ಆನ್ ಲೈನ್ ರಿಟರ್ನ್ ಗೂಡ್ಸ್ ಬ್ಯೂಜಿನೆಸ್‌: ಇತರರಿಗೆ ಮಾದರಿ ಗದಗದ ಈ ಮಹಿಳೆ !

ಗದಗದ ಮಹಿಳೆಯೊಬ್ಬರು ನೇರ ಕಂಪನಿಯಿಂದ ಆನ್ ಲೈನ್ ರಿಟರ್ನ್ ಗೂಡ್ಸ್ ಗಳನ್ನ ಖರೀದಿ ಮಾಡಿ ,ಜನರಿಗೆ ಮಾರಾಟ ಮಾಡುವ ಬ್ಯೂಜಿನೆಸ್‌ ಆರಂಭ ಮಾಡುತ್ತಿದ್ದಾರೆ.  
 

First Published Aug 21, 2023, 2:47 PM IST | Last Updated Aug 21, 2023, 2:47 PM IST

ಗದಗ: ಮನೆಯಲ್ಲಿ ಕೂತು ಕಾಲ ಕಳೆಯೋದಕ್ಕಿಂತ ಏನಾದ್ರೂ ಬ್ಯೂಸಿನೆಸ್ (business)ಮಾಡ್ಬೇಕು ಅನ್ನೋ ಸಣ್ಣ ಐಡಿಯಾದೊಂದಿಗೆ ಆರಂಭವಾದ ಆನ್ ಲೈನ್ ರಿಟರ್ನ್ ಗೂಡ್ಸ್ ಬ್ಯೂಸಿನೆಸ್ ಇಂದು ಲಕ್ಷಗಳಲ್ಲಿ ವ್ಯವಹಾರ ಮಾಡುವಂತೆ ಮಾಡಿದೆ. ಗದಗ (Gadag)ನಗರದ ಒಕ್ಕಲಗೇರಿ ಬಡಾವಣೆಯ ಜ್ಯೋತಿ ಮೇಲಗಿರಿ ಅನ್ನೋ ಮಹಿಳೆ ಪತಿ ಸಂತೋಷ್ ಅವರ ಸಹಾಯದಿಂದ ಆನ್ ಲೈನ್ ರಿಟರ್ನ್ ಗೂಡ್ಸ್( online return goods) ಉದ್ಯಮ ಶುರು ಮಾಡಿದ್ದಾರೆ. 2020 ರಲ್ಲಿ ಶೌರ್ಯ ಹೆಸರಿನ ಫರ್ಮ್ ಮಾಡಿ ಐದಾರು ಜನರಿಗೆ ಕೆಲಸ ಕೊಟ್ಟಿದ್ದಾರೆ. ಮನೆಯ ನೆಲ ಮಹಡಿಯನ್ನೇ ಗೋಡೌನ್ ಮಾಡ್ಕೊಂಡು ವ್ಯಾಪಾರ ಮಾಡ್ತಿರೋ ಜ್ಯೋತಿ ಯಶಕಂಡಿದ್ದಾರೆ. ಏಳು ಲಕ್ಷ ರೂಪಾಯಿ ಬಂಡವಾಳದಲ್ಲಿ ಆರಂಭವಾದ ವ್ಯಾಪಾರ, ಪ್ರಸಕ್ತ ವರ್ಷ ಐದು ಕೋಟಿ ರೂಪಾಯಿ ಲಾಭದ ನಿರೀಕ್ಷೆಹೊಂದಿದೆ.
 
ಮಧ್ಯವರ್ತಿಗಳನ್ನ ಬಿಟ್ಟು ನೇರ ಕಂಪನಿಯಿಂದ ಆನ್ ಲೈನ್ ರಿಟರ್ನ್ ಗೂಡ್ಸ್ ಗಳನ್ನ ಖರೀದಿ ಮಾಡಿ ಜನರಿಗೆ ಮಾರಾಟ ಮಾಡುವ ಬ್ಯೂಸಿನೆಸ್ ಸದ್ಯ ಗದಗ ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ನೇರ ಕಂಪನಿಯಿಂದ ಖರೀದಿಯಾಗೋದ್ರಿಂದ ಬ್ರ್ಯಾಂಡ್ ಗೂಡ್ಸ್ ಗಳು ಕಡಿಮೆ ಬೆಲೆಗೆ ಸಿಗುತ್ತವೆ. ಹೀಗಾಗಿ ಜನರು ಹೆಚ್ಚು ಇಂಥ ಅಂಗಡಿಗಳಿಂದ ಅಗತ್ಯ ವಸ್ತುಗಳನ್ನ ಖರೀದಿ ಮಾಡ್ತಿದ್ದಾರೆ. ಆರಂಭದಲ್ಲಿ ಪಾತ್ರೆ, ಎಲೆಕ್ಟ್ರಾನಿಕ್ ಉಪಕರಣಗಳನ್ನ ಜ್ಯೋತಿ ಅವರು ಮಾರಾಟ ಮಾಡ್ತಿದ್ರು. ಸದ್ಯ ಬಟ್ಟೆ, ವಾಚ್, ಟಿವಿ, ಮಹಿಳೆಯರ ಉಡುಪು, ಫುಟ್ ವೇರ್ ಹೀಗೆ ಜನರು ಬಳಸುವ ಪ್ರತಿ ವಸ್ತುಗಳನ್ನ ಮಾರಾಟ ಮಾಡ್ತಿದ್ದಾರೆ. ಜ್ಯೋತಿ ಅವರ ಪತಿ ಸಂತೋಷ್ ಗುತ್ತಿಗೆದಾರರಾಗಿದ್ದು, ಕೊರೊನಾ ಸಂದರ್ಭದಲ್ಲಿ ಅವರ ಎಲ್ಲ ವ್ಯವಹಾರ ಬಂದ್ ಆಗಿತ್ತಂತೆ. ಪತಿಯೊಂದಿಗೆ ಚರ್ಚಿಸಿ ಪರ್ಯಾಯ ಬ್ಯೂಸಿನೆಸ್ ಮಾಡ್ಬೇಕು ಅನ್ಕೊಂಡಿದ್ದ ಜ್ಯೋತಿಯವರಿಗೆ, ಆನ್ ಲೈನ್ ರಿಟರ್ನ್ ಗೂಡ್ಸ್ ವ್ಯಾಪಾರ ಐಡಿಯಾ ಚೆನ್ನಾಗಿದೆ ಅನ್ಸಿತ್ತು. ಜಸ್ಟ್ ಏಳು ಲಕ್ಷ ರೂಪಾಯಿ ಬಂಡವಾಳ ಹಾಕಿ ವ್ಯಾಪಾರ ಆರಂಭಿಸಿದ್ದಾರೆ.Ministry of Micro, Small & Medium Enterprises ಸ್ಕೀಮ್ ಅಡಿ 20 ಲಕ್ಷ ರೂಪಾಯಿ ಸಾಲ ಪಡೆದು ಉದ್ಯಮ ಮತ್ತಷ್ಟು ಬೆಳೆಯುವಂತೆ ಮಾಡಿದ್ದಾರೆ.. ಮುಂಬರುವ ದಿನದಲ್ಲಿ ಹೊಸ ಶೋ ರೂಂ ಆರಂಭಿಸುವ ಗುರಿಯನ್ನೂ ಜ್ಯೋತಿ ಹೊಂದಿದ್ದಾರೆ.

ಇದನ್ನೂ ವೀಕ್ಷಿಸಿ: ಚಾಯ್​ ವಾಲಾಗಳಾದ ಡಿಪ್ಲೋಮಾ ಎಂಜಿನಿಯರ್ಸ್​..ಇವರ ಚಹಾಗೆ ಫುಲ್ ಫಿದಾ ಆದ ಬಾಗಲಕೋಟೆ ಮಂದಿ !

Video Top Stories