Karnataka Business Award: ಅಪೋನಿಕ್ಸ್‌ ಟೆಕ್ನಾಲಜಿಸ್ ಪ್ರವೀಣ್ ಹಲಕುರ್ಕಿಗೆ ಕರ್ನಾಟಕ ಬ್ಯುಸಿನೆಸ್ ಅವಾರ್ಡ್‌

Karnataka Business Award: ಅಪೋನಿಕ್ಸ್‌ 2013ರಲ್ಲಿ ಆರಂಭಗೊಂಡಿದ್ದು ಡೇಟಾ ಸೈನ್ಸ್‌, ಫುಲ್‌ ಸ್ಟ್ಯಾಕ್‌ ಡೆವಲಪ್‌ಮೆಂಟ್, ಕ್ಲೌಡ್‌ ಕಂಪ್ಯೂಟಿಂಗ್‌, ಸೈಬರ್‌ ಸೆಕ್ಯೂರಿಟಿ ಸೇರಿದಂತೆ ಹಲವು ತರಬೇತಿಗಳನ್ನು ನೀಡುತ್ತದೆ

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 30): ಏಷ್ಯಾನೆಟ್ ಸುವರ್ಣನ್ಯೂಸ್ (Asianet Suvarna News) ಹಾಗೂ ಕನ್ನಡಪ್ರಭ (Kannada Prabha) ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ (Karnataka Business Award) ನೀಡಲಾಗುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ಅಪೋನಿಕ್ಸ್‌ ಟೆಕ್ನಾಲಜಿ ಸಿಇಓ ಹಾಗೂ ಸಹ-ಸಂಸ್ಥಾಪಕ ಪ್ರವೀಣ್ ಹಲಕುರ್ಕಿ. ‌ಅಪೋನಿಕ್ಸ್‌ 2013ರಲ್ಲಿ ಆರಂಭಗೊಂಡಿದ್ದು ಡೇಟಾ ಸೈನ್ಸ್‌, ಫುಲ್‌ ಸ್ಟ್ಯಾಕ್‌ ಡೆವಲಪ್‌ಮೆಂಟ್, ಕ್ಲೌಡ್‌ ಕಂಪ್ಯೂಟಿಂಗ್‌, ಸೈಬರ್‌ ಸೆಕ್ಯೂರಿಟಿ ಸೇರಿದಂತೆ ಹಲವು ತರಬೇತಿಗಳನ್ನು ನೀಡುತ್ತದೆ. ಕಂಪನಿಯ ಯಶೋಗಾಥೆಯ ಬಗ್ಗೆ ಸ್ವತಃ ಪ್ರವೀಣ್ ಹಲಕುರ್ಕಿ ವಿವರಿಸಿದ್ದಾರೆ.

ಇದನ್ನೂ ನೋಡಿ: ಫ್ಯೂಚರ್‌ ಬಯೋಟೆಕ್‌ನ ಚಂದ್ರಶೇಖರಯ್ಯಗೆ ಕರ್ನಾಟಕ ಬ್ಯುಸಿನೆಸ್ ಅವಾರ್ಡ್

Related Video