ಭಾರತದ ಎಲೆಕ್ಟ್ರಾನಿಕ್ ಉದ್ಯಮದ ಸಾಮ್ರಾಜ್ಯಾಧಿಪತಿಯ ಟಿಪಿಜಿ ನಂಬಿಯಾರ್ ಕತೆ

ಭಾರತದ ಎಲೆಕ್ಟ್ರಾನಿಕ್ ಉದ್ಯಮದ ದಿಗ್ಗಜ ಅನ್ನಿಸಿಕೊಂಡಿರೋ ಟಿಪಿಜಿ ನಂಬಿಯಾರ್, ದೇಶದ ಬಗ್ಗೆ ದೊಡ್ಡ ಕನಸುಗಳನ್ನೇ ಹೊತ್ತಿದ್ರು.. ದಶಮಾನಗಳ ನಂತರದ ಭಾರತ ಹೇಗಿರ್ಬೇಕು ಅನ್ನೋ ಗುರಿ ಇಟ್ಕೊಂಡೇ, ಜೀವನಯಾನ ನಡೆಸಿದ್ರು.. ಅದರ ಪ್ರತಿಫಲವೇ, ಮತ್ಯಾರೂ ನಿರ್ಮಿಸಲು ಸಾಧ್ಯವಾಗದ ಸಾಮ್ರಾಜ್ಯವೊಂದನ್ನ ಕಟ್ಟಿದ್ರು.. ಆ ಸಾಮ್ರಾಜ್ಯಾಧಿಪತಿಯ ಕತೆ

Share this Video
  • FB
  • Linkdin
  • Whatsapp

ಕನಸು ಕಟ್ಟೋದು ಸುಲಭ. ಅದನ್ನ ನನಸಾಗಿಸಿಕೊಳ್ಳೋದು ಕಷ್ಟ. ಅದರಲ್ಲೂ ಆ ಚೇತನ ಕಟ್ಟಿಕ್ಕೊಂಡದ್ದು ಅಂತಿದ್ದ ಕನಸಲ್ಲ. ಆ ಕನಸ ನನಸಾಗಿಸಿಕೊಳ್ಳೋಕೆ ಸಾಗಿದ ದಾರಿಯೂ ಸರಳವಾಗಿರಲಿಲ್ಲ. ಭಾರತದ ಕೋಟಿ ಕೋಟಿ ಮನೆಗಳನ್ನ ತಲುಪೋ ಕನಸದು, ಮನಸ್ಸುಗಳನ್ನ ಗೆಲ್ಲೋ ಕನಸದು. ಆ ಕನಸಿನ ಕೂಸ ಹೆಗಲ ಮೇಲೆ ಹಾಕಿಕೊಂಡು ಅವರು ಸೃಷ್ಟಿಸಿದ್ದು ಮಹಾ ಸಾಮ್ರಾಜ್ಯ. ಉದ್ಯಮದ ಜೊತೆಗೆ ಜನರ ನಂಬಿಕೆಯನ್ನೂ ಸದಾ ಉಳಿಸಿಕೊಂಡಿದ್ದ ನಾಯಕ. ಅವರ ಹಾದಿ ಜೀವನಕ್ಕೆ ಹುರುಪು ಕೊಡುತ್ತೆ. ಅವರು ಅಗಲಿ ಹೋಗಿದ್ದರು, ಅವರು ಹಾಕಿಕೊಟ್ಟ ಹಾದಿ.. ಕೊಟ್ಟು ಹೋದ ಕೊಡುಗೆ ಇಂದು ಎಂದೆಂದೂ ಚಿರಶಾಶ್ವತ.

Related Video