Asianet Suvarna News Asianet Suvarna News

ಬಾಲಿವುಡ್‌ ನಟಿ ಜೊತೆ ಡಾರ್ಲಿಂಗ್‌ ಪ್ರಭಾಸ್‌ ಡೇಟಿಂಗ್!

ಬಾಹುಬಲಿ ಸೂಪರ್ ಸ್ಟಾರ್ ಪ್ರಭಾಸ್‌ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರು ತಮ್ಮ ಡೇಟಿಂಗ್ ವಿಷಯವಾಗಿ ಸೌಂಡ್ ಮಾಡುತ್ತಿದ್ದಾರೆ. ಹೌದು! ಈ ಹಿಂದೆ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಹೆಸರು ಕೇಳಿ ಬಂದಿತ್ತು. 

Sep 22, 2022, 9:00 PM IST

ಬಾಹುಬಲಿ ಸೂಪರ್ ಸ್ಟಾರ್ ಪ್ರಭಾಸ್‌ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರು ತಮ್ಮ ಡೇಟಿಂಗ್ ವಿಷಯವಾಗಿ ಸೌಂಡ್ ಮಾಡುತ್ತಿದ್ದಾರೆ. ಹೌದು! ಈ ಹಿಂದೆ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಹೆಸರು ಕೇಳಿ ಬಂದಿತ್ತು. ಆದರೆ ನಾವಿಬ್ಬರೂ ಫ್ರೆಂಡ್ಸ್ ಎಂದು ತಿಳಿಸಿ ಗಾಸಿಪ್‌ಗೆ ಫುಲ್ ಸ್ಟಾಪ್ ಇಟ್ಟಿದ್ದರು. ಇದೀಗ ಅನುಷ್ಕಾ ಬಳಿಕ ಬಾಲಿವುಡ್ ನಟಿ ಕೃತಿ ಸನೂನ್ ಜೊತೆ ಪ್ರಭಾಸ್ ಹೆಸರು ಕೇಳಿ ಬಂದಿದೆ. ಇತ್ತೀಚೆಗೆ ಬಾಲಿವುಡ್‌ನ ಜನಪ್ರಿಯ ಶೋ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಟಿ ಕೃತಿ ಭಾಗವಹಿಸಿದ್ದರು. ಈ ಶೋನಲ್ಲಿ ಸೆಲೆಬ್ರಿಟಿ ಫ್ರೆಂಢ್ಸ್‌ಗೆ ಕರೆಸುವ ನಿಯಮವಿದೆ. ಅದರಂತೆ ಕೃತಿ ಕೂಡ ಶೋನಲ್ಲಿ ಪ್ರಭಾಸ್‌ಗೆ ಕರೆ ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಪ್ರಭಾಸ್‌ಗೆ ಕಾಲ್ ಮಾಡಿ ಕರಣ್‌ಗೆ ಹಾಯ್ ಹೇಳುವಂತೆ ಹೇಳಿದ್ದಾರೆ. ಅದರಂತೆ ಪ್ರಭಾಸ್ ಕೂಡ ಮಾತನಾಡಿದ್ದಾರೆ. ನೀವು ಸೂಪರ್ ಆಮೇಲೆ ಕಾಲ್ ಮಾಡುತ್ತೇನೆ ಎಂದಿದ್ದಾರೆ. ಪ್ರಭಾಸ್ ಕೂಡ ಓಕೆ ಟೇಕ್ ಕೇರ್ ಬೈ ಎಂದಿದ್ದಾರೆ. ಶೋನಲ್ಲಿ ಇವರಿಬ್ಬರ ಬಾಂಧವ್ಯ ನೋಡಿ, ಇವರಿಬ್ಬರ ಡೇಟಿಂಗ್ ವಿಚಾರ ಸಖತ್ ಸದ್ದು ಮಾಡುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment