ಗರ್ಭಗುಡಿಯಲ್ಲಿ ತ್ರಿವರ್ಣ ರಂಗು, ವೈದ್ಯನಾಥನ ಸನ್ನಿಧಿಯಲ್ಲಿ ಅಮೃತ ಮಹೋತ್ಸವ!
ಸ್ವಾತಂತ್ರ್ಯ ದಿನಚಾರಣೆ ಹಿನ್ನಲೆಯಲ್ಲಿ ಚಾಮರಾಜನಗರದ ವೈದ್ಯನಾಥೇಶ್ವರ ದೇಗುಲ ತ್ರಿವರ್ಣಧ್ವಜದಿಂದ ಕಂಗೊಳಿಸಿಸಿದೆ.
ಚಾಮರಾಜನಗರ(ಆ.15): ಅಜಾದಿಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿ ಚಾಮರಾಜನಗರದ ವೈದ್ಯನಾಥೇಶ್ವರ ದೇವಸ್ಥಾನ ತ್ರಿವರ್ಣ ಧ್ವಜದಿಂದ ಕಂಗೊಳಿಸಿದೆ. ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಅಲಂಕಾರ ಮಾಡಲಾಗಿತ್ತು. ಯಳಂದೂರು ತಾಲೂಕಿನ ಮಾಂಬಳ್ಳಿಯಲ್ಲಿರುವ ವೈದ್ಯನಾಥೇಶ್ವರ ದೇಗುಲದಲ್ಲಿಂದು ವಿಶೇಷ ಪೂಜೆಗಳನ್ನು ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವೈದ್ಯನಾಥನ ದರ್ಶನ ಪಡೆದಿದ್ದಾರೆ.