Asianet Suvarna News Asianet Suvarna News

BIG3 ಲಂಡನ್‌ನಲ್ಲಿ ಕನ್ನಡ ಧ್ವಜ ಹಾರಿಸಿದ ಬೀದರ್ ಯುವಕ: ಜನ ಮನ ಗೆದ್ದ 'ಕನ್ನಡದ ಕುವರ'

ಲಂಡನ್'ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜ ಹಾರಿಸಿ ನಾಡಿನ ಜನ ಮನ ಗೆದ್ದಿದ್ದಾನೆ ಬೀದರ್ ಯುವಕ.
 

ಬೀದರ್ ಜಿಲ್ಲೆಯ ಆದೀಶ್ ವಾಲಿ ಎಂಬ ಯುವಕ ಲಂಡನ್ ಸಿಟಿ ಯೂನಿವರ್ಸಿಟಿಯ ಘಟಿಕೋತ್ಸವ ಕಾರ್ಯಕ್ರಮ ವೇದಿಕೆ ಮೇಲೆ ಕನ್ನಡ ಬಾವುಟ ಹಾರಿಸಿ ಪದವಿ ಸ್ವೀಕಾರ ಮಾಡುವ ಮೂಲಕ ಇಡೀ ಕರುನಾಡಿನ ಮನ ಗೆದ್ದಿದ್ದಾರೆ. ಇವರ ಈ ಕಾರ್ಯಕ್ಕೆ ಮಾಜಿ ಸಿಎಂ ಸೇರಿದಂತೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸಿಟಿ ಯೂನಿವರ್ಸಿಟಿ ಆಫ್ ಲಂಡನ್'ನ ಬೇಯೆಸ್ ಬ್ಯುಸಿನೆಸ್ ಸ್ಕೂಲ್'ನ ಮ್ಯಾನೆಜ್‌ಮೆಂಟ್‌ ವಿಭಾಗದಲ್ಲಿ ಆದೀಶ್ ವಾಲಿ ಪದವಿ ಪೂರೈಸಿದ್ದು, ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ ಸ್ವೀಕರಿಸಲು ಆಗಮಿಸಿದ ವೇಳೆ ತಮ್ಮ ಜೀಬಿನಿಂದ ಕನ್ನಡ ಧ್ವಜ ತೆಗೆದು ಎಲ್ಲರ ಎದುರು ಪ್ರದರ್ಶಿಸಿದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಂತೆ ಆದೀಶ್ ವಾಲಿ ಅವರಿಗೆ ಎಲ್ಲೆಡೆಯಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Video Top Stories