ಮೃತಪಟ್ಟಿದ್ದಾನೆಂದು ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿ ವ್ಯಕ್ತಿಯೊಬ್ಬ ಮೂರು ದಿನಗಳ ನಂತರ ಜೀವಂತವಾಗಿ ಮನೆಗೆ ಮರಳಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ ಕುಟುಂಬ ಮತ್ತು ಪೊಲೀಸರು ದಂಗಾಗಿದ್ದು, ಅಂತ್ಯಕ್ರಿಯೆ ನಡೆಸಿದ್ದು ಯಾರ ಶವಕ್ಕೆ ಎಂಬ ಪ್ರಶ್ನೆ ಉದ್ಭವಿಸಿದೆ.
- Home
- News
- State
- Karnataka News Live: Viral News - ತಿಥಿ ದಿನವೇ ಪ್ರತ್ಯಕ್ಷವಾಯ್ತು ಹೆಣ; ದಂಗಾದ ಗ್ರಾಮಸ್ಥರು! ಈ ಘಟನೆ ಲೋಕಿಕವೇ, ಅಲೌಕಿಕವೇ?
Karnataka News Live: Viral News - ತಿಥಿ ದಿನವೇ ಪ್ರತ್ಯಕ್ಷವಾಯ್ತು ಹೆಣ; ದಂಗಾದ ಗ್ರಾಮಸ್ಥರು! ಈ ಘಟನೆ ಲೋಕಿಕವೇ, ಅಲೌಕಿಕವೇ?

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಿಡಬ್ಲ್ಯುಸಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಹೈಕಮಾಂಡ್ ನಾಯಕರೊಂದಿಗೆ ಸೋಮವಾರ ಇಲ್ಲವೇ ಮಂಗಳವಾರ ಮಹತ್ವದ ಸಭೆ ನಡೆಸಲಿದ್ದಾರೆ. ಹೈಕಮಾಂಡ್ ನಾಯಕರೊಂದಿಗೆ ಸಭೆಗೆ ಇನ್ನೂ ನಿರ್ದಿಷ್ಟ ಸಮಯ ನಿಗದಿಯಾಗಿಲ್ಲ, ಸೋಮವಾರ ನಿಗದಿಯಾಗಲಿದೆ. ಒಂದು ವೇಳೆ ಸೋಮವಾರ ಸಮಯ ನಿಗದಿಯಾಗದಿದ್ದಲ್ಲಿ ಮಂಗಳವಾರ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ. ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯೇ ಮೂವರೂ ನಾಯಕರು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ರಾಜ್ಯ ಎಂಪಿಗಳ ಜತೆ ಸಿಎಂ ಸಭೆ
ಇನ್ನೊಂದೆಡೆ ಕೇಂದ್ರ ಸರ್ಕಾರದಲ್ಲಿ ಬಾಕಿ ಇರುವ ರಾಜ್ಯದ ಯೋಜನೆಗಳು ಸೇರಿ ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಎಲ್ಲಾ ಸಂಸದರು, ರಾಜ್ಯಸಭಾ ಸದಸ್ಯರೊಂದಿಗೆ ನವದೆಹಲಿಯಲ್ಲಿ ಸೋಮವಾರ ಸಂಜೆ ಸಭೆ ನಡೆಸಲಿದ್ದಾರೆ. ಸೋಮವಾರ ಬೆಳಗ್ಗೆಯೇ ಬೆಂಗಳೂರಿನಿಂದ ದೆಹಲಿಗೆ ತೆರಳುವ ಮುಖ್ಯಮಂತ್ರಿ ಅವರು, ಸಂಜೆ ಸಂಸದರೊಂದಿಗೆ ಸಭೆ ನಡೆಸಲಿದ್ದಾರೆ.
Karnataka News Live Viral News - ತಿಥಿ ದಿನವೇ ಪ್ರತ್ಯಕ್ಷವಾಯ್ತು ಹೆಣ; ದಂಗಾದ ಗ್ರಾಮಸ್ಥರು! ಈ ಘಟನೆ ಲೋಕಿಕವೇ, ಅಲೌಕಿಕವೇ?
Karnataka News Live ಬಾತ್‌ರೂಮ್‌ನಲ್ಲೇ ಅಡಗಿದ್ದ ಚಿರತೆ, ಸಾವಿನ ದವಡೆಯಿಂದ ಪಾರಾದ ಬೆಳಗಾವಿ ಮಹಿಳೆ!
ಖಾನಾಪುರ ತಾಲೂಕಿನ ಗುಂಜಿ ಗ್ರಾಮದಲ್ಲಿ, ಮನೆಯೊಂದರ ಶೌಚಾಲಯದಲ್ಲಿ ರಾತ್ರಿಯಿಡೀ ಅಡಗಿದ್ದ ಚಿರತೆಯೊಂದು ಬೆಳಿಗ್ಗೆ ಮಹಿಳೆಯೊಬ್ಬರ ಮೇಲೆ ದಾಳಿಗೆ ಯತ್ನಿಸಿದೆ. ಅದೃಷ್ಟವಶಾತ್ ಮಹಿಳೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
Karnataka News Live Mandya - ಗಾಳಿ-ಬೆಳಕು ಸೋಂಕಿಲ್ಲದೇ ಬರುವ ಸಾವಯವ ಹಾಲು; ಬೆಂಗಳೂರು, ಹೈದರಾಬಾದ್‌ನಲ್ಲಿ ಮಾರುಕಟ್ಟೆ
Karnataka News Live 58 ವಿದ್ಯಾರ್ಥಿಗಳಿಗೆ 5 ಲಕ್ಷ ರು. ಸ್ಕಾಲರ್‌ಶಿಪ್ ವಿತರಣೆ; ಮಕ್ಕಳ ಕನಸಿಗೆ ಸಿಕ್ತು ಬಲ
ರೋಟರಿ ಕ್ಲಬ್, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮತ್ತು ಭದ್ರಾ ಗ್ಯಾಸ್ ಏಜೆನ್ಸಿ ಸಹಯೋಗದಲ್ಲಿ 58 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ರೋಟರಿ ಕ್ಲಬ್‌ನ 58ನೇ ಹಾಗೂ ಭದ್ರಾ ಗ್ಯಾಸ್ ಏಜೆನ್ಸಿಯ 40ನೇ ವರ್ಷದ ಅಂಗವಾಗಿ ಒಟ್ಟು 5 ಲಕ್ಷ ರೂಪಾಯಿ ಮೊತ್ತದ ಸ್ಕಾಲರ್‌ಶಿಪ್ ನೀಡಲಾಯಿತು.
Karnataka News Live Bengaluru - ಹುಸ್ಕೂರು ಗೇಟ್ ಮೆಟ್ರೋ ಸ್ಟೇಷನ್‌ನಲ್ಲಿ ಹಳಿಗೆ ಜಿಗಿದು ಪತ್ರಕರ್ತ ರಾಜೇಶ್ ಹೀರೇಮಠ್ ಸಾವು
Karnataka News Live Team india - ಗೌತಮ್ ಗಂಭೀರ್ ಇನ್‌ಸ್ಟಾಗ್ರಾಮ್ ಪೋಸ್ಟ್ ವಿವಾದ; ಸಂಕಷ್ಟದಲ್ಲಿ ಗೌತಿ ಹುದ್ದೆ!
ಗಂಭೀರ ವ್ಯಕ್ತಿತ್ವಕ್ಕೆ ಹೆಸರಾದ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಇನ್‌ಸ್ಟಾಗ್ರಾಮ್ ಖಾತೆಯ ಪೊಸ್ಟ್‌ನೊಂದಿಗೆ ಹೊಸ ವಿವಾದವೊಂದನ್ನು ತಳಕು ಹಾಕಿಕೊಂಡಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live ಬುಕ್ ಮಾಡಿದ್ದೇ ಒಂದು ಆಟೊ, ಬಂದಿದ್ದೇ ಇನ್ನೊಂದು - ನಂಬರ್ ಚೇಂಜ್ ಇದ್ರೆ ಹತ್ತಲೇಬೇಡಿ- ಕಮಿಷನರ್ ಖಡಕ್ ಎಚ್ಚರಿಕೆ
Karnataka News Live 'ತಾಜ್‌ಮಹಲ್' ಬಳಿಕ ಮತ್ತೆ ಕನ್ನಡಕ್ಕೆ ಕುನಾಲ್ ಗಾಂಜಾವಾಲ - ಅಜಯ್ ರಾವ್ 'ಪಾರ್ಟ್ನರ್' ಹಾಡಿಗೆ ಧ್ವನಿ
ಸಂಗೀತ ಪ್ರಿಯರ ಪಾಲಿಗೆ ಇಂದಿಗೂ ವಿಶೇಷ ಸ್ಥಾನ ಪಡೆದಿರುವ 'ಖುಷಿಯಾಗಿದೆ ಏಕೋ ನಿನ್ನಿಂದಲೆ' ಹಾಡು ಕೇಳಿದಾಗ ಪ್ರೇಮ, ಕಾಲೇಜು ದಿನಗಳು ಹಾಗೂ ಕೃಷ್ಣ ಅಜಯ್ ರಾವ್ ಅವರ ನೆನಪಿನ ಪಾತ್ರಗಳು ಕಣ್ಣ ಮುಂದೆ ಬರುತ್ತವೆ.
Karnataka News Live ಬಾಕಿ ವಸೂಲಿಯಾಗದಿದ್ದರೂ KSMCL ಕಂಪನಿಗೆ ಜಾಕ್‌ಪಾಟ್ - ಬಳ್ಳಾರಿಯಲ್ಲಿ 47 ಎಕರೆ ಅರಣ್ಯ ಭೂಮಿ ಬಳಕೆಗೆ ಕೇಂದ್ರದ ಗ್ರೀನ್ ಸಿಗ್ನಲ್!
ರಾಜ್ಯ ಸರ್ಕಾರದ KSMCL ಸಂಸ್ಥೆಯು ₹136 ಕೋಟಿಗೂ ಅಧಿಕ ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದರೂ, ಬಳ್ಳಾರಿಯಲ್ಲಿ ಕನ್ವೇಯರ್ ಬೆಲ್ಟ್ ನಿರ್ಮಾಣಕ್ಕೆ 47 ಎಕರೆ ಅರಣ್ಯ ಭೂಮಿ ಬಳಸಲು ಕೇಂದ್ರ ಪರಿಸರ ಸಚಿವಾಲಯದಿಂದ ಅನುಮೋದನೆ ಪಡೆದಿದೆ.
Karnataka News Live ಕನ್ನಡಕ್ಕೆ ಪಾರುಲ್ ಯಾದವ್ ಗ್ರ್ಯಾಂಡ್ ಕಂಬ್ಯಾಕ್ - ಕಾರ್ತಿಕ್ ಮಹೇಶ್ ಜೊತೆ ಹೊಸ ಸಿನಿಮಾ
ದೀರ್ಘ ವಿರಾಮದ ಬಳಿಕ ನಟಿ ಪಾರುಲ್ ಯಾದವ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ನಿರ್ದೇಶಕ ಪನ್ನಗಾಭರಣ ಅವರ ಹೊಸ ಕಾಮಿಡಿ ಎಂಟರ್‌ಟೈನರ್ ಚಿತ್ರದ ಮೂಲಕ ಪಾರುಲ್ ಕಂಬ್ಯಾಕ್ ಮಾಡುತ್ತಿದ್ದಾರೆ.
Karnataka News Live ರಿಷಬ್ ಶೆಟ್ಟಿ 'ಶಿವಾಜಿ' ಸಿನಿಮಾಗೆ ಭೂಮಿ ಪೆಡ್ನೇಕರ್ ಎಂಟ್ರಿ - ಬೆಳವಡಿ ಮಲ್ಲಮ್ಮ ಪಾತ್ರದಲ್ಲಿ ಬಾಲಿವುಡ್ ನಟಿ
'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ತಂಡಕ್ಕೆ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
Karnataka News Live ಬೆಂಗಳೂರು ಟ್ರಾಫಿಕ್ ದಟ್ಟಣೆಗೆ ಮುಕ್ತಿ ನೀಡಲು ಕಾರ್ ಪೂಲಿಂಗ್ ಇನ್ನು ಅಧಿಕೃತ? ಸರ್ಕಾರಕ್ಕೆ ಬಿಟಿಪಿ 5 ಪ್ರಮುಖ ಪ್ರಸ್ತಾವನೆ!
ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆಯನ್ನು ನಿವಾರಿಸಲು, ಬೆಂಗಳೂರು ನಗರ ಸಂಚಾರ ಪೊಲೀಸರು 'ನಿಯಂತ್ರಿತ ಕಾರ್ ಪೂಲಿಂಗ್' ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ಒಟ್ಟು 5 ಪ್ರಮುಖ ಪ್ರಸ್ತಾವನೆಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಅನುಮೋದನೆಗಾಗಿ ಕಾಯುತ್ತಿದ್ದಾರೆ.
Karnataka News Live Gold Medal - ನಮ್ಮ ಬೀದರ್‌ಗೆ ಕೂಗಳತೆ ದೂರದ ಊರಿನ ಹೆಣ್ಣುಮಗಳು ಈಗ ದೇಶದ ಹೆಮ್ಮೆ; 21ರ ಹರೆಯದಲ್ಲೇ 'ಚಿನ್ನ' ಗೆದ್ದು ಮನು ಭಾಕರ್‌ರನ್ನೇ ಹಿಂದಿಕ್ಕಿದ ಗೋಲ್ಡನ್ ಗರ್ಲ್!
ಬೀದರ್ ಸಮೀಪದ, ಚಾಲಕನ ಮಗಳಾದ 21ರ ಹರೆಯದ ಇಶಾ, ಶೂಟಿಂಗ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ. ISSF ವಿಶ್ವಕಪ್‌ನಲ್ಲಿ ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಅವರನ್ನು ಹಿಂದಿಕ್ಕಿ ಚಿನ್ನ ಗೆದ್ದ ಇವರು, ಏಷ್ಯನ್ ಗೇಮ್ಸ್‌ನಲ್ಲೂ ನಾಲ್ಕು ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
Karnataka News Live ಸ್ಪೈಡರ್ ಮ್ಯಾನ್ ಪ್ರಪಂಚಕ್ಕೆ ರಿಷಬ್ ಶೆಟ್ಟಿ ಎಂಟ್ರಿ - ಸೋನಿ ಪಿಕ್ಚರ್ಸ್ ಜೊತೆ ಕೈಜೋಡಿಸಿದ ಭಾರತದ ಮೊದಲ ನಟ!
Spider Man Brand New Day India: 'ಕಾಂತಾರ' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
Karnataka News Live ಹಾವುಗಳು ನಾಗಸ್ವರಕ್ಕೆ ಶರಣಾಗುತ್ತವೆಯೇ? ನೂರಾರು ವರ್ಷಗಳ ಭ್ರಮೆ ಹಿಂದಿರುವ ಅಚ್ಚರಿಯ ವಿಜ್ಞಾನ ಇಲ್ಲಿದೆ
ಹಾವು ನಾಗಸ್ವರಕ್ಕೆ ಕುಣಿಯುವುದು ಮಂತ್ರದ ಶಕ್ತಿಯೂ ಅಲ್ಲ ಅಥವಾ ಸಂಗೀತದ ಮಹಿಮೆಯೂ ಅಲ್ಲ. ಅದು ಕೇವಲ ಒಂದು ಜೀವಿಯ ರಕ್ಷಣಾತ್ಮಕ ನಡವಳಿಕೆ ಮಾತ್ರ. ಪ್ರಕೃತಿಯ ಈ ಅದ್ಭುತ ಜೀವಿಗಳನ್ನು ಅವುಗಳ ಪಾಡಿಗೆ ಕಾಡಿನಲ್ಲಿ ಬದುಕಲು ಬಿಡುವುದೇ ನಾವು ಅವಕ್ಕೆ ನೀಡುವ ಗೌರವ
Karnataka News Live 'ಹುಚ್ಚು ಹುಚ್ಚರ ಥರ..' ಹೇಳಿಕೆ ಬಳಿಕ ಬಿಗ್ ಬಾಸ್ ಧ್ರುವಂತ್‌ಗೆ ಟ್ರೋಲ್ ಕಾಟ - ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ
ಕಿರುತೆರೆ ನಟ ಧ್ರುವಂತ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ನಿರಂತರವಾಗಿ ಅವಾಚ್ಯ, ಅಶ್ಲೀಲ ಹಾಗೂ ಮಾನಹಾನಿಕಾರಕ ಪೋಸ್ಟ್‌ಗಳನ್ನು ಪ್ರಕಟಿಸುತ್ತಿರುವ ಟ್ರೋಲರ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
Karnataka News Live Nitin Gadkari - ಮೆಟಾ, ಎಕ್ಸ್ ಮತ್ತು ಗೂಗಲ್ ವಿರುದ್ಧ ಪ್ರಕರಣ ದಾಖಲಿಸಿದ ಗಡ್ಕರಿ! ತಪ್ಪಿತಸ್ಥರೆಂದು ಸಾಬೀತಾದರೆ ಯಾರಿಗೆ ಶಿಕ್ಷೆ!
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು,ಬಾಂಬೆ ಹೈಕೋರ್ಟ್‌ನಲ್ಲಿ ಮೆಟಾ, ಗೂಗಲ್, ಮತ್ತು ಎಕ್ಸ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಸಾಮಾಜಿಕ ಜಾಲತಾಣ ದೈತ್ಯರ ಹೊಣೆಗಾರಿಕೆಯನ್ನು ಪ್ರಶ್ನಿಸಿದ್ದೇಕೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!
Karnataka News Live Amruthadhaare Serial - ಮಲ್ಲಿ ಖಡಕ್ ಎಂಟ್ರಿ! ಜೈದೇವ್ ಸಿಕ್ಕಿ ಬಿದ್ನಾ? ಮಗನ ಜೊತೆ ಶಕುಂತಲಾಗೂ ಜೈಲೂಟ ಗ್ಯಾರಂಟಿನಾ?
"ಕಥೆ ಎಳೆಯೋ ಬದಲು, ಎಲ್ಲರೂ ಸುಖವಾಗಿದ್ದಾಗಲೇ ಮುಗಿಸಿಬಿಡಿ" ಎಂಬ ಕೂಗು ಒಂದೆಡೆಯಾದರೆ, "ಭೂಮಿಕಾ ಸಾವನ್ನಪ್ಪಬಾರದು, ಚಮತ್ಕಾರ ನಡೆಯಬೇಕು" ಎನ್ನುವ ಹಂಬಲ ಇನ್ನೊಂದೆಡೆ. ಮುಂದೇನಾಗುತ್ತೆ? ಈ ಸ್ಟೋರಿ ನೋಡಿ..