಕುಗ್ಗಿಲ್ಲ ಶಿವಣ್ಣನ ಎನರ್ಜಿ: ರೀ ಎಂಟ್ರಿಗೆ ಮುಹೂರ್ತ ಫಿಕ್ಸ್

ಶಿವರಾಜ್ ಕುಮಾರ್ ಅವರ ಯಶಸ್ವಿ ಸರ್ಜರಿ ಬಳಿಕ ಚೇತರಿಸಿಕೊಳ್ಳುತ್ತಿದ್ದು, ಅವರ 45 ಮತ್ತು ವೀರ ಚಂದ್ರಹಾಸ ಚಿತ್ರಗಳು ರಿಲೀಸ್‌ಗೆ ರೆಡಿ ಆಗಿವೆ. ಶಿವಣ್ಣನ ಮಾಸ್ ಲುಕ್ ಮತ್ತು 45 ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡವು ವಿಶಿಷ್ಟವಾಗಿ ಘೋಷಿಸಿದೆ.

First Published Jan 16, 2025, 11:33 AM IST | Last Updated Jan 16, 2025, 11:40 AM IST

ಅಭಿಮಾನಿಗಳ ಹಾರೈಕೆಯಿಂದ ಶಿವರಾಜ್ ಕುಮಾರ್ ಸರ್ಜರಿ ಯಶಸ್ವಿ ಆಗಿದ್ದು, ಶಿವಣ್ಣ ಚೇತರಿಸಿಕೊಳ್ತಾ ಇದ್ದಾರೆ. ಇನ್ನೇನಿದ್ದರೂ ಶಿವಣ್ಣ ರೀ ಎಂಟ್ರಿ ಒಂದೇ ಬಾಕಿ. ಸದ್ಯ 45 ಮತ್ತು ವೀರ ಚಂದ್ರಹಾಸ ಚಿತ್ರಗಳ ಝಲಕ್ ರಿಲೀಸ್ ಆಗಿದ್ದು  ಶಿವತಂಡವ ಶುರು ಆಗೋ ಸೂಚನೆ ಸಿಕ್ಕಿದೆ..

ಯೆಸ್ ಶಿವಣ್ಣನ ಕಂ ಬ್ಯಾಕ್​ಗೆ ದಿನಗಣನೆ ಶುರುವಾಗಿದೆ. ಅಮೇರಿಕದ ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸದ್ಯ ಚೇತರಿಸಿಕೊಳ್ತಾ ಇರೋ ಶಿವರಾಜ್​ಕುಮಾರ್ ಸದ್ಯದಲ್ಲೇ ನಿಮ್ಮೆದುರು ಬರ್ತಿನಿ ರೆಡಿ ಇರಿ ಅಂದಿದ್ದಾರೆ. ಸರ್ಜರಿ ಬಳಿಕ ಶಿವಣ್ಣ ಮಾತನಾಡಿದ್ದು, ಅವರ ಮಾತಲ್ಲಿದ್ದ ಎನರ್ಜಿಯನ್ನ ನೋಡಿ ಇದು ಸಣ್ಣ ಸರ್ಜರಿ ಅಂತ ಜನ ಅಂದುಕೊಂಡಿದ್ರು. ಆದ್ರೆ ಶಿವಣ್ಣ ಎದುರಿಸಿ ಗೆದ್ದಿರೋದು ಸಾಮಾನ್ಯ ಸರ್ಜರಿ ಅಲ್ಲ. ಶಿವಣ್ಣನಿಗೆ ಬರೊಬ್ಬರಿ 6 ಸರ್ಜರಿ ನಡೆದಿದ್ದು 190ಕ್ಕೂ ಅಧಿಕ ಇಂಟರ್​ನಲ್ ಸ್ಟಿಚ್ಚಸ್ ಹಾಕಲಾಗಿದೆ. 

ಹೌದು ಇಷ್ಟು ಗಂಭೀರ ಸರ್ಜರಿಗೆ ಒಳಗಾಗಿಯೂ ಶಿವಣ್ಣ ಫುಲ್ ಎನರ್ಜಿಟಿಕ್ ಆಗಿದ್ದಾರೆ. ಸದ್ಯದಲ್ಲೇ ಬೆಂಗಳೂರಿಗೆ ಬಂದು ಮತ್ತೆ ಬಣ್ಣ ಹಚ್ಚಲಿದ್ದಾರೆ. ಇನ್ನೂ ಶಿವಣ್ಣನಿಗಾಗಿ ಇಲ್ಲಿ ಹಲವು ಪ್ರಾಜೆಕ್ಟ್  ಕಾಯ್ತಾ ಇವೆ.   ಅದ್ರಲ್ಲೂ ಶಿವಣ್ಣನ ಮಾಸ್ ಲುಕ್ ಬಿಟ್ಟು 45 ಸಿನಿಮಾ ಟೀಂ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ‌ ಹಾಗೂ 2025ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ "45" ಚಿತ್ರ ಆಗಸ್ಟ್ 15,  ಸ್ವಾತಂತ್ರ್ಯ ದಿನೋತ್ಸವದಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಬಿಡುಗಡೆ ದಿನಾಂಕ ಘೋಷಣೆ ಮಾಡ್ತಾರೆ. ಆದರೆ "45" ಚಿತ್ರತಂಡ ವಿಭಿನ್ನವಾಗಿ ದಿನಾಂಕ ಘೋಷಣೆ ಮಾಡಿದೆ. ಡೇಟ್ ಅನೌನ್ಸ್ ಮೆಂಟ್ ಗಾಗಿಯೇ ನಿರ್ದೇಶಕ ಅರ್ಜುನ್ ಜನ್ಯ  3D ತಂತ್ರಜ್ಞಾನದಲ್ಲಿ ವಿಭಿನ್ನ ವಿಡಿಯೋ ಮಾಡಿಸಿದ್ದಾರೆ. ತಾಂತ್ರಿಕ ಶ್ರೀಮಂತಿಕೆಯಿಂದ ಕೂಡಿರುವ ಈ ವಿಡಿಯೋದಲ್ಲಿ ಸ್ಕೂಟರ್ ಏರಿ ಬರುವ ಶಿವರಾಜಕುಮಾರ್  , ಎದುರಾಳಿಗಳನ್ನ ಶೂಟ್ ಮಾಡ್ತಾ ಬರ್ತಾರೆ.. 

ಕೊನೆಗೆ ಒಂದು ಗುಡ್ಡವನ್ನ ಶೂಟ್ ಮಾಡಿದಾಗ ಅದು ಸಿಡಿದು, ಬಂಡೆಯಲ್ಲಿ ಮೂರು  ನಟರ ಭಾವಚಿತ್ರ ಮೂಡಿ, ಬಿಡುಗಡೆಯ ದಿನಾಂಕ ಘೋಷಣೆಯಾಗುತ್ತದೆ. ಕನ್ನಡದಲ್ಲಿ ಈ ತರಹದ ಪ್ರಯತ್ನ ತೀರ ಅಪರೂಪ ಎನ್ನಬಹುದು. ಸ್ಕೂಟರ್ ಓಡಿಸುತ್ತಾ ಬರುವ ಶಿವಣ್ಣನ ಸ್ಟೈಲಿಶ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಡಿಯೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆಯಾಗಿ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಶಿವಣ್ಣನ ಅನುಪಸ್ಥಿತಿಯಲ್ಲಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿರೋ ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಶೆಟ್ಟಿ , ಅರ್ಜುನ್ ಜನ್ಯ..  ಶಿವಣ್ಣ ಬರುತ್ತಲೇ ಮತ್ತೊಂದು ಬಿಗ್ ಗಿಫ್ಟ್ ಕೊಡ್ತೀವಿ ಅಂದಿದ್ದಾರೆ.

ಇನ್ನೂ 45 ಸಿನಿಮಾ ಜೊತೆಗೆ ಸಂಕ್ರಾಂತಿಗೆ ವೀರ ಚಂದ್ರಹಾಸ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ರವಿ ಬಸ್ರೂರು ಆಕ್ಷನ್ ಕಟ್ ಹೇಳಿರೋ ಈ ಸಿನಿಮಾದಲ್ಲಿ ಶಿವಣ್ಣ ಹಿಂದೆಂದೂ ಕಾಣಿಸದಂಥಾ ಪಾತ್ರದಲ್ಲಿ ಮಿಂಚಲಿದ್ದಾರೆ. ಒಟ್ಟಾರೆ ಶಿವಣ್ಣ ಚೇತರಿಸಿಕೊಳ್ತಾನೇ ಶಿವತಾಂಡವ ಶುರುವಾಗಲಿದೆ. ಅದನ್ನ ನೋಡೋಕೆ ನೀವು ಕೂಡ ಸಜ್ಜಾಗಿ.

Video Top Stories