100 ಕೋಟಿ ಕ್ಲಬ್ಗೆ ಹೋಗುತ್ತಾ 777 ಚಾರ್ಲಿ? ಒಂದೇ ದಿನದ ಕಲೆಕ್ಷನ್ ಇಷ್ಟೊಂದಾ..?

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕನಸು, ನಿರ್ದೇಶಕ ಕಿರಣ್ ರಾಜ್ ಕಲ್ಪನೆಯ ಕತೆ ಸೇರಿ ಆಗಿರೋ ಸಿನಿಮಾ 777 ಚಾರ್ಲಿ. ಒಂದು ನಾಯಿ ಮತ್ತು ಮನುಷ್ಯನ ಮಧ್ಯೆ ಇರೋ ಬಾಂಧವ್ಯದ ಕತೆಯನ್ನ ಮನ ಮುಟ್ಟುವಂತೆ ತೆರೆ ಮೇಲೆ ತಂದಿದ್ದಾರೆ ರಕ್ಷಿತ್ ಶೆಟ್ಟಿ ಹಾಗು ಕಿರಣ್ ರಾಜ್.

First Published Jun 13, 2022, 4:38 PM IST | Last Updated Jun 13, 2022, 4:59 PM IST

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಕನಸು, ನಿರ್ದೇಶಕ ಕಿರಣ್ ರಾಜ್ (Kiran Raj) ಕಲ್ಪನೆಯ ಕತೆ ಸೇರಿ ಆಗಿರೋ ಸಿನಿಮಾ 777 ಚಾರ್ಲಿ. ಒಂದು ನಾಯಿ ಮತ್ತು ಮನುಷ್ಯನ ಮಧ್ಯೆ ಇರೋ ಬಾಂಧವ್ಯದ ಕತೆಯನ್ನ ಮನ ಮುಟ್ಟುವಂತೆ ತೆರೆ ಮೇಲೆ ತಂದಿದ್ದಾರೆ ರಕ್ಷಿತ್ ಶೆಟ್ಟಿ ಹಾಗು ಕಿರಣ್ ರಾಜ್. ಕಳೆದ ಶುಕ್ರವಾರ ಬೆಳ್ಳಿತೆರೆಗೆ ಬಂದು ಇದೀಗ ಜನ ಮನ ಗೆದ್ದಿರೋ ಗೆಲ್ಲುತ್ತಿರೋ ಚಾರ್ಲಿಗಾಗಿ ಸಿನಿ ಪ್ರೇಕ್ಷಕ ಮುಗಿ ಬೀಳುತ್ತಿದ್ದಾರೆ. ಯಾವ್ ಮಟ್ಟಕ್ಕೆ ಅಂದ್ರೆ ಒಂದೇ ದಿನದಲ್ಲಿ 777 ಚಾರ್ಲಿ (777 Charlie)  ಸಿನಿಮಾ 10 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆಯಂತೆ.

'777 ಚಾರ್ಲಿ' ನೋಡಿ ಸಿಗರೇಟು ಬಿಡ್ತಾ ಇದ್ದೀನಿ ಅಂತ ಒಬ್ರು ಹೇಳಿದ್ರು; ನಟಿ ಸಂಗೀತಾ

 777 ಚಾರ್ಲಿ ಸಿನಿಮಾ ನೋಡಿದ ಪ್ರತಿಯೊಬ್ಬರು ಕಣ್ಣಲ್ಲಿ ನೀರು ಹಾಕದೇ ಹೊಗಲಾರ. ಅಷ್ಟು ನೀಟ್ ಆದ ಸ್ಟೋರಿ ಕಟ್ಟಿಕೊಟ್ಟು ಅದಕ್ಕೆ ಬೇಕಾದ ವಿಶ್ಯುವಲ್ ಟ್ರೀಟ್ ಜೊತೆ ಅಭಿನಯಿಸಿರೋ ರಕ್ಷಿತ್ ಶೆಟ್ಟಿ ಹಾಗು ಚಾರ್ಲಿ ಇಂದು ಎಲ್ಲರ ಮನ ಮನದಲ್ಲೂ ಸೇರಿಕೊಳ್ಳುತ್ತಿದ್ದಾರೆ. ಈ ಸಿನಿಮಾ ವಿಶ್ವದಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಂದ ಚಾರ್ಲಿ ನೂರು ಕೋಟಿ ಕ್ಲಬ್ ಸೇರೋ ಸೂಚನೆ ಕೊಟ್ಟಿದೆ. ಈ ಸಿನಿಮಾ ಮೊದಲ ದಿನ 10 ಕೋಟಿ ಗಳಿಕೆ ಕಂಡ್ರೆ ಒಟ್ಟು ಮೂರು ದಿನದಿಂದ 38 ಕೋಟಿ ಕಲೆಕ್ಷನ್ ಮಾಡಿದೆ ಅಂತ ಅಂದಾಜಿಸಲಾಗಿದೆ. 

ಅರ್ಜುನ್ ಸರ್ಜಾ ಸೈನ್ಯದಲ್ಲಿ ಹಸು ಕರುಗಳು, ವೀಕೆಂಡ್‌ನಲ್ಲಿ ಕೊಟ್ಟಿಗೆಯಲ್ಲಿ ಬ್ಯುಸಿ!

 777 ಚಾರ್ಲಿ ಸಿನಿಮಾ ನೋಡಿದವರು ಇದು ಸ್ಯಾಂಡಲ್ವುಡ್ನ ಭಜರಂಗಿ ಭಾಯ್ ಜಾನ್ ಸಿನಿಮಾ ಅನ್ನುತ್ತಿದ್ದಾರೆ. ಅಷ್ಟೊಂದು ಎಮೋಷನ್ಗೆ ಚಾರ್ಲಿ ಕರೆದುಕೊಂಡು ಹೋಗುತ್ತೆ. ಅದರಲ್ಲೂ ಭಾರತೀಯ ಸಿನಿಮಾ ಕಥೆಗಳ ಹಿಸ್ಟರಿ ತೆಗೆದ್ರೆ ಒಬ್ಬ ವ್ಯಕ್ತಿ ಮತ್ತು ನಾಯಿ ಮಧ್ಯೆ ಇಷ್ಟೊಂದು ಸುಂದರ ಬಂಧ ಇರೋ ಸ್ಟೋರಿಯ ಸಿನಿಮಾ ಬಂದೇ ಇಲ್ಲ. ಇದು ಫ್ರೆಶ್ ಕಂಟೆಂಟ್ ಸಿನಿಮಾ ಅನ್ನಿಸುತ್ತಿದ್ದು ದೇಶಾದ್ಯಂತ 777 ಚಾರ್ಲಿಗೆ ಮೆಚ್ಚುಗೆ ಸಿಗುತ್ತಿದೆ. ಹೀಗಾಗಿ ಕನ್ನಡ ಸಿನಿಮಾ ಹಿಸ್ಟರಿಯಲ್ಲಿ ಚಾರ್ಲಿ ವಿಭಿನ್ನ ರೀತಿಯ ದಾಖಲೆ ಮಾಡುವುದರಲ್ಲಿ ಅನುಮಾನವಿಲ್ಲ. ಅಲ್ಲದೇ ಕೆಜಿಎಫ್ 2 ನಂತರ ಕನ್ನಡದ ಮತ್ತೊಂದು ಸೂಪರ್ ಹಿಟ್ ಚಿತ್ರವಾಗುವುದರಲ್ಲಿ ಡೌಟ್ ಇಲ್ಲ. ಮೂಲಕ