Asianet Suvarna News Asianet Suvarna News

ಆಹಾರ ಕಿಟ್ ವಿತರಣೆಯಲ್ಲಿ ರಾಜಕೀಯ: ಗೋದಾಮಿನ ಮೇಲೆ ಸಂಸದ ಡಿ ಕೆ ಸುರೇಶ್ ದಾಳಿ

May 2, 2020, 11:26 AM IST

ಆನೆಕಲ್(ಮೇ.02): ಆಹಾರ ಕಿಟ್ ವಿತರಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪೊಲಿಕಲ್ ವಾರ್ ಆರಂಭವಾಗಿದೆ.ಮಕ್ಕಳು ಹಾಗೂ ಗರ್ಬಿಣಿಯರಿಗೆ ನೀಡುವ ವಿಚಾರದಲ್ಲೂ ರಾಜಕೀಯ ಆರಂಭವಾಗಿದೆ.

ಪ್ಯಾಕಿಂಗ್ ಗೋದಾಮಿನ ಮೇಲೆ ಸಂಸದ ಡಿ.ಕೆ. ಸುರೇಶ್ ದಾಳಿ ನಡೆಸಿದ್ದಾರೆ. ಆನೇಕಲ್‌ನ ಸರ್ಜಾಪುರದ MSPS ಸೆಂಟರ್ ಮೇಲೆ ಸುರೇಶ್ ದಾಳಿ ನಡೆಸಿದ್ದಾರೆ. ಆಹಾರದ ಕಿಟ್ ಮೇಲೆ ಬಿಜೆಪಿ ಚಿಹ್ನೆಯಿರುವ ಪ್ಯಾಕೇಟ್ ನೋಡಿ ಸುರೇಶ್ ಕುಮಾರ್ ಗರಂ ಆಗಿದ್ದಾರೆ.

"

ದಾವಣಗೆರೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ: ಹರಪನಹಳ್ಳಿ ಗಡಿಯಲ್ಲಿ ಫುಲ್‌ ಟೈಟ್‌

ಇದರ ಬೆನ್ನಲ್ಲೇ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಅಕ್ರಮವೆಸಗಿದವರನ್ನು ಬಂಧಿಸಲು ಕೈ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.