Asianet Suvarna News Asianet Suvarna News

ವಾಹನ ಸವಾರರಿಗೆ ಮತ್ತೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಬರೆ!

ಸತತ ಏಳು ದಿನಗಳವರೆಗೆ ಸ್ಥಿರವಾಗಿ ಉಳಿದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗುರುವಾರ ಏರಿಕೆ ಕಂಡು ದಾಖಲೆಯ ಮಟ್ಟ ತಲುಪಿದೆ.

ಬೆಂಗಳೂರು(ಫೆ.4) ಸತತ ಏಳು ದಿನಗಳವರೆಗೆ ಸ್ಥಿರವಾಗಿ ಉಳಿದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗುರುವಾರ ಏರಿಕೆ ಕಂಡು ದಾಖಲೆಯ ಮಟ್ಟ ತಲುಪಿದೆ.

ದೇಶದಲ್ಲಿ ಪೆಟ್ರೋಲ್ ಬೆಲೆ ಪ್ರಸ್ತುತ ದಾಖಲೆಯ ಮಟ್ಟದಲ್ಲಿದ್ದರೆ, ದೆಹಲಿಯನ್ನು ಹೊರತುಪಡಿಸಿ ಡೀಸೆಲ್ ಬೆಲೆಗಳು ಐತಿಹಾಸಿಕವಾಗಿ ಹೆಚ್ಚಿನ ಮಟ್ಟದಲ್ಲಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ಪೆಟ್ರೋಲ್ ಬೆಲೆಯನ್ನು 35 ಪೈಸೆ ಹೆಚ್ಚಿಸಲಾಗಿದ್ದು, ಲೀಟರ್‌ ಗೆ 86.65 ರೂ.ತಲುಪಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ. ಇಂಧನ ಬೆಲೆಗಳು ಪ್ರತಿ ಲೀಟರ್‌ಗೆ 35 ಪೈಸೆಗಳಷ್ಟು ಹೆಚ್ಚಾಗಿದೆ, ಆದರೆ ಅವುಗಳ ಸ್ಥಳೀಯ ಸುಂಕವನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. 

ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗುರುವಾರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ್ದು, ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಬೆಲೆಯನ್ನು ಲೀಟರ್‌ಗೆ 35 ಪೈಸೆ ಹೆಚ್ಚಿಸಿವೆ. ಆ ಮೂಲಕ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ ಬೆಲೆ 86.65 ರೂಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ ಕೂಡ ಲೀಟರ್‌ಗೆ 35 ಪೈಸೆ ಏರಿಕೆಯಾಗಿದ್ದು, ಡೀಸೆಲ್ ಲೀಟರ್‌ಗೆ. 76.83ಕ್ಕೆ ಏರಿಕೆಯಾಗಿದೆ. 

Video Top Stories