ಆಫ್ರಿಕಾದಲ್ಲಿ ಫುಡ್ ಟೆಕ್ನಿಶಿಯನ್, ಭಾರತದಲ್ಲಿ ಉದ್ಯಮಿ: ಬಾವಬಾಬ್ ಹಣ್ಣು ಬಳಸಿ ಆರೋಗ್ಯ ವರ್ಧಕ ಉತ್ಪನ್ನ !

ಅವರು ಸೌತ್ ಆಫ್ರೀಕಾದಲ್ಲಿ ಇಪ್ಪತ್ತು ವರ್ಷ ಫುಡ್ ಟೆಕ್ನೋಲಜಿಸ್ಟ್ ಆಗಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ್ದಾರೆ. ಹಾಗೆ ಮರಳಿ ಬಂದ ನಂತರ ಸುಮ್ಮನಿರದೇ ಸೌಥ್ ಆಫ್ರಿಕಾ ಜನರ ಆರೋಗ್ಯದ ಗುಟ್ಟನ್ನೇ ಭಾರತಕ್ಕೆ ತಂದಿದ್ದಾರೆ. ಅವರ ಸ್ಟಾರ್ಟಪ್ ಇದೀಗ ಬಿಸಿಲೂರು ಕಲಬುರಗಿಯಲ್ಲಿ ಭರ್ಜರಿ ಆದಾಯ ನೀಡುತ್ತಿದೆ.

First Published Sep 4, 2023, 12:49 PM IST | Last Updated Sep 4, 2023, 12:49 PM IST

ಕಲಬುರಗಿ: ಇವರು ಅನೀಲ್‌ಕುಮಾರ ಕಾಡಾದಿ. ಮೂಲತಃ ಕಲಬುರಗಿಯವರಾದ್ರೂ ಇಪ್ಪತ್ತಕ್ಕೂ ಹೆಚ್ಚು ವರ್ಷ ಸೌಥ್ ಆಫ್ರಿಕಾದಲ್ಲಿ ನೆಲೆಸಿದ್ದರು. ಅಲ್ಲಿ ಭಾರತೀಯ ಮೂಲದ ಕಂಪೆನಿಯೊಂದರಲ್ಲಿ ಫುಡ್ ಟೆಕ್ನಿಶಿಯನ್ ಆಗಿ ಸೇವೆ ಸಲ್ಲಿಸಿ ವರ್ಷದ ಹಿಂದಷ್ಟೇ ತಾಯ್ನಾಡಿಗೆ ಮರಳಿದ್ದಾರೆ. ಹಾಗೆ ಬಂದವರು ಸುಮ್ಮನೇ ಬಂದಿಲ್ಲ. ಬರುವಾಗ ಸೌತ್ ಆಫ್ರಿಕಾದ ಜನರ ಆರೋಗ್ಯದ ಗುಟ್ಟನ್ನೇ ಭಾರತಕ್ಕೆ ತಂದಿದ್ದಾರೆ. ಸೌತ್ ಆಫ್ರೀಕಾದಲ್ಲಿ(Africa) ಯಥೆಚ್ಛವಾಗಿ ಸಿಗುವ ಮತ್ತು ಅಪಾರ ಔಷಧೀಯ ಗುಣ ಹೊಂದಿರುವ ಬಾವಬಾಬ್ ಟ್ರೀ(baobab fruit) ಯ ಹಣ್ಣುಗಳನ್ನು ಆಮದು ಮಾಡಿಕೊಂಡು ಅದರಿಂದ ಪೌಡರ್ ಹಾಗೂ ಎಣ್ಣೆ ತಯಾರಿಸಿ ಮಾರಾಟ ಮಾಡುವ ಉದ್ಯಮ ಆರಂಭಿಸಿದ್ದಾರೆ ಅನೀಲ್ ಕುಮಾರ ಕಾಡಾದಿ.

ಕಲಬುರಗಿ(Kalaburagi) ನಗರದ ಹೊರವಲಯದ ನಂದೂರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಅನೀಲ್ ಕುಮಾರ ಕಾಡಾದಿ ಅವರು ಈ ಯುನಿಟ್ ಸ್ಥಾಪಿಸಿದ್ದಾರೆ. ಇಲ್ಲಿ ಸೌತ್ ಆಫ್ರೀಕಾದ ಬಾವಬಾಬ್ ಫ್ರೂಟ್ ಮಾತ್ರವಲ್ಲ , ಪಕ್ಕಾ ದೇಶಿಯ ಸಸ್ಯಗಳಾದ ನುಗ್ಗೆಯ ಸೊಪ್ಪಿನ ಪೌಡರ್ , ಕೆಂಪು ಪುಂಡಿಯ ಪೌಡರ್, ಪಪಾಯಿ ಎಲೆಯ ಪೌಡರ್, ಕರಿಬೇವು ಸೊಪ್ಪಿನ ಪೌಡರ್ ತಯಾರಿಕೆಯೂ ಇಲ್ಲಿದೆ.  ಅನೀಲ್ ಕುಮಾರ ಕಾಡಾದಿ ಅವರು ತಯಾರಿಸುವ ಬೇರೆ ಬೇರೆ ಸೊಪ್ಪಿನ ಪೌಡರ ಮತ್ತು ಎಣ್ಣೆ ತಯಾರಿಕೆಯ ವಿಧಾನ ಅತ್ಯಂತ ಹೈಜಿನಿಕ್ ಆಗಿದೆ. ಎಲ್ಲವೂ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ತಯಾರಿಸಲಾಗುತ್ತಿದೆ. ಇವರು ರೈತರಿಂದ ನುಗ್ಗೆ ಸೊಪ್ಪು, ಕೆಂಪು ಪುಂಡಿಯ ಹೂವು, ಕರಿಬೇವಿನ ಸೊಪ್ಪು, ಪಪ್ಪಾಯಿ ಎಲೆಗಳನ್ನು ಖರೀದಿಸಿ ಅದನ್ನು ಅತ್ಯಂತ ವ್ಯವಸ್ಥಿತವಾಗಿ ಸಂಸ್ಕರಿಸಿ , ಪುಡಿ ತಯಾರಿಸಿ ಪ್ಯಾಕಿಂಗ್ ಮಾಡಿ ತಮ್ಮದೇ ಬ್ರ್ಯಾಂಡ್ ನ ಅಡಿ ಮಾರಾಟ ಮಾಡುತ್ತಾರೆ.

ಪೌಡರ್ ಮಾತ್ರವಲ್ಲದೇ ನುಗ್ಗೆ ಸೊಪ್ಪಿನ ಮತ್ತು ಪಪಾಯಿ ಎಲೆಗಳಿಂದ ಟ್ಯಾಬ್ಲೆಟ್ಸ್ ಸಹ ತಯಾರಿಸುತ್ತಿದ್ದಾರೆ. ಅಲ್ಲದೇ ಆಫ್ರೀಕಾದ baobob fruit ನಿಂದ ಪೌಡರ್ ಮಾತ್ರವಲ್ಲದೇ ಎಣ್ಣೆ ಸಹ ತಯಾರಿಸಲಾಗುತ್ತಿದೆ. ಈ ಎಣ್ಣೆ ಆಹಾರದ ರೂಪದಲ್ಲಿ ಸೇವನೆಗೆ ಮತ್ತು ಚರ್ಮಕ್ಕೆ ಲೇಪನ ಮಾಡಿಕೊಳ್ಳಲು ಸೂಕ್ತವಾಗಿದೆ. ಇದು ಚರ್ಮದ ಕಾಂತಿ ಹೆಚ್ಚಿಸುವುದಲ್ಲದೇ ಚರ್ಮದ ಕಲೆ, ಚರ್ಮದ ಕಾಯಿಲೆಗಳಿಗೂ ರಾಮಬಾಣವಾಗಿದೆ. ಇವರು ಮಾರಾಟಕ್ಕೆ ಬಳಕೆ ಮಾಡಿಕೊಂಡಿದ್ದು ಆನ್ ಲೈನ್ ಮಾರ್ಕೆಟ್ ಸಿಸ್ಟಮ್. ಹೌದು buyu ಎನ್ನುವ ಸಂಸ್ಥೆ ಹುಟ್ಟು ಹಾಕಿ ಅದರ ಬ್ರ್ಯಾಂಡ್ ನಲ್ಲಿ ದೇಶ ವಿದೇಶಗಳಿಗೆ ಇವರು ಈ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಮೇಜಾನ್ ಸೇರಿದಂತೆ ಆನ್ ಲೈನ್ ಮಾರಾಟದ ಮಳಿಗೆಗಳೆಲ್ಲದರಲ್ಲೂ ಇವರ ಉತ್ಪನ್ನಗಳು ಮಾರಾಟಕ್ಕೆ ಲಭ್ಯ ಇವೆ. 

ಇದನ್ನೂ ವೀಕ್ಷಿಸಿ:  600 ಕೋಟಿ ಒಡೆಯ 'ಜೈಲರ್' ತಲೈವಾಗೆ ಸಿಕ್ತು ದುಬಾರಿ ಗಿಫ್ಟ್!

Video Top Stories