Ranjani Raghavan: ಕಿರುತೆರೆಯ ಜನಪ್ರಿಯ ನಟಿ, ಲೇಖಕಿ ಹಾಗೂ ನಿರ್ದೇಶಕಿಯಾಗಿ ಹೊಸ ಅಧ್ಯಾಯ ಆರಂಭಿಸಿರುವ ರಂಜನಿ ರಾಘವನ್ ಇದೀಗ ಇಟಲಿಯ ಸುಂದರ ತಾಣಗಳಲ್ಲಿ ಸೋಲೋ ಟ್ರಿಪ್ ಎಂಜಾಯ್ ಮಾಡಿ ಬಂದಿದ್ದಾರೆ.
- Home
- News
- State
- Karnataka News Live: 'ಡೀ ಡೀ ಢಿಕ್ಕಿ' ಕೆಲಸದ ನಡುವೆ ಸೋಲೋ ಇಟಲಿ ಟ್ರಿಪ್ - 'ಕನ್ನಡತಿ' ನಟಿಯ ಫೋಟೋಗಳು ವೈರಲ್!
Karnataka News Live: 'ಡೀ ಡೀ ಢಿಕ್ಕಿ' ಕೆಲಸದ ನಡುವೆ ಸೋಲೋ ಇಟಲಿ ಟ್ರಿಪ್ - 'ಕನ್ನಡತಿ' ನಟಿಯ ಫೋಟೋಗಳು ವೈರಲ್!

ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿಯ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಕಲಬುರಗಿಯಲ್ಲಿ ವಿಭಾಗ ಮಟ್ಟದ ಸಭೆ ಕರೆದಿದ್ದು, ಬರ ಪರಿಸ್ಥಿತಿ ಕುರಿತು ಸಮಗ್ರ ಚರ್ಚೆ ನಡೆಸುತ್ತೇವೆ. ಅಲ್ಲದೆ, ಎಲ್ಲಾ ಜಿಲ್ಲೆಗಳಿಂದ ವರದಿ ತರಿಸಿಕೊಂಡು, ಪರಿಶೀಲನೆ ನಡೆಸಿದ ಬಳಿಕ ‘ಬರಗಾಲ ಘೋಷಣೆ’ ಮಾಡುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬರ ಘೋಷಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮಳೆ ಕೊರತೆಯ ಆತಂಕ ಎದುರಾಗಿದ್ದರೂ ಬರ ಘೋಷಣೆ ಮಾಡುವ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಒಂದೇ ದಿನದಲ್ಲಿ ಬರ ಘೋಷಣೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಮತ್ತು ರಾಜ್ಯದ ಮಾರ್ಗಸೂಚಿಗಳ ಪ್ರಕಾರ ಸಮೀಕ್ಷೆ ನಡೆಸಿ, ಬೆಳೆ ಹಾನಿ ಹಾಗೂ ನೀರಿನ ಕೊರತೆಯ ವರದಿ ಆಧರಿಸಿ ಬರ ಘೋಷಣೆ ಮಾಡಬೇಕಾಗುತ್ತದೆ. ಅದಕ್ಕೆ ಕಾಲಾವಕಾಶ ಬೇಕು. ಉತ್ತರ ಕರ್ನಾಟಕ ಭಾಗದ ಬರ ಕುರಿತಂತೆ ಕಲಬುರಗಿಯಲ್ಲಿ ಮಂಗಳವಾರ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆಯುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.
Karnataka News Live 7 July 2026 'ಡೀ ಡೀ ಢಿಕ್ಕಿ' ಕೆಲಸದ ನಡುವೆ ಸೋಲೋ ಇಟಲಿ ಟ್ರಿಪ್ - 'ಕನ್ನಡತಿ' ನಟಿಯ ಫೋಟೋಗಳು ವೈರಲ್!
Karnataka News Live 7 July 2026 'ನೀವು ನೀವಾಗಿ ಇರುವುದಕ್ಕೇ ಧನ್ಯವಾದಗಳು' - ಪತಿ ರಿಷಬ್‌ಗೆ ಪತ್ನಿ ಪ್ರಗತಿ ಶೆಟ್ಟಿ ಹೃದಯಸ್ಪರ್ಶಿ ಶುಭಾಶಯ
ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು, ಸಿನಿತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
Karnataka News Live 7 July 2026 Rishab Shetty - 'ಜೈಹನುಮಾನ್' ತೆಲುಗು ಅಲ್ಲ, ಕನ್ನಡ ಸಿನಿಮಾ; ಮಾರ್ಮಿಕ ಕ್ಲಾರಿಟಿ ಕೊಟ್ಟ ರಿಷಬ್ ಶೆಟ್ಟಿ!
'ಮೊಟ್ಟೆ ಮೊದ್ಲಾ ಕೋಳಿ ಮೊದ್ಲಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಕೊಟ್ರೆ ಜನ ನೋಡ್ತಿಲ್ವಾ, ಜನ ನೋಡೋದಕ್ಕೆ ಒಳ್ಳೆ ಸಿನಿಮಾ ಕೊಡ್ತಿಲ್ವಾ ಎನ್ನುವಂತಾಗಿದೆ. ಒಳ್ಳೆ ಸಿನಿಮಾ ಬಂದಾಗ ಜನ ನೋಡ್ತಾರೆ. 'ಸು ಫ್ರಂ ಸೋ' ಸಿನಿಮಾ ಬಂದಾಗ ಎಲ್ಲಾ ನುಗ್ಗಿ ನೋಡಿದ್ರು. ಜೆಪಿ ತುಮ್ಮಿನಾಡು ಹೊಸ ನಿರ್ದೇಶಕರು.
Karnataka News Live 7 July 2026 ಬೆಂಗಳೂರಿನ ಮಂತ್ರಿಮಾಲ್ ಹಿಂಭಾಗದಲ್ಲಿ 5.5 ಕೋಟಿ ವೆಚ್ಚದಲ್ಲಿ ಪಾದಾಚಾರಿ ಸಬ್‌ವೇ ನಿರ್ಮಾಣ!
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಲ್ಲೇಶ್ವರಂನಲ್ಲಿ ₹5.5 ಕೋಟಿ ವೆಚ್ಚದ ಪಾದಚಾರಿ ಸುರಂಗ ಮಾರ್ಗ ನಿರ್ಮಾಣವನ್ನು ಘೋಷಿಸಿದ್ದಾರೆ. ಇದರೊಂದಿಗೆ, ರಾಮೋಹಳ್ಳಿ ಗೇಟ್ ಅಂಡರ್‌ಬ್ರಿಡ್ಜ್, ಕಂಟೋನ್ಮೆಂಟ್ ಮತ್ತು ಯಶವಂತಪುರ ನಿಲ್ದಾಣಗಳ ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದ್ದಾರೆ.
Karnataka News Live 7 July 2026 Rent Me for a Day - ದಿನಕ್ಕೆ ಬಾಡಿಗೆಗೆ ಸಿಗ್ತೀನಿ ಎಂದ ಯುವತಿ! ಕಾಫಿ, ಸಿನಿಮಾಗೆ ಇಷ್ಟೊಂದಾ ರೇಟು?
Karnataka News Live 7 July 2026 64 ದಿನಗಳಲ್ಲಿ ಅಂಜನಾದ್ರಿ ದೇವಸ್ಥಾನದ ಹುಂಡಿಯಲ್ಲಿ ₹71.77 ಲಕ್ಷ ಕಾಣಿಕೆ - ವಿದೇಶಿ ಕರೆನ್ಸಿಯೂ ಪತ್ತೆ
ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ತೆರೆಯುವ ಕಾರ್ಯ ಶುಕ್ರವಾರ (ಜುಲೈ 3) ಪೊಲೀಸ್ ಭದ್ರತೆ ಹಾಗೂ ಸಿಸಿಟಿವಿ ಕಣ್ಗಾವಲಿನ ನಡುವೆ ನಡೆಯಿತು.
Karnataka News Live 7 July 2026 ಪ್ರಜ್ವಲ್ ದೇವರಾಜ್ ಒಳ್ಳೆಯವರು ಅಂತಾ ಯಾರಾದ್ರೂ ಆಸ್ಕರ್ ಅವಾರ್ಡ್ ಕೊಟ್ಟಿದ್ದೀರಾ?.. ಕರಾವಳಿ ಚಿತ್ರತಂಡದ ವಿರುದ್ಧ ಫ್ಯಾನ್ಸ್ ಆಕ್ರೋಶ
'ಕರಾವಳಿ' ಚಿತ್ರದ ಟ್ರೈಲರ್‌ನಲ್ಲಿ ನಾಯಕ ಪ್ರಜ್ವಲ್ ದೇವರಾಜ್ ಅವರ ಧ್ವನಿ ಇಲ್ಲದಿರುವುದು ಮತ್ತು ಕಳಪೆ ಸ್ಕ್ರೀನ್ ಪ್ರೆಸೆನ್ಸ್‌ಗೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ಬೇಜವಾಬ್ದಾರಿತನದಿಂದ ಅಭಿಮಾನಿಗಳು ನೊಂದಿದ್ದಾರೆ.
Karnataka News Live 7 July 2026 ₹35 ಲಕ್ಷ ಸಂಬಳ... ಆದರೆ ಬ್ಯಾಂಕ್ ಖಾತೆಗೆ ಮಾತ್ರ ಇಷ್ಟು! SBI ಮ್ಯಾನೇಜರ್ ಸ್ಯಾಲರಿ ವೈರಲ್!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಎಸ್‌ಬಿಐ ಮ್ಯಾನೇಜರ್ ಅವರ ₹35.24 ಲಕ್ಷ ವಾರ್ಷಿಕ ಗ್ರಾಸ್ ಸಂಬಳವು, ಕೈಗೆ ಸಿಗುವ ನಿಜವಾದ ಆದಾಯವಲ್ಲ. ಇದರಲ್ಲಿ ಲೀವ್ ಎನ್‌ಕ್ಯಾಶ್‌ಮೆಂಟ್‌ನಂತಹ ಒಂದು ಬಾರಿ ಸಿಗುವ ಭತ್ಯೆಗಳು ಸೇರಿವೆ. ಆದಾಯ ತೆರಿಗೆ, ಇಪಿಎಫ್, ಎನ್‌ಪಿಎಸ್ ಮತ್ತು ಸಾಲದ ಕಡಿತಗಳ ನಂತರ ಅಂತಿಮ ಸಂಬಳ ಖಾತೆಗೆ ಜಮೆಯಾಗುವುದರಿಂದ, ಕೈಗೆ ಸಿಗುವ ಮೊತ್ತ ಗಣನೀಯವಾಗಿ ಕಡಿಮೆಯಿರುತ್ತದೆ.
Karnataka News Live 7 July 2026 'ಮಧ್ಯರಾತ್ರಿ ಟ್ರೈಲರ್ ನೋಡಿದಾಗ ಶಾಕ್ ಆಯ್ತು, ನನ್ನ ಧ್ವನಿಯೇ ಇರಲಿಲ್ಲ' - ಕರಾವಳಿ ವಿವಾದದ ಸತ್ಯ ಬಿಚ್ಚಿಟ್ಟ ಪ್ರಜ್ವಲ್ ದೇವರಾಜ್!
'ಕರಾವಳಿ' ಚಿತ್ರದ ಟ್ರೈಲರ್ ವಿವಾದದ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಮೌನ ಮುರಿದಿದ್ದಾರೆ. ಚಿತ್ರತಂಡ ಸಂಭಾವನೆ ಬಾಕಿ ಉಳಿಸಿಕೊಂಡಿದ್ದರಿಂದ ಡಬ್ಬಿಂಗ್ ಮಾಡಿರಲಿಲ್ಲ ಮತ್ತು ಕಾರ್ಯಕ್ರಮಕ್ಕೆ ಗೈರಾಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
Karnataka News Live 7 July 2026 ವಾರಕ್ಕೆ 20 ಸಲನಾ? ಲವ್‌ನಲ್ಲಿ ನೀವು ಯಾವ ಟೈಪ್? ಹೊಸ ಅಧ್ಯಯನ ಹೇಳಿದ ಸೀಕ್ರೆಟ್ ಏನು?
ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯ (ANU) ಸಂಶೋಧಕ ಆಡಮ್ ಬೋಡ್ ಮತ್ತು ಅವರ ತಂಡ ಈ ಅಧ್ಯಯನ ನಡೆಸಿದೆ. ಪ್ರಪಂಚದಾದ್ಯಂತ ಪ್ರೀತಿಯಲ್ಲಿರುವ 1,556 ಜನರಿಂದ ಡೇಟಾ ಸಂಗ್ರಹಿಸಿದೆ.
Karnataka News Live 7 July 2026 ಕೊಡಗು ಶಾಲೆಗಳಿಗೆ ನಾಳೆ ರಜೆ, ಭಾರಿ ಮಳೆಯಿಂದ ಆರೇಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಕೊಡಗು ಶಾಲೆಗಳಿಗೆ ನಾಳೆ (ಜು.08) ರಜೆ ಘೋಷಿಸಲಾಗಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಎಚ್ಚರಿಕೆ ನೀಡಿದೆ.
Karnataka News Live 7 July 2026 'ನಮ್ ಇಂಡಸ್ಟ್ರಿ ಯಾಕೆ ಉದ್ದಾರ ಆಗಲ್ಲ ಅಂದ್ರೆ ಇದೇ ಕಾರಣ..' ಕರಾವಳಿ ವೇದಿಕೆಯಲ್ಲೇ ರಾಜ್ ಬಿ ಶೆಟ್ಟಿ ಕಿಡಿಕಿಡಿ
'ಕರಾವಳಿ' ಸಿನಿಮಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳ ಪ್ರತಿಭಟನೆಯಿಂದ ವಿವಾದ ಭುಗಿಲೆದ್ದಿದೆ. ಈ ಕುರಿತು ಮಾತನಾಡಿದ ನಟ ರಾಜ್ ಬಿ. ಶೆಟ್ಟಿ, ಚಿತ್ರತಂಡದ ವಿರುದ್ಧದ ಪಿತೂರಿ ಹಾಗೂ ಪ್ರಜ್ವಲ್ ದೇವರಾಜ್ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
Karnataka News Live 7 July 2026 ಬಳ್ಳಾರಿಯಲ್ಲಿ ಡಬಲ್ ಮರ್ಡರ್ - ಪತ್ನಿ-ಮಾವನನ್ನು ಚಾಕುವಿನಿಂದ ಕೊಂದ ಪತಿರಾಯ!
ಪತ್ನಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಪತಿಯೊಬ್ಬ, ರಾಜೀ ಪಂಚಾಯಿತಿ ಮಾಡಲು ಬಂದಿದ್ದ ಮಾವನೊಂದಿಗೆ ತನ್ನ ಪತ್ನಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹ*ತ್ಯೆ ಮಾಡಿರುವ ಘಟನೆ ನಡೆದಿದೆ.
Karnataka News Live 7 July 2026 ಸ್ಯಾಂಡಲ್‌ವುಡ್ ಕರಾವಳಿಯಲ್ಲಿ ಫುಲ್ 'ವರಿ', ಪ್ರಜ್ವಲ್ ದೇವರಾಜ್ ವೈಮನಸ್ಯಕ್ಕೆ ಹಣವೊಂದೇ ಕಾರಣವೇ?
'ಕರಾವಳಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಸಂಭಾವನೆ ವಿಚಾರವಾಗಿ ನಾಯಕ ಪ್ರಜ್ವಲ್ ದೇವರಾಜ್ ಮತ್ತು ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಈ ಒಳಜಗಳವು ಚಿತ್ರದ ಡಬ್ಬಿಂಗ್ ಮತ್ತು ನಿಗದಿತ ಬಿಡುಗಡೆಯ ಮೇಲೆ ಪರಿಣಾಮ ಬೀರಿದ್ದು, ಚಿತ್ರದ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳಿದೆ.
Karnataka News Live 7 July 2026 ಪಾಕಿಸ್ತಾನಿ ಬ್ಯೂಟಿ ಕ್ರೀಮ್ ಬಳಸಿದ ಪುಣೆಯ 18 ಮಹಿಳೆಯರ ಕಿಡ್ನಿ ವೈಫಲ್ಯ! ಲ್ಯಾಬ್ ಪರೀಕ್ಷೆ ವೇಳೆ ವೈದ್ಯರಿಗೆ ಶಾಕ್
ಪಾಕಿಸ್ತಾನ ಮೂಲದ 'ಗೋರಿ ಬ್ಯೂಟಿ ಕ್ರೀಮ್' ಬಳಸಿ 18 ಮಹಿಳೆಯರು ತೀವ್ರ ಕಿಡ್ನಿ ಸಮಸ್ಯೆಗೆ ತುತ್ತಾಗಿದ್ದಾರೆ. ಈ ಕ್ರೀಮ್‌ನಲ್ಲಿ ಕಾನೂನು ಮಿತಿಗಿಂತ 752 ಪಟ್ಟು ಹೆಚ್ಚು ಪಾದರಸ ಪತ್ತೆಯಾಗಿದ್ದು, ಮಹಾರಾಷ್ಟ್ರ ಎಫ್‌ಡಿಎ ಇದನ್ನು ಅಸುರಕ್ಷಿತ ಎಂದು ಘೋಷಿಸಿ ನಿಷೇಧಿಸಿದೆ.
Karnataka News Live 7 July 2026 ಹುಟ್ಟುಹಬ್ಬದ ದಿನವೇ ಹ*ತ್ಯೆಯಾದ ಪುತ್ರ, ಕಣ್ಣೀರಿಟ್ಟು ತಾಯಿಯ ಗೋಳಾಟ - ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ
ಹುಟ್ಟುಹಬ್ಬದ ಸಂಭ್ರಮ ಇರಬೇಕಿದ್ದ ದಿನವೇ ತಾಯಿಯ ಮಡಿಲಿಗೆ ಮಗನ ಮೃತದೇಹ ಬಂದಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್‌ನಲ್ಲಿ ನಡೆದಿದೆ. ಬಂಡಿಹೊಳೆ ಗ್ರಾಮದ ಯುವಕ ರಾಕೇಶ್ ಬರ್ಬರವಾಗಿ ಹ*ತ್ಯೆಯಾಗಿದ್ದಾನೆ.
Karnataka News Live 7 July 2026 ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮಲ್ಲೇಶ್ವರದ ಫುಟ್‌ಪಾತ್ ವ್ಯಾಪಾರಿಗಳಿಂದ ತಲಾ 5 ಸಾವಿರ ವಸೂಲಿ!
ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ನಡೆದಿದ್ದು, ಸಂತ್ರಸ್ತ ಬೀದಿ ಬದಿ ವ್ಯಾಪಾರಿಗಳು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಹೋರಾಟದ ವೆಚ್ಚಕ್ಕಾಗಿ ಹಣ ಸಂಗ್ರಹಿಸಲಾಗುತ್ತಿದ್ದು, ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ.
Karnataka News Live 7 July 2026 'ಕೋಪವೇ ವಿರಾಟ್ ಕೊಹ್ಲಿಯ ಟೆಸ್ಟ್ ವಿದಾಯಕ್ಕೆ ಕಾರಣ?' ಕಪಿಲ್ ದೇವ್ ಶಾಕಿಂಗ್ ಹೇಳಿಕೆ
Kapil Dev on Virat Kohli's Test Retirement: ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಬೇಗ ನಿವೃತ್ತಿ ಘೋಷಿಸಿದ್ದಾರೆ ಎಂದು ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ. ಕೋಪದಲ್ಲಿ ನಿರ್ಧಾರ ಕೈಗೊಳ್ಳಬಾರದು ಎಂದು ಸಲಹೆ ನೀಡಿದ ಅವರು, ಕೊಹ್ಲಿ ಇನ್ನೂ ಕೆಲವು ವರ್ಷ ಭಾರತಕ್ಕಾಗಿ ಟೆಸ್ಟ್ ಆಡಬಹುದಿತ್ತು ಎಂದಿದ್ದಾರೆ.
Karnataka News Live 7 July 2026 'ಭರವಸೆ ಕಳೆದುಕೊಳ್ಳಬೇಡ, ನಾನಿದ್ದೇನೆ' - ಕೃಷಿ ತಾಪಂಡಗೆ ಧೈರ್ಯ ತುಂಬಿದ ರಾಧಾ ರಮಣ ನಟಿ
ಇತ್ತೀಚೆಗೆ ಕೃಷಿ ತಾಪಂಡ, "ಈಗ ನಾನು ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ, ಅದರ ಜೊತೆಗೆ ಬದುಕುವುದನ್ನು ಕಲಿತಿದ್ದೇನೆ" ಎಂದು ಹೃದಯ ಮುರಿದಿರುವ ಎಮೋಜಿಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದರು.
Karnataka News Live 7 July 2026 ರಿಷಬ್ ಶೆಟ್ಟಿ ನೆರವಿನಿಂದ ಬದಲಾದ ಬದುಕು - ಗ್ರಾಮಸ್ಥರಿಂದ ಕಣ್ಣೀರಿನ ಕೃತಜ್ಞತೆ, ವಿಡಿಯೋ ವೈರಲ್
ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇಂದು (ಜುಲೈ 7) ತಮ್ಮ 43ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು, ಸಿನಿ ತಾರೆಯರು ಹಾಗೂ ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.