
ಮತದಾನೋತ್ತರ ಸಮೀಕ್ಷೆ ಎಫೆಕ್ಟ್: ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ
ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ಗೆಲುವಿನ ಸೂಚನೆ ಸಿಕ್ಕ ನಂತರ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಉಂಟಾಗಿದೆ.
ಮತದಾನೋತ್ತರ ಸಮೀಕ್ಷೆ (Exit poll survey) ಪರಿಣಾಮ ಷೇರು ಮಾರುಕಟ್ಟೆಯಲ್ಲಿ(Share market) ಭಾರೀ ಏರಿಕೆ ಉಂಟಾಗಿದೆ. ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ (BJP) ಗೆಲುವಿನ ಸೂಚನೆ ಸಿಕ್ಕ ನಂತರ ಈ ಬೆಳವಣಿಗೆ ಕಂಡುಬಂದಿದೆ. ಇನ್ನು 2,000 ಪಾಯಿಂಟ್ಸ್ ಗೆ ಸೆನ್ಸೆಕ್ಸ್ ಸೂಚ್ಯಂಕ ಏರಿದ್ದು, ಈ ಮೂಲಕ 76 ಸಾವಿರ ಗಡಿ ತಲುಪಿದೆ. ಇದರೊಂದಿಗೆ ನಿಫ್ಟಿ ಸೂಚ್ಯಂಕ 23 ಸಾವಿರ ಗಡಿ ದಾಟಿದೆ. ಈಗಾಗಳೇ ಸೆನ್ಸೆಕ್ಸ್ 76 ಸಾವಿರದ ಗಡಿ ತಲುಪಿತ್ತು. ಇದು ಜೂ.4ರಂದು ಬಿಜೆಪಿ ಗೆದ್ದರೆ 80 ಸಾವಿರದವರೆಗೆ ತಲುಪಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: CT Ravi: ನಾಗೇಂದ್ರ ರಾಜೀನಾಮೆ ಪಡೆಯಲು ಸಿಎಂ ಸಿದ್ದರಾಮಯ್ಯಗೆ ಧಮ್ ಇಲ್ಲ: ಸಿಟಿ ರವಿ