Asianet Suvarna News Asianet Suvarna News

'ಕಾಲಾಪತ್ಥರ್' ಟೀಂ ಜೊತೆ ಗೌರಿ ಗಣೇಶ ಹಬ್ಬ: ಹೂ ಚೆಂಡು ಹುಡುಗಿಯಾದ ಅಣ್ಣಾವ್ರ ಮೊಮ್ಮಗಳು!

ಎಲ್ಲೆಲ್ಲೂ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಮನೆ ಮನೆಯಲ್ಲೂ ಗಣೇಶನ ಕೂರಿಸಿ ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ‘ಕಾಲಾಪತ್ಥರ್’ ಸಿನಿಮಾದ ನಟ ನಟಿ  ಗಣೇಶ ಹಬ್ಬದ ಪ್ರಯುಕ್ತ ಗಾಂಧಿ ಬಜಾರ್‌ನಲ್ಲಿ ಹಬ್ಬದ ಶಾಪಿಂಗ್ ಮಾಡುತ್ತಿದ್ದಾರೆ.

ಎಲ್ಲೆಲ್ಲೂ ಗಣೇಶ ಚತುರ್ಥಿ ಹಬ್ಬದ ಸಂಭ್ರಮ. ಮನೆ ಮನೆಯಲ್ಲೂ ಗಣೇಶನ ಕೂರಿಸಿ ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ‘ಕಾಲಾಪತ್ಥರ್’ ಸಿನಿಮಾದ ನಟ ನಟಿ  ಗಣೇಶ ಹಬ್ಬದ ಪ್ರಯುಕ್ತ ಗಾಂಧಿ ಬಜಾರ್‌ನಲ್ಲಿ ಹಬ್ಬದ ಶಾಪಿಂಗ್ ಮಾಡುತ್ತಿದ್ದಾರೆ. ನಿರ್ದೇಶಕ ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ ಸಿನಿಮಾದಲ್ಲಿ ವಿಕ್ಕಿ ನಟಿಸಿದ್ದರು. ಅವರು ಈಗ ‘ಕಾಲಾಪತ್ಥರ್’ ಚಿತ್ರಕ್ಕೆ ಹೀರೋ ಆಗಿದ್ದಾರೆ. ಈ ಚಿತ್ರಕ್ಕೆ ರಾಜ್​ಕುಮಾರ್ ಕುಟುಂಬದ ಧನ್ಯಾ ರಾಮ್​ಕುಮಾರ್ ನಾಯಕಿ. ಅನೂಪ್  ಸೀಳಿನ್ ಸಂಗೀತ, ಭುವನ್ ಸುರೇಶ್ , ನಾಗರಾಜ್ ಬಿಲ್ಲಿನಕೋಟೆ ನಿರ್ಮಾಣ ಚಿತ್ರಕ್ಕಿದ್ದು, ಕ್ರೈಂ ಥ್ರಿಲ್ಲರ್ ಆಕ್ಷನ್ ಕಕತೆಯನ್ನು ಕಾಲಾಪತ್ಥರ್ ಒಳಗೊಂಡಿದೆ. ಇನ್ನು ವಿಕ್ಕಿ ಹಾಗೂ ಧನ್ಯಾ ರಾಮ್​ಕುಮಾರ್ ಗಾಂಧಿ ಬಜಾರ್ ಹೂ ಮಾರುಕಟ್ಟೆಯಲ್ಲಿ ಕಾಲಾಪತ್ಥರ್ ಸಿನಿಮಾ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. 

Video Top Stories