ಅರ್ಜುನ್ ಸರ್ಜಾ ಸೈನ್ಯದಲ್ಲಿ ಹಸು ಕರುಗಳು, ವೀಕೆಂಡ್‌ನಲ್ಲಿ ಕೊಟ್ಟಿಗೆ ಕೆಲಸದಲ್ಲಿ ಬ್ಯುಸಿ!

ಅರ್ಜುನ್ ಸರ್ಜಾ ಈಗ ಹಸು ಕರುಗಳ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚೆನ್ನೈನ ಮಧುಗಿರಿಯಲ್ಲಿ ಫಾರ್ಮ್ ಹೌಸ್ ಹೊಂದಿರೋ ಅರ್ಜುನ್ ಸರ್ಜಾ ವಿವಿಧ ತಳಿಯ ಹಸುಗಳನ್ನ ಸಾಕಿದ್ದಾರೆ.

Share this Video
  • FB
  • Linkdin
  • Whatsapp

ಅರ್ಜುನ್ ಸರ್ಜಾ (Arjun Sarja) ಈಗ ಹಸು ಕರುಗಳ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚೆನ್ನೈನ ಮಧುಗಿರಿಯಲ್ಲಿ ಫಾರ್ಮ್ ಹೌಸ್ (Farm House) ಹೊಂದಿರೋ ಅರ್ಜುನ್ ಸರ್ಜಾ ವಿವಿಧ ತಳಿಯ ಹಸುಗಳನ್ನ ಸಾಕಿದ್ದಾರೆ. ವೀಕ್ಎಂಡ್ ಬಂದ್ರೆ ಫಾರ್ಮ್ ಹೌಸ್ಗೆ ಹೋಗೋ ಸರ್ಜಾ ಇಡೀ ಕುಟುಂಬ ಹಸು ಕರುಗಳ ಲಾಲನೆ ಪಾಲನೆ ಮಾಡ್ತಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

100 ಕೋಟಿ ಕ್ಲಬ್‌ಗೆ ಹೋಗುತ್ತಾ 777 ಚಾರ್ಲಿ? ಒಂದೇ ದಿನದ ಕಲೆಕ್ಷನ್ ಇಷ್ಟೊಂದಾ..?

ಸರ್ಜಾ ಫಾರ್ಮ್ ಹೌಸ್ 18 ಎಕರೆ ವಿಸ್ತೀರ್ಣದಲ್ಲಿದೆ. ಈ ಫಾರ್ಮ್ ಹೌಸ್ನಲ್ಲಿ ಮಾವಿನ ತೋಟ ಇದೆ. ಒಂದು ಲೆಕ್ಸ್ಯೂರಿ ಮನೆ ಇದೆ. ಅಷ್ಟೆ ಅಲ್ಲ 5 ಲಕ್ಷಕ್ಕೆ ಬೆಲೆ ಬಾಳೋ ಗಿರ್ ತಳಿಯ ಹಸುಗಳಿವೆ. ಇದರ ಜೊತೆ ಇತ್ತೀಚೆಗಷ್ಟೆ ಅರ್ಜುನ್ ಸರ್ಜಾ ಕಟ್ಟಿಸಿದ್ದ ದೇವಸ್ಥಾನ ಕೂಡ ಇದೇ ಫಾರ್ಮ್ ಹೌಸ್ನಲ್ಲೇ ಇದೆ. 

ಇತ್ತೀಚೆಗೆ ಸ್ಟಾರ್ಗಳು ಫಾರ್ಮ್ ಹೌಸ್ಗಳನ್ನ ಮಾಡಿಕೊಂಡು ಹಸು ಕರುಗಳ ಸಾಕೋ ಕೆಲಸಕ್ಕೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಕನ್ನಡದ ನಟ ನಿಖಿಲ್ ಕುಮಾರ್ ಸ್ವಾಮಿ ಕೂಡ ಬಿಡದಿ ಬಳಿ ಫಾರ್ಮ್ ಹೌಸ್ ಮಾಡಿದ್ದು. ಅಲ್ಲಿ ಹಸುಗಳನ್ನ ಸಾಕಿದ್ದಾರೆ. ನಟ ಧನ್ವೀರ್ ನಂಜನಗೂಡಿನಲ್ಲಿ ಫಾರ್ಮ್ ಹೌಸ್ ಹೊಂದಿದ್ದು, ಅಲ್ಲೂ ಹಸುಗಳನ್ನ ಬಿಟ್ಟಿದ್ದಾರೆ. ಅಷ್ಟೆ ಅಲ್ಲ ಉಪೇಂದ್ರ, ನಟ ಯಶ್ ಕೂಡ ಹತ್ತಾರು ಎಕರೆಯಲ್ಲಿ ಫಾರ್ಮ್ ಹೌಸ್ ಮಾಡಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ನಾಯಿ ಸಾಕಿ ಮಾಧರಿ ಎನಿಸಿಕೊಳ್ಳುತ್ತದ್ದ ಸ್ಟಾರ್ಸ್ ಈಗ ಹಸು ಕರುಗಳನ್ನ ಸಾಕುತ್ತಾ ಮಾಧರಿ ಆಗುತ್ತಿದ್ದಾರೆ. 

Related Video