Adipurush: ಪ್ರಭಾಸ್‌-ಸೈಫ್‌ ಅಲಿ ಖಾನ್‌ ಚಿತ್ರದ ರಿಲೀಸ್​ ಡೇಟ್​ ಅನೌನ್ಸ್!

ಬರೋಬ್ಬರಿ 400 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ 'ಆದಿಪುರುಷ್‌' ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. 2023, ಜನವರಿ 12ಕ್ಕೆ ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. 
 

Share this Video
  • FB
  • Linkdin
  • Whatsapp

ಬರೋಬ್ಬರಿ 400 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ 'ಆದಿಪುರುಷ್‌' (Adipurush) ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. 2023, ಜನವರಿ 12ಕ್ಕೆ ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ಚಿತ್ರವು ಹಿಂದು ಮಹಾಕಾವ್ಯ ರಾಮಾಯಣದ ಕಥಾಹಂದರವನ್ನು ಒಳಗೊಂಡಿದೆ. ದುಷ್ಟ ಶಕ್ತಿಯ ವಿರುದ್ಧದ ಗೆಲುವನ್ನು ಸಂಭ್ರಮಿಸುವ ಸಿನಿಮಾವನ್ನು ಓಂ ರಾವತ್‌ (Om Raut) ಅವರು ನಿರ್ದೇಶಿಸಿದ್ದಾರೆ. 

Adipurush Movie: ಬರೋಬ್ಬರಿ 20 ಸಾವಿರ ಚಿತ್ರಮಂದಿರಗಳಲ್ಲಿ ಪ್ರಭಾಸ್‌ ಸಿನಿಮಾ ರಿಲೀಸ್​!

ನಟ ಪ್ರಭಾಸ್‌ (Prabhas) ಅವರು ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಸೈಫ್‌‌ ಅಲಿ ಖಾನ್‌ (Saif Ali Khan) ಅವರು ರಾವಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೀತೆ ಪಾತ್ರದಲ್ಲಿ ಕೃತಿ ಸನೂನ್ (Kriti Sanon) ಕಾಣಿಸಿಕೊಳ್ಳುತ್ತಿದ್ದು, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಾಗೆ ನಟಿಸಿದ್ದಾರೆ. ವಿಶೇಷವಾಗಿ ಭಾರತದ ಯಾವುದೇ ಸಿನಿಮಾಗಳೂ ಬಿಡುಗಡೆ ಆಗದಷ್ಟು ಹೆಚ್ಚು ಸಂಖ್ಯೆಯ ಸ್ಕ್ರೀನ್‌ಗಳಲ್ಲಿ 'ಆದಿಪುರುಷ್' ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕರು (Producer) ಸಜ್ಜಾಗಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video