ಈ ಸೊಪ್ಪು ತಿಂದ್ರೆ ಸಾವು! ಇದರ ಹಿಂದಿದೆ ದೊಡ್ಡ ಮಾಫಿಯಾ!

ಆರೋಗ್ಯ ಚೆನ್ನಾಗಿ ಇರಬೇಕು ಅಂದರೆ ಸೊಪ್ಪು-ತರಕಾರಿ ಸೇವಿಸಬೇಕೆಂದು ಆರೋಗ್ಯತಜ್ಞರು ಸೇರಿದಂತೆ ವೈದ್ಯರು ಸಲಹೆ ನೀಡುತ್ತಾರೆ. ರಾಜಧಾನಿ ಬೆಂಗಳೂರಿಗೆ ಬೆಳಗ್ಗೆಯಾದ್ರೆ ಸುತ್ತಮುತ್ತಲಿನ ಗ್ರಾಮಗಳಿಂದ ಗಂಟುಗಟ್ಟಲೇ ಹಸಿರು ತರಕಾರಿ ಮತ್ತು ಸೊಪ್ಪು ಬರುತ್ತದೆ. ಆರೋಗ್ಯಕ್ಕೆ ಸೊಪ್ಪು ಒಳ್ಳೆಯದು. ಆದ್ರೆ ಬೆಂಗಳೂರಿಗೆ ಬರುವ ಸೊಪ್ಪು ಎಲ್ಲಿ ಮತ್ತು ಹೇಗೆ ಬೆಳೆಯುತ್ತಾರೆ ಎಂಬುದನ್ನು ನೋಡಿದ್ರೆ ಒಂದು ಕ್ಷಣ ಶಾಕ್ ಆಗುತ್ತದೆ. ಇದೇ ಇವತ್ತಿನ ಕವರ್ ಸ್ಟೋರಿ ಈ ಸೊಪ್ಪು ತಿಂದ್ರೆ ಸಾವು! ಇದರ ಹಿಂದಿದೆ ದೊಡ್ಡ ಮಾಫಿಯಾ!

Share this Video
  • FB
  • Linkdin
  • Whatsapp

ಬೆಂಗಳೂರಿನಲ್ಲಿ ಗಲೀಜು, ತ್ಯಾಜ್ಯವೆಲ್ಲಾ ರಾಜಕಾಲುವೆ ಮೂಲಕ ಹರಿದು ಹೋಗುತ್ತದೆ. ಇದೇ ರಾಜಕಾಲುವೆಯ ನೀರು ಬೆಳೆಸಿ ಬೆಂಗಳೂರು ಹೊರವಲಯದಲ್ಲಿ ಸೊಪ್ಪು ಬೆಳೆಯಲಾಗುತ್ತದೆ. ಈ ತ್ಯಾಜ್ಯದ ನೀರು ಬಳಸಿ ಸೊಪ್ಪು ಬೆಳೆಯುವ ದೃಶ್ಯಗಳು ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

Related Video