Asianet Suvarna News Asianet Suvarna News

ಸಿರುಗುಪ್ಪ: ಆಟ ನೋಡಲು ಬಂದ ವಿದ್ಯಾರ್ಥಿಗಳ ಬದುಕಿನ ಆಟ ಅಂತ್ಯ!

Aug 23, 2019, 9:31 PM IST

ಬಳ್ಳಾರಿಯ ಸಿರುಗುಪ್ಪ ಜಿಲ್ಲಾ ಕ್ರೀಡಾಕೂಟ ನೋಡಲು ಆಗಮಿಸಿದ ಇಬ್ಬರು ವಿದ್ಯಾರ್ಥಿಗಳು ತಮ್ಮ ಬದುಕಿನ ಆಟವನ್ನೇ ನಿಲ್ಲಿಸಿದ್ದಾರೆ. ಕ್ರೀಡಾಕೂಟವನ್ನು ನೋಡುಲು ಬಂದ ವಿದ್ಯಾರ್ಥಿಗಳು  ಸ್ಟೇಡಿಯಂ ಮೇಲೆ ಹತ್ತಿದ್ದಾರೆ. ಈ ವೇಳೆ ಕ್ರೀಡಾಂಗಣದ  ಸಜ್ಜಾ ಕುಸಿದು ಬಿದ್ದಿದೆ. ಇದರ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರೆ, 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.