Video Viral: ಕನ್ನಡದ ನಟನಿಗೆ ಥಿಯೇಟರ್‌ನಲ್ಲೇ ಮಹಿಳೆಯಿಂದ ಕಪಾಳಮೋಕ್ಷ!

ಹೈದರಾಬಾದ್‌ನಲ್ಲಿ 'ಲವ್ ರೆಡ್ಡಿ' ಚಿತ್ರ ಪ್ರದರ್ಶನದ ವೇಳೆ ಮಹಿಳೆಯೊಬ್ಬರು ನಟ ಎನ್‌.ಟಿ.ರಾಮಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್‌ನಿಂದ ಭಾವುಕರಾದ ಮಹಿಳೆ ಈ ಹಲ್ಲೆ ನಡೆಸಿದ್ದಾರೆ.

Share this Video
  • FB
  • Linkdin
  • Whatsapp

ಲವ್ ರೆಡ್ಡಿ ಸಿನಿಮಾ ತಂಡದ ನಟನ ಮೇಲೆ ಓರ್ವ ಮಹಿಳೆ ಥಿಯೇಟರ್‌ನಲ್ಲಿ ಹಲ್ಲೆ ನಡೆಸಿದ್ದಾರೆ. ಈ ಘಟನೆ ಹೈದರಾಬಾದ್‌ನ ನಿಜಾಂಪೇಟೆಯ ಜಿಪಿಆರ್ ಮಾಲ್ ಮಲ್ಟಿಪ್ಲೆಕ್ಸ್‌ನಲ್ಲಿ ನಡೆದಿದೆ. ಸಿನಿಮಾದ ಕ್ಲೈಮ್ಯಾಕ್ಸ್‌ ನೋಡಿ ಭಾವುಕರಾದ ಪ್ರೇಕ್ಷಕಿ, ತಂದೆಯ ಪಾತ್ರಧಾರಿ ಎನ್‌.ಟಿ.ರಾಮಸ್ವಾಮಿ ನಿಜವಾಗಿಯೂ ಪ್ರೇಮ ಜೋಡಿಯನ್ನು ಬೇರ್ಪಡಿಸಿದ್ದಾರೆ ಎಂದು ಭಾವಿಸಿದ್ದಾರೆ. ಥಿಯೇಟರ್‌ನಲ್ಲಿ ಕಂಡ ರಾಮಸ್ವಾಮಿಯವರನ್ನು ನಿಂದಿಸುತ್ತಾ ಹಲ್ಲೆ ನಡೆಸಿದ್ದಾರೆ. ಇದರಿಂದ ಲವ್ ರೆಡ್ಡಿ ತಂಡ ಒಮ್ಮೆಲೇ ಆಘಾತಕ್ಕೊಳಗಾಯಿತು. ನಾಯಕ ಅಂಜನ್ ರಾಮಚಂದ್ರ, ನಾಯಕಿ ಶ್ರಾವಣಿ, ನಿರ್ದೇಶಕ ಸ್ಮರಣ್ ರೆಡ್ಡಿ ಮತ್ತು ಇತರ ಸದಸ್ಯರು ಪ್ರೇಕ್ಷಕಿಯನ್ನು ತಡೆದು ಸಮಾಧಾನಪಡಿಸಿದರು. ಎನ್‌.ಟಿ.ರಾಮಸ್ವಾಮಿ ತಂದೆಯ ಪಾತ್ರ ಮಾಡಿದ್ದಾರೆ, ಸಿನಿಮಾದಲ್ಲಿ ತೋರಿಸಿದಂತೆ ಕೆಟ್ಟವರಲ್ಲ ಎಂದು ತಿಳಿಸಿದರು. ಲವ್ ರೆಡ್ಡಿ ಸಿನಿಮಾ ಅಕ್ಟೋಬರ್ 18 ರಂದು ಬಿಡುಗಡೆಯಾಗಿದ್ದು, ಧನಾತ್ಮಕ ಪ್ರತಿಕ್ರಿಯೆಯೊಂದಿಗೆ ಥಿಯೇಟರ್‌ಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಭಾವನಾತ್ಮಕ ಪ್ರೇಮಕಥೆಯಾಗಿರುವುದರಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video